ಮಗನ ಮದುವೆಗೆ ಸ್ವರ್ಗದಿಂದ ಬಂದು ಆಶೀರ್ವದಿಸಿದ ಅಪ್ಪ- ಹೀಗೊಂದು ಕೌತುಕ, ಭಾವುಕ ವಿವಾಹ!

Published : Mar 07, 2025, 05:17 PM ISTUpdated : Mar 07, 2025, 05:28 PM IST
ಮಗನ ಮದುವೆಗೆ ಸ್ವರ್ಗದಿಂದ ಬಂದು ಆಶೀರ್ವದಿಸಿದ ಅಪ್ಪ-  ಹೀಗೊಂದು ಕೌತುಕ, ಭಾವುಕ  ವಿವಾಹ!

ಸಾರಾಂಶ

ಇತ್ತೀಚೆಗೆ ಮದುವೆಯೊಂದರಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ, ತಂದೆಯನ್ನು ಪರದೆಯ ಮೇಲೆ ತೋರಿಸಲಾಯಿತು. ವರನ ಆಸೆಯಂತೆ, ಅಗಲಿದ ತಂದೆಯ ನೆನಪಿಗಾಗಿ ಈ ಪ್ರಯತ್ನ ಮಾಡಲಾಯಿತು. ಈ ಭಾವುಕ ಕ್ಷಣಕ್ಕೆ ವಧು, ವರನ ತಾಯಿ, ಮಕ್ಕಳು ಕಣ್ಣೀರಿಟ್ಟರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಲವರು ಇದನ್ನು ಟೀಕಿಸಿದರೆ, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಲ್ಲೊಂದು ಮದುವೆ. ಮದುಮಕ್ಕಳು ಹಸೆಮಣೆ ಏರಲು ರೆಡಿಯಾಗಿದ್ದಾರೆ. ಅಷ್ಟೊತ್ತಿಗಾಗಲೇ ಸ್ವರ್ಗದ ಬಾಗಿಲು ತೆರೆಯುತ್ತದೆ. ಅಲ್ಲಿಂದ ವ್ಯಕ್ತಿಯೊಬ್ಬರ ಆಗಮನವಾಗುತ್ತದೆ. ವರ ಮತ್ತು ವರನ ಅಮ್ಮನ ಕಣ್ಣಲ್ಲಿ ನೀರು. ಅದನ್ನು ನೋಡಿ ವಧು ಕೂಡ ಅಳುತ್ತಾಳೆ. ಕೊನೆಗೆ ಆ ವ್ಯಕ್ತಿಯ ಮಕ್ಕಳು ಹೋಗಿ ಅವರನ್ನು ತಬ್ಬಿಕೊಳ್ಳುತ್ತಾರೆ. ಪತ್ನಿ ಕೂಡ ಅಗಲಿದ ಪತಿಯ ಬಳಿ ಹೋಗುತ್ತಾರೆ. ಇಂಥದ್ದೊಂದು ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದ ಮದುವೆಯ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ತನ್ನ ಮದುವೆಯನ್ನು ಅಪ್ಪ ಕೂಡ ನೋಡಬೇಕು, ತನ್ನ ಮದುವೆಯ ಬಗ್ಗೆ ಅಪ್ಪ ಬೆಟ್ಟದಷ್ಟು ಆಸೆ ಹೊತ್ತುಕೊಂಡಿದ್ದ ಎನ್ನುವುದು ವರನ ಮಾತು. ಇದೇ ಕಾರಣಕ್ಕೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಇಂಥದ್ದೊಂದು ಅಪರೂಪದ ಕ್ಷಣವನ್ನು ಪರದೆಯ ಮೇಲೆ ತರಲಾಯಿತು.
 
ಮದುಮಕ್ಕಳು, ವರನ ಅಮ್ಮ ಹಾಗೂ ಇತರ ಸಂಬಂಧಿಕರು ಒಂದು ಕಡೆ ಕುಳಿತ ಸಂದರ್ಭದಲ್ಲಿ ಪರದೆಯ ಮೇಲೆ ಎಐ ತಂತ್ರಜ್ಞಾನದ ಮೂಲಕ ಅಪ್ಪನನ್ನು ಕರೆಸಲಾಯಿತು. ಬಳಿಕ ಮಕ್ಕಳು ಹಾಗೂ ಅಮ್ಮನನ್ನೂ ಇದೇ ತಂತ್ರಜ್ಞಾನ ಬಳಸಿ ಅಗಲಿದ ವ್ಯಕ್ತಿಯ ಸಮೀಪ ಹೋಗಿ ಪ್ರೀತಿಯ ಅಪ್ಪುಗೆ ನೀಡುವಂತೆ ತೋರಿಸಲಾಗಿದೆ. ಇದನ್ನು ನೋಡುತ್ತಿದ್ದಂತೆಯೇ ಅಲ್ಲಿದ್ದವರೆಲ್ಲವೂ ಭಾವುಕರಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ಸೋಷಿಯಲ್​  ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. 

