
ನವದೆಹಲಿ(ಸೆ.21): ವಿಕ್ರಮ್ ಲ್ಯಾಂಡರ್ ಮತ್ತೆ ಸಂಪರ್ಕಕ್ಕೆ ಸಿಗುವ ಸಾಧ್ಯತೆ ಕ್ಷೀಣಿಸಿರುವುದರಿಂದ ಚಂದ್ರಯಾನ-2 ಯೋಜನೆಯ ನಿರೀಕ್ಷಿತ ಗುರಿ ಸಾಧನೆ ಸಾಧ್ಯವಾಗಿಲ್ಲ.
ವಿಕ್ರಮ್ ಲ್ಯಾಂಡರ್ ಮರು ಸಂಪರ್ಕಕ್ಕೆ ನಿಗದಿಯಾಗಿದ್ದ ಕಾಲಮೀತಿ ಮೀರಿದ್ದು, ಲ್ಯಾಂಡರ್ ಜೊತೆ ಸಂಪರ್ಕದ ಸಾಧ್ಯತೆ ಕ್ಷೀಣವಾಗಿದೆ. ಈ ಕುರಿತು ಖುದ್ದು ಇಸ್ರೋ ಅಧ್ಯಕ್ಷ ಕೆ. ಶಿವನ್ ಮಾಹಿತಿ ನೀಡಿದ್ದಾರೆ.
ಇನ್ನು ಇಸ್ರೋದ ಭವಿಷ್ಯದ ಯೋಜನೆಯಾದ ಗಗನಯಾನ್’ನತ್ತ ವಿಜ್ಞಾನಿಗಳು ಚಿತ್ತ ಹರಿಸಲಿದ್ದಾರೆ ಎಂದು ಶಿವನ್ ಸ್ಪಷ್ಟಪಡಿಸಿದ್ದಾರೆ.
ಮಾನವ ಸಹಿತ ಬಾಹ್ಯಾಕಾಶ ಯಾತ್ರೆಯ ಯೋಜನೆಯಾಗಿರುವ ಗಗನಯಾನ್ ಕುರಿತು ಇಸ್ರೋ ಚಿತ್ತ ಹರಿಸಲಿದ್ದು, ಯೋಜನೆಯ ಯಶಸ್ವಿಗಾಗಿ ಸಂಸ್ಥೆ ಹಗಲಿರುಳು ದುಡಿಯಲಿದೆ ಎಂದು ಶಿವನ್ ಭರವಸೆ ನೀಡಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.