Year End sale: ಏಸರ್ ಲ್ಯಾಪ್‌ಟ್ಯಾಪ್ ಖರೀದಿ ಮೇಲೆ ಭರ್ಜರಿ ಆಫರ್, ಕೇವಲ ಎರಡೇ ದಿನ ಅವಕಾಶ!

By Suvarna News  |  First Published Dec 16, 2021, 3:34 PM IST

* ಗೇಮಿಂಗ್ ಲ್ಯಾಪ್‌ಟ್ಯಾಪ್ ಖರೀದಿ ಮೇಲೆ 40 ಸಾವಿರ ರೂ.ವರೆಗೂ ಆಫರ್
* ಗೇಮಿಂಗ್ ಇತರ ಸಾಧನಗಳ ಖರೀದಿ ಮೇಲೆ ಶೇ.67ರವರೆಗೂ ರಿಯಾಯ್ತಿ
* ಡಿಸೆಂಬರ್ 16, 17ರಂದು ಮಾತ್ರ ನಡೆಯಲಿದೆ ಲೂಟ್ ಅವರ್ ಸ್ಟೋರ್ ಸೇಲ್


ಲ್ಯಾಪ್‌ಟಾಪ್ (Laptop) ಖರೀದಿಗೆ ಪ್ಲ್ಯಾನ್ ಮಾಡಿಕೊಂಡಿದ್ದೀರಾ? ನಿಮಗೆ  ಬೇಕಿರುವ ಲ್ಯಾಪ್‌ಟ್ಯಾಪ್ ದುಬಾರಿ ಎಂದು ಸುಮ್ಮನಿದ್ದೀರಾ? ಅದರಲ್ಲೂ ಏಸರ್ (Acer) ಕಂಪನಿ ಲ್ಯಾಪ್‌ಟ್ಯಾಪ್ ಖರೀದಿಗೆ ಯೋಚನೆ ಮಾಡುತ್ತಿದ್ದೀರಾ? ಹಾಗಿದ್ದರೆ, ಇದು ಖರೀದಿಗೆ ಒಳ್ಳೆಯ ಸಮಯ! ಯಾಕೆಂದರೆ, ದುಬಾರಿ ಲ್ಯಾಪ್‌ಟ್ಯಾಪ್‌ಗಳನ್ನೂ ಏಸರ್ ಕಂಪನಿ ಕಡಿಮೆ ರೇಟ್‌ಗೆ ಮಾರಾಟ ಮಾಡುತ್ತಿದೆ. ಏಸರ್ ಕಂಪನಿಯು ಗುರುವಾರ ‘ಲೂಟ್ ಅವರ್  ಸ್ಟೋರ್ ಸೇಲ್’ (Loot Our Store Sale) ವಿಶೇಷ ಮಾರಾಟವನ್ನು ಆರಂಭಿಸಿದೆ. ದುಬಾರಿ ಏಸರ್ ಗೇಮಿಂಗ್ ಲ್ಯಾಪ್‌ಟ್ಯಾಪ್‌ (Gaming Laptop) ಗಳ ಖರೀದಿ ಮೇಲೆ ಗ್ರಾಹಕರು 40 ಸಾವಿರ ರೂಪಾಯಿವರೆಗೂ ಉಳಿತಾಯ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಗೇಮಿಂಗ್ ಇತರ ಸಾಧನಗಳ ಮೇಲೆ ಕಂಪನಿಯು ಶೇ.67 ರಿಯಾಯ್ತಿಯನ್ನು ನೀಡುತ್ತಿದೆ.  ಹಾಗಾಗಿ, ಲ್ಯಾಪ್‌ಟ್ಯಾಪ್ ಹಾಗೂ ಇತರ ಗೇಮಿಂಗ್ ಸಾಧನಗಳನ್ನು ಖರೀದಿಸಲು ಇದು ಸೂಕ್ತ ಸಮಯವಾಗಿದೆ. ಜೊತೆಗೆ, ಏಸರ್‌ ವೆಬ್‌ಸೈಟನಲ್ಲಿರುವ ಮಾಹಿತಿಯ ಪ್ರಕಾರ, 23990 ರೂ.ನಿಂದ ಲ್ಯಾಪ್‌ಟ್ಯಾಪ್ ಖರೀದಿಗೆ ಅವಕಾಶವಿದೆ. ಅಂದರೆ, ಕಂಪನಿಯು ರಿಯಾಯ್ತಿ ನೀಡಿದ ಹಿನ್ನೆಲೆಯಲ್ಲಿ ಕಡಿಮೆ ರೇಟಿಗೆ ಲ್ಯಾಪ್‌ಟ್ಯಾಪ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.

