ನಿಮ್ಮ ಹೆಲ್ಮೆಟ್‌ನಲ್ಲಿ ಬ್ಲೂ ಸ್ನಾಪ್ ಅಳವಡಿಸಿಕೊಂಡಿದ್ದಿರಾ?

 |  First Published May 31, 2018, 7:01 PM IST


ಬಿಸಿಲ ಬೇಗೆಯಿಂದ ಹೈರಾಣಾಗಿರುವ ಬೈಕ್ ಸವಾರರಿಗೆ, ತಂಪಾದ ಗಾಳಿಗಾಗಿ ಮಾರುಕಟ್ಟೆಗೆ ಲಗ್ಗೆಇಟ್ಟಿದೆ ಬ್ಲೂಸ್ನಾಪ್ ಪರಿಕರಣ.


ಬೆಂಗಳೂರು(ಮೇ.31): ಹೊರಗಡೆ ವಾತಾವರಣ ಏಷ್ಟೇ ಬಿಸಿಯಾಗಿರಲಿ, ನಿಮಗೆ ತಂಪಾದ ಗಾಳಿ ಬೇಕು ಅಂದರೆ ನಿಮ್ಮ ಹೆಲ್ಮೆಟ್‌ನಲ್ಲಿ ನೀವು ಬ್ಲೂಅರ್‌ಮಾರ್ ಬ್ಲೂ ಸ್ನಾಪ್ ಅಳವಡಿಸಿಕೊಳ್ಳಬೇಕು.  ಬೇಸಿಗೆಯಲ್ಲಿ ಬೈಕ್ ಸವಾರರು ಪ್ರತಿ ದಿನ ಹೆಲ್ಮೆಟ್ ಒಳಗೆ ಬೆವತು ಹೋಗುತ್ತಾರೆ. ಅದರಲ್ಲೂ ನಗರಗಳಲ್ಲಿ ರೈಡ್ ಮಾಡೋ ಸವಾರರ ಪರಿಸ್ಥಿತಿ ಹೇಳತೀರದು. ಟ್ರಾಫಿಕ್ ಜೊತೆಗೆ ಬಿಸಿಲ ಬೇಗೆ ಸವಾರರನ್ನ ಹೈರಾಣಾಗಿಸೋದು ಸುಳ್ಳಲ್ಲ. 

Latest Videos

undefined

ಬೈಕ್ ಸವಾರರು ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಇದೀಗ ಪರಿಹಾರ ಲಭ್ಯವಿದೆ. ಅದು ಕೂಡ ಸುಲಭ ಹಾಗೂ ಸರಳ. ಹೆಲ್ಮೆಟ್ ಒಳಗೆ ತಂಪಾದ ಗಾಳಿಗಾಗಿ ನೀವು ಮಾಡಬೇಕಾದದ್ದು ಇಷ್ಟೆ. ನಿಮ್ಮ ಹೆಲ್ಮೆಟ್‌ಗೆ ಬ್ಲೂಸ್ನಾಪ್ ಅಳಪಡಿಸಿಕೊಂಡರೆ ಸಾಕು. ಹೊರಗಡೆ ಅದೆಷ್ಟೇ ಬಿಸಿ ಇದ್ದರೂ ನಿಮಗೆ ತಂಪಾದ ಗಾಳಿ ಸಿಗಲಿದೆ.

ಏನಿದು ಬ್ಲೂ ಸ್ನಾಪ್ : ಬ್ಲೂಸ್ನಾಪ್ ಹೆಲ್ಮೆಟ್ ಒಳಗೆ ತಂಪಾದ ಗಾಳಿ ನೀಡೋ ಪರಿಕರಣ. 4 ಇಂಚು ಎತ್ತರ ಹಾಗೂ 5.2 ಇಂಚು ಅಗಲವಾಗಿರುವ ಈ ಸಾಧನದಲ್ಲಿ 60 ಮಿಲಿಲೀಟರ್ ನೀರಿನ ಸಾಮರ್ಥ್ಯಹೊಂದಿದೆ. 390 ಗ್ರಾಂ ತೂಕವಿರುವ ಈ ಪರಿಕರಣ ಒಮ್ಮೆ ಚಾರ್ಚ್ ಮಾಡಿದರೆ 10 ಗಂಟೆಗಳ ಕಾಲ ಉಪಯೋಗಿಸಬಹುದಾಗಿದೆ. ಈ ಸಾಧನದಲ್ಲಿರೋ ಫ್ಯಾನ್ ಮೂಲಕ ಹೆಲ್ಮೆಟ್ ಒಳಗೆ ತಂಪಾದ ಗಾಳಿ ಲಭ್ಯವಾಗಲಿದೆ.

ಈ ಬ್ಲೂಸ್ನಾಪ್ ಸಾಧವನ್ನ ಹೆಲ್ಮೆಟ್‌ಗೆ ಅಳವಡಿಸಿಕೊಂಡರೆ ಸಾಕು ನಿಮಗೆ ತಂಪಾದ ಗಾಳಿ ಲಭ್ಯವಾಗಲಿದೆ. ಹಾಗಂತ ಹೆಲ್ಮೆಟ್‌ನಿಂದ ಈ ಬ್ಲೂಸ್ನಾಪ್ ಜಾರಿ ಬೀಳಲ್ಲ.  ಸವಾರನಿಗೆ ಬ್ಲೂಸ್ನಾಪ್ ಫ್ಯಾನ್ ಶಬ್ದ ಕೇಳಿಸಲ್ಲ.  ಆದರೆ ಎಲ್ಲಾ ಹೆಲ್ಮೆಟ್‌ಗೆ ಇದನ್ನ ಅಳವಡಿಸೋದು ಕಷ್ಟ. ಇದರ ಬೆಲೆ 1948 ರೂಪಾಯಿ ಮಾತ್ರ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬ್ಲೂಸ್ನಾಪ್ ಸಾಧನ ಲಭ್ಯವಿದೆ. ಆನ್‌ಲೈನ್ ಮೂಲಕವೂ ಬ್ಲೂಸ್ನಾಪ್ ಸುಲುಭವಾಗಿ ಸಿಗಲಿದೆ.
 

click me!