
ನವದೆಹಲಿ(ಡಿ.04): ಚಂದ್ರನ ದಕ್ಷಿಣ ದೃವದಲ್ಲಿ ಬಿದ್ದಿರುವ ಇಸ್ರೋದ ವಿಕ್ರಮ್ ಲ್ಯಾಂಡರ್‌ನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪತ್ತೆ ಹಚ್ಚಿದೆ. ವಿಕ್ರಮ್ ಲ್ಯಾಂಡರ್‌ನ್ನು ಪತ್ತೆ ಹಚ್ಚಲು ನಾಸಾಗೆ ಚೆನ್ನೈ ಮೂಲದ ಇಂಜಿನಿಯರ್'ವೋರ್ವರು ಸಹಾಯ ಮಾಡಿದ್ದರು.
ಆದರೆ ವಿಕ್ರಮ್ ಲ್ಯಾಂಡರ್‌ನ್ನು ನಾಸಾಗಿಂತ ಮೊದಲೇ ನಮ್ಮ ಚಂದ್ರಯಾನ-2 ಆರ್ಬಿಟರ್ ಪತ್ತೆ ಮಾಡಿತ್ತು ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಹೇಳಿದ್ದಾರೆ.
ಕೊನೆಗೂ ಪತ್ತೆಯಾಯ್ತು ವಿಕ್ರಮ್ ಲ್ಯಾಂಡರ್: ಫೋಟೋ ಬಿಡುಗಡೆಗೊಳಿಸಿದ ನಾಸಾ!
ನಾಸಾಗಿಂತ ಮೊದಲೇ ಚಂದ್ರಯಾನ-2ದ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆ ಮಾಡಿತ್ತು. ಅಲ್ಲದೇ ಈ ಕುರಿತು ಇಸ್ರೋ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಮಾಡಿತ್ತು ಎಂದು ಶಿವನ್ ಸ್ಪಷ್ಟಪಡಿಸಿದ್ದಾರೆ. ಆದರೆ ಸತತ ಪ್ರಯತ್ನಗಳ ಹೊರತಾಗಿಯೂ ಚಂದ್ರಯಾನ-2 ನೌಕೆಯಿಂದ ವಿಕ್ರಮ್ ಲ್ಯಾಂಡರ್‌ನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ನಾಸಾದ ಮೂನ್ ಮಿಷನ್ ಎಲ್‌ಆರ್‌ಒ (Lunar Reconnaissance Orbiter) ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ಗುರುತಿಸಿ ಅದರ ಫೋಟೋಗಳನ್ನು ನಾಸಾ ನಿಯಂತ್ರಣ ಕೊಠಡಿಗೆ ರವಾನಿಸಿತ್ತು.
ಶಣ್ಮುಗ ಕಂಡ ಚಂದ್ರನ ಮೊಗ: ವಿಕ್ರಮ್ ಪತ್ತೆ ಹಚ್ಚಲು ನಾಸಾಗೆ ಸಹಕರಿಸಿದ ಭಾರತೀಯ!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.