ಗೇಮಿಂಗ್ ಲ್ಯಾಪ್‌ಟ್ಯಾಪ್‌ಗಳ ಮೇಲೆ 40 ಸಾವಿರ ರೂಪಾಯಿವರೆಗೆ ಮತ್ತು ಗೇಮಿಂಗ್ ಇತರ ಸಾಧನಗಳ ಮೇಲೆ ಶೇ. 67 ರಿಯಾಯ್ತಿಯನ್ನು ಕಂಪನಿಯು ಘೋಷಿಸಿದೆ. ಈ ಲೂಟ್ ಅವರ್ ಸ್ಟೋರ್ ಸೇಲ್ ಕೇವಲ ಎರಡು ದಿನ ಮಾತ್ರವೇ ಇರಲಿದೆ. ಅಂದರೆ, ರಿಯಾಯ್ತಿ ದರದಲ್ಲಿ ಲ್ಯಾಪ್‌ಟ್ಯಾಪ್‌ಗಳ ಮಾರಾಟವು ಕೇವಲ ಎರಡು ದಿನವೇ ಮಾತ್ರವೇ ಇರಲಿದೆ. ಹಾಗಾಗಿ, ಕೂಡಲೇ ಖರೀದಿಸಬಹುದಾಗಿದೆ. ಈಗ ಬಿಟ್ಟರೆ ಇಂಥ ಅವಕಾಶ ಮತ್ತೆ ಸಿಗಲಾರದು. 

Tap to resize

Latest Videos

Apple iPhones: ಆಪಲ್‌ನ ಶೇ.60 ಸಾಧನಗಳಲ್ಲೀಗ iOS 15 

ಡಿಸೆಂಬರ್ 16 ಮತ್ತು 17ರಂದು ಈ ರಿಯಾಯ್ತಿ ಮಾರಾಟ ಇರಲಿದೆ. ಆಫ್‌ಲೈನ್ ಸ್ಟೋರ್‌ನಲ್ಲಿ ಮಾತ್ರವಲ್ಲದೇ ಗ್ರಾಹಕರು ಆನ್‌ಲೈನ್ ಮೂಲಕವೂ ರಿಯಾಯ್ತಿ ದರದಲ್ಲಿ ಲ್ಯಾಪ್‌ಟ್ಯಾಪ್‌ಗಳನ್ನು ಖರೀದಿಸಬಹುದಾಗಿದೆ. ಆನ್‌ಲೈನ್‌ನಲ್ಲಿ 23,990 ರೂ.ನಿಂದ ಲ್ಯಾಪ್‌ಟ್ಯಾಪ್ ಖರೀದಿಸಬಹುದಾಗಿದೆ. ನೋ ಕಾಸ್ಟ್ ಇಎಂಐ ಆಯ್ಕೆಗಳು, ಉಚಿತ ಡೆಲಿವರಿ ಮತ್ತು ಬ್ರ್ಯಾಂಡ್ ವಾರಂಟಿ ಸೇರಿದಂತೆ ಇನ್ನಿತರ ಆಫರ್‌ಗಳನ್ನು ಕಂಪನಿ ನೀಡುತ್ತಿದೆ.