ನಿಮ್ಮ ಕನಸಿನ ಮಗು ಹುಟ್ಟಿಸುವ ಹೊಸ ಆವಿಷ್ಕಾರವಿದು! ಮಕ್ಕಳಿಲ್ಲದವರಿಗೂ ಭರವಸೆ- ಏನಿದು ಸಂಶೋಧನೆ? ಮಾಹಿತಿ ಇಲ್ಲಿದೆ...
 
  ಇಂದು ಎಐ ಮೂಲಕ ಏನು ಬೇಕಾದರೂ ಸೃಷ್ಟಿ ಮಾಡಬಹುದಾಗಿದೆ. ಆದರೆ ಇದರ ದುರ್ಬಳಕೆಯೇ ಹೆಚ್ಚಾಗುತ್ತಿದೆ ಎನ್ನುವ ಆರೋಪದ ನಡುವೆಯೂ ಇಂಥದ್ದೊಂದು ಭಾವುಕ ಸನ್ನಿವೇಶಗಳನ್ನು ಸೃಷ್ಟಿಸಬಹುದು ಎನ್ನುವುದಕ್ಕೆ ಈ ಮದುವೆ ಸಾಕ್ಷಿಯಾಗಿದೆ. ಇದರ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಹೀಗೆ ಮದುವೆಯ ಸಂದರ್ಭದಲ್ಲಿ ಮೃತ ವ್ಯಕ್ತಿಗಳನ್ನು ತೋರಿಸುವುದು ಸರಿಯಲ್ಲ ಎಂದಿದ್ದರೆ, ಹಲವರು ಇದೊಂದು ಭಾವುಕ ಕ್ಷಣ. ಮಗನ ಜೀವನವೂ ಸಾರ್ಥಕವಾಗಿದೆ ಜೊತೆಗೆ ನಿಜಕ್ಕೂ ಅಪ್ಪನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದಿದ್ದಾರೆ.

ಇದಾಗಲೇ ಎಐ ಬಳಸಿ ಹಲವಾರು ರೀತಿಯಲ್ಲಿ ಮನುಷ್ಯರ ಸೃಷ್ಟಿ ಮಾಡಲಾಗಿದೆ. ಈಚೆಗೆ ಪೋಷಕರ ಸಮಸ್ಯೆಗೆ ಉತ್ತರ ನೀಡಲು ಭಾರತಕ್ಕೆ ಮೊದಲ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಾಯಿ ಎಂಟ್ರಿಕೊಟ್ಟಾಗಿದೆ. ಇದು ಊಹೆಗೂ ನಿಲುಕದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಎಐ ಇನ್‌ಫ್ಲುಯೆನ್ಸರ್ ತಾಯಿ ಹೆಸರು ಕಾವ್ಯಾ ಮೆಹ್ರಾ. ಈಕೆ  ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ ಬೆಂಬಲಿತ ಮಾಡೆಲ್ ಇನ್‌ಫ್ಲುಯೆನ್ಸರ್ ತಾಯಿ. ಆದರೆ ಮನುಷ್ಯನಿಗಿಂತ ನಿಖರ, ಸ್ಪಷ್ಟತೆ ಹಾಗೂ ಸಂಯಮ, ತಾಳ್ಮೆ, ಆರೈಕೆ, ಪಾಲನೆ ಎಲ್ಲವನ್ನೂ ಮಾಡಿ  ತಾಯಿಯ ಪಾತ್ರ ನಿರ್ವಹಿಸುತ್ತಾಳೆ ಅನ್ನೋದು ವಿಶೇಷ. ಯಾವುದೇ ಆ್ಯಂಗಲ್‌ನಿಂದಲೂ ಈಕೆ ಎಐ ತಾಯಿ ಅನ್ನೋದು ಪತ್ತೆ ಹಚ್ಚುವುದು ಸಾಧ್ಯವಾಗುವುದಿಲ್ಲ. 

ನಿಜಕ್ಕೂ ಏಲಿಯನ್‌ಗಳು ಇವೆಯಾ? ಇಸ್ರೋ ಅಧ್ಯಕ್ಷ ಡಾ.ಸೋಮನಾಥ್‌ರಿಂದ ಅಚ್ಚರಿಯ ವಿಷಯ ರಿವೀಲ್!

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