ಹೊಸ ಫೋರ್ಡ್ ಇಕೋ ಸ್ಪೋರ್ಟ್ಸ್ ಎಸ್ ಕಾರಿನ ವಿಶೇಷತೆಗಳೇನು?

First Published Jun 1, 2018, 6:56 PM IST
Highlights

ಫೋರ್ಡ್ ಕಾರು ಕಂಪೆನಿಯ ನೂತನ ಇಕೋಸ್ಪೋರ್ಟ್ ಎಸ್ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ತಯಾರಿಸಲಾಗಿದೆ. ಹೊಸ ವೈಶಿಷ್ಠ, ಹೆಚ್ಚುವರಿ ಫೀಚರ್ಸ್ ಹೊಂದಿರುವ ಇಕೋ ಸ್ಫೋರ್ಟ್ ಎಸ್ ಇದೀಗ ಕಾರು ಪ್ರೀಯರ ನೆಚ್ಚಿನ ಕಾರಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಬೆಂಗಳೂರು(ಜೂನ್.1): ಭಾರತೀಯ ಕಾರು ಮಾರುಕಟ್ಟೆಯಲ್ಲಿ ಎಸ್‌ಯುವಿ ಇಂಜಿನ್ ಕಾರುಗಳಿಗೆ ಬಾರಿ ಬೇಡಿಕೆ ಇದೆ. ಇದಕ್ಕೆ ತಕ್ಕಂತೆ ವಿವಿಧ ಕಾರು ತಯಾರಿಕಾ ಕಂಪೆನಿಗಳು ಗ್ರಾಹರ ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇದೀಗ ಫೋರ್ಡ್ ಕಾರು ಕಂಪೆನಿಯ ಬಿಡುಗಡೆಗೊಳಿಸಿದ ಬಹುಬೇಡಿಕೆಯ ಇಕೋ ಸ್ಫೋರ್ಟ್ ಎಸ್ ಕಾರು ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಕಾರಿನ ವಿಶೇಷತೆ: ಇಕೋ ಸ್ಪೋರ್ಟ್ ಹಾಗೂ ನೂತನ ಇಕೋ ಸ್ಪೋರ್ಟ್ ಎಸ್ ಕಾರಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಹೆಚ್ಚುವರಿ ಸ್ಮೋಕ್ ಸ್ಟ್ರಿಪ್ಸ್, ಪ್ರಾಜೆಕ್ಟರ್ ಹೆಡ್‌ಲ್ಯಾಂಪ್ಸ್, ನೂತನ ಶೈಲಿಯ ಫಾಗ್ ಲ್ಯಾಂಪ್ ಹಾಗೂ ಟಿಂಟೆಡ್ ಗ್ಲಾಸ್‌ಗಳನ್ನ ನೀಡಲಾಗಿದೆ. ಹೊಸ ಆಲೋಯ್ ಚಕ್ರಗಳು ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ರೂಫ್‌ನಲ್ಲಿ ಗ್ಲಾಸಿ ಬ್ಲಾಕ್ ಕಲರ್ ನೀಡಲಾಗಿದೆ. ಹೀಗಾಗಿ ನೂತನ ಇಕೋ ಸ್ಪೋರ್ಟ್ ಎಸ್ ಹಿಂದಿನ ಇಕೋ ಸ್ಪೋರ್ಟ್‌ಗಿಂತ ಆಗ್ರೆಸ್ಸೀವ್ ಲುಕ್ ನೀಡಲಿದೆ.

