Social Media Law Violation: ಮೆಟಾ, ಟ್ವಿಟರ್, ಟಿಕ್‌ಟಾಕ್‌ಗೆ ಬಿತ್ತು ಭರ್ಜರಿ ದಂಡ!

By Suvarna News  |  First Published Dec 17, 2021, 1:03 PM IST

*ಕಾನೂನುಬಾಹಿರ ಕಂಟೆಂಟ್‌ ಡೀಲಿಟ್‌ ಮಾಡಲು ವಿಫಲ
*ಮೆಟಾ, ಟ್ವಿಟರ್, ಟಿಕ್‌ಟಾಕ್‌ಗೆ ಭಾರೀ ದಂಡ ವಿಧಿಸಿದ ರಷ್ಯಾ
*ಮೆಟಾ ಪ್ಲಾಟ್‌ಫಾರ್ಮ್‌ಗಳಿಗೆ RUB 13 ಮಿಲಿಯನ್ ದಂಡ!


ರಷ್ಯಾ (ಡಿ. 17): ಕೋಟ್ಯಂತರ ಜನರು ಬಳಸುವ ಸಾಮಾಜಿಕ ಜಾಲತಾಣಗಳ (Social Media) ಮೇಲೆ ನಿಯಂತ್ರಿಸಲು  ಪ್ರಪಂಚದ ಬಹುತೇಕ ದೇಶಗಳು ಹಲವು ಕಾನೂನುಗಳನ್ನು ರೂಪಿಸಿವೆ. ಇಂಥಹ ಕಾನೂನುಗಳು (IT Laws) ಭಾರತದಲ್ಲಿ ಕೂಡ ಜಾರಿಗೊಳಿಸಲಾಗಿದೆ. ದೈತ್ಯ ಸೋಷಿಯಲ್‌ ಮೀಡಿಯಾ ಸಂಸ್ಥೆಗಳು ಈ ಕಾನೂನುಗಳನ್ನು ಪಾಲಿಸುವಲ್ಲಿ ವಿಫಲರಾದಾಗ ಸರ್ಕಾರಗಳು ಭಾರೀ ಮೊತ್ತದ ದಂಡವನ್ನು ವಿಧಿಸುತ್ತವೆ. ಈ ಬೆನ್ನಲ್ಲೇ ರಷ್ಯಾ ಸರ್ಕಾರ ಫೇಸ್‌ಬುಕ್ ಮಾತೃ ಸಂಸ್ಥೆಯಾದ ಮೆಟಾ (Meta), ಟ್ವಿಟರ್ (Twitter) ಹಾಗೂ ಟಿಕ್‌ಟಾಕ್‌ಗೆ (Tiktok) ರಷ್ಯಾ ಗುರುವಾರ ದಂಡ ವಿಧಿಸಿದೆ.

ಸರ್ಕಾರವು ಕಾನೂನುಬಾಹಿರವೆಂದು ನಿರ್ಧರಿಸಿರುವ (Banned Content) ವಿಷಯವನ್ನು ತಮ್ಮ ವೇದಿಕೆಗಳಿಂದ ಡೀಲಿಟ್‌ ಮಾಡಲು ವಿಫಲರಾದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ ಎಂದು ಮಾಸ್ಕೋ ನ್ಯಾಯಾಲಯವು (Moscow's Tagansky District Court) ಹೇಳಿದೆ.  ಮಾಸ್ಕೋ ಈ ವರ್ಷ ದೈತ್ಯ ಟೆಕ್‌ ಕಂಪನಿಗಳ ಮೇಲೆ ಒತ್ತಡವನ್ನು ಹೆಚ್ಚಿಸಿದೆ. ಇದು ಇಂಟರ್ನೆಟ್‌ನ ಮೇಲೆ ಬಿಗಿಯಾದ ನಿಯಂತ್ರಣವನ್ನು ಸಾಧಿಸಲು ರಷ್ಯಾದ ಅಧಿಕಾರಿಗಳು ಮಾಡಿದ ಪ್ರಯತ್ನವೆಂದು ವಿಮರ್ಶಕರು ಅಭಿಪ್ರಯಾ ಪಟ್ಟಿದ್ದಾರೆ. ಇದು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಕಾರ್ಪೊರೇಟ್ ಸ್ವಾತಂತ್ರ್ಯವನ್ನು ಹಿಡಿತಕ್ಕೆ ತೆಗೆದುಕೊಳ್ಳವ ಪ್ರಯತ್ನ ಎಂದು ಹಲವರು ಹೇಳಿದ್ದಾರೆ.

Latest Videos

ಮೆಟಾ ಪ್ಲಾಟ್‌ಫಾರ್ಮ್‌ಗಳಿಗೆ RUB 13 ಮಿಲಿಯನ್ ದಂಡ!

