
ಮುಂಬೈ(ಜೂನ್.1) ಪ್ರೀಪೇಯ್ಡ್ ಬಳಕೆದಾರರಿಗೆ ಜಿಯೋ ಮತ್ತೊಂದು ಆಕರ್ಷಕ ಕೊಡುಗೆ ನೀಡಲಾಗಿದೆ. ನೂತನ ಆಫರ್ ಪ್ರಕಾರ 399ರ ಪ್ಲಾನ್ ಈಗ ಕೇವಲ 299 ರೂಪಾಯಿಗೆ ಲಭ್ಯವಾಗಲಿದೆ. ಈ ಮೂಲಕ ಗ್ರಾಹಕರಿಗೆ 100 ರೂಪಾಯಿ ಕಡಿತಗೊಳಿಸಿದೆ. ಆದರೆ ಈ ಆಫರ್ ಅವಧಿ ಜೂನ್ 1 ರಿಂದ ಜೂನ್ 15, 2018ರ ವರೆಗೆ ಮಾತ್ರ.
ಇದರ ಜೊತೆಗೆ ಮೈಜಿಯೋ ಆಪ್ ಮೂಲಕ ರೀಚಾರ್ಜ್ ಮಾಡಿದರೆ, 50 ರೂಪಾಯಿ ಕ್ಯಾಶ್‌ಬ್ಯಾಕ್ ವೋಚರ್ ಹೊಂದಿರುವ ಜಿಯೋ ಪ್ರೀಪೇಯ್ಡ್ ಗ್ರಾಹಕರಿಗೆ ತಕ್ಷಣವೇ 50 ರೂಪಾಯಿ ರಿಯಾಯಿತಿ ಸಿಗಲಿದೆ. ರಜಾದಿನಗಳ ಸಂದರ್ಭದಲ್ಲಿ ಪರಿಚಯಿಸಲಾಗಿರುವ ಈ ಕೊಡುಗೆಯ ಮೂಲಕ, ಗ್ರಾಹಕರು ಹಾಲಿಡೇ ಹಂಗಾಮ ಆಫರ್ ಅನುಭವಿಸಬಹುದು. ಈ ಹೊಸ ಕೊಡುಗೆಯ ಮೂಲಕ ಜಿಯೋದ ಅಪರಿಮಿತ ಮಾಸಿಕ ಸೇವೆಗಳು (ಪ್ರತಿದಿನ 1.5 ಜಿಬಿ ಡೇಟಾ ಜೊತೆಗೆ) ವಾಸ್ತವಿಕವಾಗಿ ಕೇವಲ ರೂ. 100ರಲ್ಲಿ ದೊರಕಲಿವೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.