ಕಾರಿನ ಒಳವಿನ್ಯಾಸ: ಇಕೋ ಸ್ಪೋರ್ಟ್ ಎಸ್ ಕಾರಿನ ಒಳವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಆದರೆ ಸ್ಪೋರ್ಟೀವ್ ಲುಕ್‌ಗಾಗಿ ಡ್ಯಾಶ್ ಬೋರ್ಡ್, ಟಚ್ ಸ್ಕ್ರೀನ್ ಕಳೆಭಾಗ, ಡೋರ್ ಟ್ರಿಮ್ ಹಾಗು ಸೀಟಿನಲ್ಲಿ ಕೇಸರಿ ಬಣ್ಣ ನೀಡಲಾಗಿದೆ. ಕಪ್ಪು ಹಾಗೂ ಕೇಸರಿ ಬಣ್ಣದ ಮಿಶ್ರಣದಿಂದ ಇಕೋ ಸ್ಪೋರ್ಟ್ ಎಸ್ ಕಾರಿನ ಒಳವಿನ್ಯಾಸ ಹೆಚ್ಚು ಆಕರ್ಷಣೀಯವಾಗಿದೆ. 

ವಿಶೇಷ ಅಂದರೆ, ಇಕೋ ಸ್ಪೋರ್ಟ್ ಎಸ್‌ನಲ್ಲಿ 2 ಪ್ರಮುಖ ಹೆಚ್ಚುವರಿ ಫೀಚರ್ಸ್ ನೀಡಲಾಗಿದೆ. ಇಲೆಕ್ಟ್ರಿಕಲ್ ಸನ್ ರೂಫ್ ಇಕೋ ಸ್ಫೋರ್ಟ್ ಎಸ್ ಕಾರಿನ ವಿಶೇಷತೆ. ಇದಕ್ಕಿಂತಲೂ ಮುಖ್ಯವಾಗಿ ಇಕೋ ಬೂಸ್ಟ್ 1.0 ಪೆಟ್ರೋಲ್ ಇಂಜಿನ್ ಜೊತೆಗೆ 3 ಸಿಲಿಂಡರ್ ಮೋಟಾರ್ ನೀಡಲಾಗಿದೆ. ಇದರಲ್ಲಿ ಟರ್ಬೋ ಚಾರ್ಜರ್ ಹಾಗೂ ಡೈರೆಕ್ಟ್ ಫ್ಯೂಯೆಲ್ ಇಂಜೆಕ್ಷನ್ ವೈಶಿಷ್ಠತೆ ನೀಡಲಾಗಿದೆ.

ಕಂಪೆನಿ ಪ್ರಕಾರ 125PS ಪವರ್  ಹಾಗೂ 1500 ಆರ್‌ಪಿಎಮ್ ನಿಂದ 6000 ಆರ್‌ಪಿಎಮ ವರೆಗೂ ಆಂಪಲ್ ನೀಡಲಾಗಿದೆ. ಹೀಗಾಗಿ ನಗರ ಹಾಗೂ ಹೈವೇಗಳಲ್ಲಿ ನೂತನ ಇಕೋ ಸ್ಪೋರ್ಟ್ ಎಸ್ ಸೈ ಎನಿಸಿಕೊಳ್ಳಲಿದೆ. ನಗರಗಳಲ್ಲಿ 14-15 ಕಿಲೋ ಮೀಟರ್ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಹೈವೇಗಳಲ್ಲಿ 18 ಕಿಲೋ ಮೀಟರ್ ಮೈಲೇಜ್ ನೀಡಲಿದೆ. ಇಕೋ ಸ್ಪೋರ್ಟ್ ಎಸ್ ಬೆಲೆ ಈ ಹಿಂದಿನ ಇಕೋ ಸ್ಪೋರ್ಟ್‌ಗಿಂತ 85 ಸಾವಿರ ರೂಪಾಯಿ ಹೆಚ್ಚಾಗಲಿದೆ. ಇಕೋಸ್ಪೋರ್ಟ್ ಎಸ್ ಪೆಟ್ರೋಲ್ ಬೆಲೆ 11.37 ಲಕ್ಷ(ದೆಹಲಿ ಎಕ್ಸ್ ಶೋ ರೂಮ್) ಹಾಗೂ ಡಿಸೆಲ್ ಕಾರು ಬೆಲ್ 11.89 ಲಕ್ಷ(ದೆಹಲಿ ಎಕ್ಸ್ ಶೋ ರೂಮ್). 

click me!