ಪಾರ್ಕರ್ ಪ್ರೋಬ್: ನಾಸಾದಿಂದ ಇಂದು ಮಹತ್ವದ ಸುದ್ದಿಗೋಷ್ಠಿ!

By nikhil vk  |  First Published Dec 4, 2019, 12:13 PM IST

ಪಾರ್ಕರ್ ಪ್ರೋಬ್ ಕುರಿತು ನಾಸಾದಿಂದ ಇಂದು ಮಹತ್ವದ ಸುದ್ದಿಗೋಷ್ಠಿ| ಪಾರ್ಕರ್ ಪ್ರೋಬ್ ಸಂಗ್ರಹಿಸಿರುವ ಮಾಹಿತಿ ಬಿಡುಗಡೆ ಮಾಡಲಿರುವ ನಾಸಾ| ಸೂರ್ಯನ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಪಾರ್ಕರ್ ಪ್ರೋಬ್| ನೌಕೆಯ ನಾಲ್ಕು ಸಾಧನಗಳಿಂದ ಸಂಗ್ರಹಿಸಲಾದ ಸಂಶೋಧನಾ ಫಲಿತಾಂಶಗಳ ಬಿಡುಗಡೆ| ನೇಚರ್ ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಸುದ್ದಿಗೋಷ್ಠಿಯ ನೇರ ಪ್ರಸಾರ|


ವಾಷಿಂಗ್ಟನ್(ಡಿ.04): ಸೂರ್ಯನ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಪಾರ್ಕರ್ ಪ್ರೋಬ್ ಸಂಗ್ರಹಿಸಿರುವ ಮಾಹಿತಿ ಹಂಚಿಕೊಳ್ಳಲು ಇಂದು ನಾಸಾ ಸುದ್ದಿಗೋಷ್ಠಿ ಕರೆದಿದೆ.

ಇಂದು ಮಧ್ಯಾಹ್ನ 3(ಅಮೆರಿಕನ್ ಕಾಲಮಾನ)ರ ಸುಮಾರಿಗೆ ಸುದ್ದಿಗೋಷ್ಠಿ ಕರೆದಿರುವ ನಾಸಾ, ಪಾರ್ಕರ್ ಪ್ರೋಬ್ ಸಂಗ್ರಹಿಸಿರುವ ತ್ಯಂತ ಮಹತ್ವದ ಮಾಹಿತಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.

'ನಾಳೆ ಬಾ' ಎಂದ ಭಾಸ್ಕರ: ಪಾರ್ಕರ್ ಪ್ರೋಬ್ ಉಡಾವಣೆ ಮುಂದೂಡಿಕೆ!

ಟೆಲಿಕಾನ್ ಕಾನ್ಫರೆನ್ಸ್ ಸಮಯದಲ್ಲಿ ಪಾರ್ಕರ್ ಪ್ರೋಬ್ ಮಿಷನ್ ತಜ್ಞರು, ನೌಕೆಯ ನಾಲ್ಕು ಸಾಧನಗಳಿಂದ ಸಂಗ್ರಹಿಸಲಾದ ಸಂಶೋಧನಾ ಫಲಿತಾಂಶಗಳನ್ನು ಬಿಡುಗಡೆ ಮಾಡಲಿದ್ದಾರೆ.

On Wednesday, Dec. 4, we’re announcing the first science results from ! Media are invited to join a teleconference with mission experts at 1:30pm ET, followed by a Live broadcast at 3pm ET. Details ⬇️ https://t.co/T2cIaluRYd

— NASA Sun & Space (@NASASun)

Latest Videos

undefined

ಸೂರ್ಯ ಮತ್ತು ಇತರ ನಕ್ಷತ್ರಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ಬದಲಾಯಿಸಬಲ್ಲ ಮಾಹಿತಿಯನ್ನು ಪಾರ್ಕರ್ ಪ್ರೋಬ್ ಸಂಗ್ರಹಿಸಿದೆ ಎಂದು ನಾಸಾ ಹೇಳಿದೆ.

ಭಾಸ್ಕರನತ್ತ ಪಾರ್ಕರ್: ನಾಸಾ ಸಾಧನೆಗೆ ಜಗತ್ತು ವಂಡರ್!

ಇನ್ನು ನೇಚರ್ ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಸುದ್ದಿಗೋಷ್ಠಿಯ ನೇರ ಪ್ರಸಾರವಾಗಲಿದೆ ಎಂದು ನಾಸಾದ ಮಾಹಿತಿ ನೀಡಿದೆ. ನೌಕೆ ಇದುವರೆಗೂ ಸಂಗ್ರಹಿಸಿರುವ ಎಲ್ಲ ಮಾಹಿತಿಯನ್ನು ಈ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಗುವುದು.

click me!