ವಿಕ್ರಮ್ ಲ್ಯಾಂಡರ್‌ ಪತನಗೊಂಡಿದ್ದು ಹೇಗೆ? ಬಯಲಾಯ್ತು ಕಾರಣ

By Web DeskFirst Published Sep 21, 2019, 12:27 PM IST
Highlights

ವಿಕ್ರಮ್ ಲ್ಯಾಂಡರ್‌ ಪತನಗೊಂಡಿದ್ದು ಹೇಗೆ?| ವಿಜ್ಞಾನಿಗಳು ಹೇಳಿದ್ದೇನು? ಇಲ್ಲಿದೆ ವಿವರ

ಚೆನ್ನೈ[ಸೆ.21]: ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ವಿಕ್ರಂ ಲ್ಯಾಂಡರ್‌ ಇಳಿಸುವ ಕುರಿತು ಬರೆಯಲಾಗಿದ್ದ ಪ್ರೋಗ್ರಾಂನಲ್ಲಿನ ದೋಷದಿಂದಾಗಿಯೇ ಲ್ಯಾಂಡರ್‌ ಸಾಫ್ಟ್‌ ಲ್ಯಾಂಡಿಂಗ್‌ ಆಗಲು ವಿಫಲವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಕೊನೆ ದಿನವೂ ವಿಕ್ರಂ ಜೊತೆ ಸಂಪರ್ಕ ಸಾಧ್ಯವಾಗಲಿಲ್ಲ!, ಮುಂದೇನು?

ಲ್ಯಾಂಡಿಂಗ್‌ನ ಇಡೀ ಪ್ರಕ್ರಿಯೆ ಸ್ವಯಂ ಚಾಲಿತವಾಗಿತ್ತು. ಇಂಥದ್ದೊಂದು ಸಾಫ್ಟ್‌ವೇರ್‌ ಪ್ರೋಗ್ರಾಂ ಬರೆಯುವಲ್ಲಿ ಸಣ್ಣ ದೋಷವಾಗಿದೆ. ಹೀಗಾಗಿ ವಿಕ್ರಂ ಲ್ಯಾಂಡರ್‌ನಿಂದ ಸಾಫ್ಟ್‌ ಲ್ಯಾಂಡಿಂಗ್‌ ಸಾಧ್ಯವಾಗಿಲ್ಲ. ಚಂದ್ರನ ಮೇಲ್ಮೈಗೆ ಅಪ್ಪಳಿಸಿದ ವಿಕ್ರಂ ಓರೆಯಾಗಿ ಬಿದ್ದಿದೆ. ಎರಡು ಕಾಲುಗಳನ್ನು ಮಾತ್ರ ಹೊರಚಾಚಿದ್ದು, ನಿರೀಕ್ಷೆಗಿಂತ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ.

ನಾಸಾಗೂ ಲ್ಯಾಂಡರ್‌ ಚಿತ್ರ ಸೆರೆ ಕಷ್ಟ?

ವಿಫಲ ಲ್ಯಾಂಡಿಂಗ್‌ ಕುರಿತು ವಿಜ್ಞಾನಿಗಳು ಭಿನ್ನ ಅಭಿಪ್ರಾಯ ತಾಳಿದ್ದು, ಸ್ವಯಂ ಚಾಲಿತ ಲ್ಯಾಂಡಿಂಗ್‌ ಕಾರ್ಯಕ್ರಮ ಬರೆಯುವಾಗ ತಪ್ಪಾಗಿದೆ ಎಂದು ಕೆಲ ವಿಜ್ಞಾನಿಗಳು ಹೇಳಿದ್ದಾರೆ. ಅಲ್ಲದೇ ಕೊನೆ ಕ್ಷಣದಲ್ಲಿ ವಿಕ್ರಂನ ವೇಗವನ್ನು ಗಂಟೆಗೆ 36 ಕಿ.ಮಿ ತಗ್ಗಿಸಿದ್ದರೆ ಹೆಚ್ಚಿನ ಹಾನಿ ತಡೆಗಟ್ಟಬಹುದಿತ್ತು ಎಂದು ಕೆಲ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಇದೇ ಸೆ.7 ರಂದು ಚಂದ್ರನ ಮೇಲೆ ಲ್ಯಾಂಡರ್‌ ಇಳಿಸುವ ಪ್ರಕ್ರೀಯೆ ವಿಫಲವಾಗಿತ್ತು.

click me!