ಈ ವರ್ಷಾಂತ್ಯ ಮಾರಾಟದ ಪ್ರಕಾರ, ಮೂರು ವರ್ಷಗಳ ವಾರಂಟಿಯೊಂದಿಗೆ ವಿಂಡೋಸ್ ಲ್ಯಾಪ್‌ಟ್ಯಾಪ್‌ಗಳನ್ನು ಕಂಪನಿಯು 23,990 ರೂ.ನಿಂದ ಮಾರಾಟ ಮಾಡುತ್ತಿದೆ. ಇದೇ ವೇಳೆ, ಗೇಮಿಂಗ್ ಲ್ಯಾಪ್‌ಟ್ಯಾಪ್ ಖರೀದಿ ಮೇಲೆ ಗ್ರಾಹಕರಿಗೆ 40 ಸಾವಿರ ರೂಪಾಯಿವರೆಗೂ ಉಳಿತಾಯವಾಗಲಿದೆ. ಮಾನಿಟರ್‌ಗಳು ಖಱೀದಿ 7690 ರೂ.ನಿಂದ ಆರಂಭವಾಗುತ್ತವೆ. ಕಂಪನಿಯು ಎರಡು ವರ್ಷ ವಾರಂಟಿ ಮತ್ತು ಡ್ಯಾಮೇಜ್ ಪ್ರೋಟೆಕ್ಷನ್ ಅನ್ನು ಆಯ್ದ ಮಾಡೆಲ್‌ಗಳ ಮೇಲೆ ನೀಡುತ್ತಿದೆ.  ಇಷ್ಟು ಮಾತ್ರವಲ್ಲದೇ ಗ್ರಾಹಕರು ಏಸರ್ ನಿತ್ರೋ (Acer Nitro) ಹೆಡ್‌ಸೆಟ್ಸ್, ಮೈಸ್ (Mice), ಬ್ಯಾಕ್‌ಪ್ಯಾಕ್ಸ್ (Backpacks) ಅಡಾಪ್ಟರ್‌ಗಳ ಖರೀದಿ ಮೇಲೆ ಕಂಪನಿಯು ಶೇ.67ವರೆಗೂ ರಿಯಾಯ್ತಿಯನ್ನು ಘೋಷಿಸಿದೆ. ಆಯ್ದ ಲ್ಯಾಪ್‌ಟ್ಯಾಪ್‌ ಖರೀದಿ ಮೇಲೆ ಎಕ್ಸ್‌ಚೇಂಜ್ ಆಫರ್ ಕೂಡ ಇದೆ. 

ಇಯರ್ ಎಂಡ್ ಸೇಲ್‌ಗಳ ಪೈಕಿ ಸದ್ಯ ಏಸರ್ ನೀಡುತ್ತಿರುವ ರಿಯಾಯ್ತಿಗಳು ಭರ್ಜರಿಯಾಗಿವೆ. ಹಾಗಾಗಿ, ಆನ್‌ಲೈನ್ ಕ್ಲಾಸ್ ಮತ್ತು ವೈಯಕ್ತಿಕ ಬಳಕೆ ಸೇರಿದಂತೆ ಕಚೇರಿ ಕೆಲಸಕ್ಕೆ ನಿಮಗೆ ಲ್ಯಾಪ್‌ಟ್ಯಾಪ್ ಅಗತ್ಯವಿದ್ದರೆ ಅವುಗಳ ಖರೀದಿಗೆ ಇದು ಸೂಕ್ತ ಸಮಯವಾಗಿದೆ. ಹಾಗಾಗಿ, ಈ ಇಯರ್ ಎಂಡ್ ಸೇಲ್ ಕೇವಲ ಎರಡು ದಿನಗಳ ಕಾಲ ಮಾತ್ರವಿದ್ದು, ಇಂಥ ಅವಕಾಶವನ್ನು ಮಿಸ್ ಮಾಡಿಕೊಳ್ಳಲು ಹೋಗಬೇಡಿ. 

Acer Aspire Vero: ಲ್ಯಾಪ್‌ಟ್ಯಾಪ್ ಲಾಂಚ್, ಬೆಲೆ ಎಷ್ಟು ಗೊತ್ತಾ?

click me!