ಮೂರು ಪ್ರತ್ಯೇಕ ಆಡಳಿತಾತ್ಮಕ ಸಂಬಂಧಿತ ಪ್ರಕರಣಗಳಲ್ಲಿ (Administrative Cases) ವಿಷಯವನ್ನು ಅಳಿಸದಿದ್ದಕ್ಕಾಗಿ ಮೆಟಾ ಪ್ಲಾಟ್‌ಫಾರ್ಮ್‌ಗಳಿಗೆ ಒಟ್ಟು RUB 13 ಮಿಲಿಯನ್ (ಸುಮಾರು ರೂ. 1.3 ಕೋಟಿ) ದಂಡ ವಿಧಿಸಲಾಗಿದೆ ಎಂದು ಮಾಸ್ಕೋದ ಟ್ಯಾಗನ್ಸ್ಕಿ ಜಿಲ್ಲಾ ನ್ಯಾಯಾಲಯ ಹೇಳಿದೆ. ರಷ್ಯಾದ ಸುದ್ದಿ ಸಂಸ್ಥೆಗಳ ಪ್ರಕಾರ ಟ್ವಿಟರ್‌ಗೆ ಎರಡು ಪ್ರಕರಣಗಳಲ್ಲಿ 10 ಮಿಲಿಯನ್ ರೂಬಲ್ಸ್ ದಂಡ  ಹಾಗೂ ಟಿಕ್‌ಟಾಕ್‌ಗೆ 4 ಮಿಲಿಯನ್ ರೂಬಲ್ ದಂಡವನ್ನು ವಿಧಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಟ್ವೀಟರ್‌, ಫೇಸ್‌ಬುಕ್ ಮತ್ತು ಟಿಕ್‌ಟಾಕ್‌ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಮೆಟಾ ಹಾಗೂ ಗೂಗಲ್ ಒಟ್ಟಿಗೆ, ರಷ್ಯಾದ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಾಗಿ ಈ ತಿಂಗಳ ಕೊನೆಯಲ್ಲಿ ನ್ಯಾಯಾಲಯದ ಮೊಕದ್ದಮೆಯನ್ನು ಎದುರಿಸಲಿವೆ,. ಜತೆಗೆ ರಷ್ಯಾದಲ್ಲಿ ಕಂಪನಿಗಳ ವಾರ್ಷಿಕ ಆದಾಯದ ಶೇಕಡಾವಾರು ದಂಡವನ್ನು ವಿಧಿಸಬಹುದು ಎಂದು ವರದಿಯಾಗಿದೆ.

ಟ್ವಿಟರ್‌ಗೆ ಚಾಟಿ ಬೀಸಿದೆ ರಷ್ಯಾ ಸರ್ಕಾರ!

ಮಕ್ಕಳ ಅಶ್ಲೀಲತೆ (Child Pornography) , ಮಾದಕ ದ್ರವ್ಯ ಸೇವನೆಯ ಮಾಹಿತಿ ಅಥವಾ ಅಪ್ರಾಪ್ತ ವಯಸ್ಕರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಕರೆಗಳನ್ನು ( calls for minors to commit suicide) ಒಳಗೊಂಡಿರುವ ಪೋಸ್ಟ್‌ಗಳಿಗೆ ದಂಡ ವಿಧಿಸುವ  ಕ್ರಮವಾಗಿ ಮಾರ್ಚ್‌ನಿಂದ ರಷ್ಯಾ ಟ್ವಿಟರ್‌ಗೆ ಚಾಟಿ ಬೀಸಿದೆ ಎಂದು ಸಂವಹನ ನಿಯಂತ್ರಕ ರೋಸ್ಕೊಮ್ನಾಡ್ಜೋರ್ ( Roskomnadzor) ಹೇಳಿದ್ದಾರೆ.

ಕಾನೂನುಬಾಹಿರ ನಡವಳಿಕೆಯನ್ನು ಉತ್ತೇಜಿಸಲು ತನ್ನ ವೇದಿಕೆಯನ್ನು ಬಳಸಲು ಟ್ವೀಟರ್ ಅನುಮತಿಸುವುದಿಲ್ಲ. ಜನವರಿ 1 ರೊಳಗೆ ರಷ್ಯಾದಲ್ಲಿ 13 ವಿದೇಶಿ ಮತ್ತು ಹೆಚ್ಚಾಗಿ ಯುಎಸ್ ತಂತ್ರಜ್ಞಾನ ಕಂಪನಿಗಳನ್ನು (US Technology Companies) ನಿಯಮಗಳನ್ನು ಪಾಲಿಸುವಂತೆ ಒತ್ತಾಯಿಸಿದೆ. ಇಲ್ಲದಿದ್ದರೆ ಸಂಭವನೀಯ ನಿರ್ಬಂಧಗಳು ಅಥವಾ ಸಂಪೂರ್ಣ ನಿಷೇಧಗಳನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಗುರುವಾರ ದಂಡ ವಿಧಿಸಿದ ಮೂರೂ ಕಂಪನಿಗಳು ಆ ಪಟ್ಟಿಯಲ್ಲಿವೆ.

ಇದನ್ನೂ ಓದಿ:

1) WhatsApp Privacy: ಗೌಪ್ಯತೆ ಕಾಪಾಡಲು ವಾಟ್ಸಪ್‌ ಹೊಸ ಅಪ್ಡೇಟ್ಸ: ಥರ್ಡ್‌ ಪಾರ್ಟಿ ಆ್ಯಪ್‌ಗಳಿಗಿಲ್ಲ ಪ್ರವೇಶ!

2) Vehicle Scrap Policy:15 ವರ್ಷಕ್ಕಿಂತ ಹಳೆ ವಾಹನ ಗುಜುರಿಗೆ; ರಸ್ತೆಗಳಿದರೂ, ಪಾರ್ಕ್ ಮಾಡಿದರೂ ದಂಡ!

3) Traffic Rules Violation: ಟ್ರಾಫಿಕ್‌ ಪೊಲೀಸ್‌ ಟೋಯಿಂಗ್‌ ವಾಹನದಿಂದಲೇ ಸಿಗ್ನಲ್‌ ಜಂಪ್‌: ಬಿತ್ತು ಭರ್ಜರಿ ದಂಡ

click me!