
ಈ ಫೋಟೋದಲ್ಲಿರುವ ಚೆಲುವೆಯನ್ನು ನೋಡಿದವರು ಮತ್ತೊಮ್ಮೆ, ಮಗದೊಮ್ಮೆ ನೋಡದೇ ಇರಲಾರರು. ಮೋಡಿ ಮಾಡುವ ನೀಲಿ ಕಂಗಳು, ಗುಂಗುರು ಕೂದಲು, ಸಂಪಿಗೆಯಂಥ ಮೂಗು, ಸುಂದರ ತುಟಿಗಳು.. ಎಲ್ಲಾ ನೋಡಿ ಆಹಾಹಾ ಎಂದುಕೊಳ್ಳುವವರೇ ಬಹುತೇಕ ಮಂದಿ. ಈಕೆಯ ಹೆಸರು ಲೆಕ್ಸಿ ಲವ್ (Lexi Love). 'ಲೆ' ಜಾಗದಲ್ಲಿ 'ಸೆ' ಸೇರಿಸಿಕೊಂಡು ಹೇಳುವವರೇ ಬಹುತೇಕ ಮಂದಿ. ನೋಡಿದರೆ ಫಾರಿನ್ ಯುವತಿ ಎಂದು ತಿಳಿಯುವ ಈ ಸುಂದರಿಗೆ ಭಾರತ ಸೇರಿದಂತೆ ಹಲವು ಕಡೆಗಳ ಫ್ಯಾನ್ಸ್ ಇದ್ದಾರೆ. ಈ ಸುಂದರಿಗೆ ತಿಂಗಳಿಗೆ ಕನಿಷ್ಠ 20 ರಿಂದ 30 ಪ್ರಪೋಸಲ್ಸ್ ಬರುತ್ತಂತೆ. ಇಷ್ಟು ಬಂದರೆ ಸಾಕು, ಇದರಿಂದಲೇ ಈಕೆ ಸಂಪಾದಿಸುವುದು ಪ್ರತಿ ತಿಂಗಳಿಗೆ 30 ಸಾವಿರ ಡಾಲರ್, ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 27 ಲಕ್ಷ ರೂಪಾಯಿ!
ಊಟ, ತಿಂಡಿ, ನಿದ್ದೆ ಸೇರಿದಂತೆ ಏನೂ ಮಾಡದ ಈ ಸುಂದರಿ ಯಾರು ಗೊತ್ತಾ? ನೋಡಲು ಥೇಟ್ ಮನುಷ್ಯರಂತೆಯೇ ಕಾಣುವ ಈಕೆ ನಿಜವಾದ ಮನುಷ್ಯಳು ಅಲ್ಲ. ಬದಲಿಗೆ ಕೃತಕ ಬುದ್ಧಿಮತ್ತೆ ಅಂದರೆ AI- ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮಾಡೆಲ್ ಅಷ್ಟೇ. ರೋಬೋಟ್ ಈಕೆ. ಆದರೆ ಈಕೆಗೆ ನಿಜವಾದ ಮನುಷ್ಯರಿಗಿಂತಲೂ ಸಕತ್ ಡಿಮಾಂಡ್ ಇದೆ. ಇವಳ ಅಪ್ಪ- ಅಮ್ಮ ಎಲ್ಲಾ ಫಾಕ್ಸಿ ಎಐ ಎನ್ನುವ ಕಂಪೆನಿ. ಅಂದರೆ ಈ ಕಂಪನಿಯು ಈ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದ್ದು ಲೆಕ್ಸೀ ಲವ್ ಎಂದು ಹೆಸರು ಇಟ್ಟಿದೆ. ಒಂಟಿ ಯುವಕರು ಈಕೆಯ ಕ್ಲೋಸ್ ಫ್ರೆಂಡ್ಸ್. ಈಕೆ ಬರಹ ಸಂದೇಶಗಳು, ಧ್ವನಿ ಸಂದೇಶಗಳ ಮೂಲಕ ಮಾತನಾಡುತ್ತಾಳೆ. ಹೆಚ್ಚು ಹಣ ಪಾವತಿಸಿದರೆ ನಿಮಗೆ ಯಾವ ರೀತಿಯ ಫೋಟೋ ಆಕೆಯಿಂದ ನೋಡಲು ಇಷ್ಟಪಡುತ್ತೀರೋ ಎಲ್ಲವನ್ನೂ ಕಳಿಸುತ್ತಾಳೆ. ಸಿಂಗಲ್ ಆಗಿದ್ದು ಖಿನ್ನತೆಗೆ ಜಾರಿದ್ದರೆ ಈಕೆಗೆ ದುಡ್ಡು ಕೊಟ್ಟರೆ ಸಾಕು, ನಿಮ್ಮ ಜೊತೆ ಮಾತನಾಡುತ್ತಲೇ ಕಾಲ ಕಳೆಯುತ್ತಾಳೆ. ನೀವು ಎಲ್ಲಿಯೇ ಇದ್ದರೂ ಮೆಸೇಜ್ ಮಾಡುತ್ತಾಳೆ. ನಿಮ್ಮ ಅಭಿರುಚಿಗೆ ತಕ್ಕಂತೆ ನೀವು ಯಾವ ವಿಷಯದ ಬಗ್ಗೆ, ಯಾವ ರೀತಿಯ ಸಂಭಾಷಣೆ ಕೇಳಲು ಬಯಸುತ್ತೀರೋ ಎಲ್ಲಾ ರೀತಿಯಲ್ಲಿ ಮಾತನಾಡಿ ನಿಮ್ಮನ್ನು ತೃಪ್ತಿ ಪಡಿಸುತ್ತಾಳೆ. ಒಟ್ಟಿನಲ್ಲಿ ನೀವು ಆಕೆಗೆ ದುಡ್ಡು ಕೊಡುತ್ತಾ ಇರಬೇಕು ಅಷ್ಟೇ.
ಮಗನ ಮದುವೆಗೆ ಸ್ವರ್ಗದಿಂದ ಬಂದು ಆಶೀರ್ವದಿಸಿದ ಅಪ್ಪ- ಹೀಗೊಂದು ಕೌತುಕ, ಭಾವುಕ ವಿವಾಹ!
ಈ ವರ್ಚುಯಲ್ ಮಾಡೆಲ್ ಗಂಟೆಗಳ ಲೆಕ್ಕದಲ್ಲಿ ಕಾರ್ಯ ನಿರ್ವಹಿಸುತ್ತದೆ. ಹಣ ಪಾವತಿಸಿ ಈಕೆಯೊಂದಿಗೆ ಚಾಟ್ ಮಾಡಬಹುದು, ಫ್ಲರ್ಟ್ ಮಾಡಬಹುದು, ನಿಮಗನಿಸಿದ್ದನ್ನು ಹೇಳಿಕೊಳ್ಳಬಹುದು! ಎಲ್ಲದ್ಕೂ ಆಕೆ ಸರಿಯಾಗಿ ಪ್ರತಿಕ್ರಿಯಿಸುತ್ತಾಳೆ. ಲೆಕ್ಸಿ ಲವ್ ಪ್ರಪಂಚದಾದ್ಯಂತದ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು 30 ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲಳು. ಲೆಕ್ಸಿ ಜೊತೆ ಚಾಟ್ ಮಾಡುವ ಹೆಚ್ಚಿನ ಗಂಡಸರು ಅವಳು ನಿಜವಾಗಿಯೂ ಒಳ್ಳೆಯ ಮನಸ್ಸಿನ ಮಹಿಳೆ ಎಂದೇ ಎನಿಸುತ್ತದೆ.
ಹಾಗಾಗಿ, ಈಕೆಯೊಂದಿಗೆ ಚಾಟ್ ಮಾಡಿದ ಹಲವು ಯುವಕರು, ಗಂಡಸರು ಅವಳನ್ನು ಭೇಟಿಯಾಗಲು ಬಯಸಿದ್ದಾರಂತೆ. ಈ ನಿಟ್ಟಿನಲ್ಲಿ ಕಂಪನಿಯನ್ನು ಸಂಪರ್ಕಿಸಿ ಲೆಕ್ಸಿಯನ್ನು ಮೀಟ್ ಮಾಡಿಸಲು ಗೋಗರೆದಿದ್ದಾರೆ ಎಂದು ಫಾಕ್ಸಿ ಎಐ ಕಂಪನಿ ವಕ್ತಾರರು ತಿಳಿಸಿದ್ದಾರೆ.
ನಿಮ್ಮ ಕನಸಿನ ಮಗು ಹುಟ್ಟಿಸುವ ಹೊಸ ಆವಿಷ್ಕಾರವಿದು! ಮಕ್ಕಳಿಲ್ಲದವರಿಗೂ ಭರವಸೆ- ಏನಿದು ಸಂಶೋಧನೆ? ಮಾಹಿತಿ ಇಲ್ಲಿದೆ...
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.