
ಬೆಂಗಳೂರು(ಜು.17): ತಾಂತ್ರಿಕ ದೋಷದಿಂದ ಮುಂದೂಡಲ್ಪಟ್ಟಿರುವ ಚಂದ್ರಯಾನ-2 ಯೋಜನೆಯನ್ನು, ಇದೇ ಜುಲೈ 21 ಅಥವಾ 22ರಂದು ಕೈಗೆತ್ತಿಕೊಳ್ಳಲು ಇಸ್ರೋ ನಿರ್ಧರಿಸಿದೆ.
ಜುಲೈ 15ರಂದು ನಡೆಯಬೇಕಿದ್ದ ಉಡ್ಡಯನ ಕೊನೇ ಕ್ಷಣದಲ್ಲಿ ತಾಂತ್ರಿಕ ದೋಷದಿಂದಾಗಿ ರದ್ದಾಗಿತ್ತು. ಜಿಎಸ್‌ಲ್‌ವಿ-ಎಂಕೆಐ2 ರಾಕೆಟ್’ನಲ್ಲಿ ಕ್ರಯೋಜನಿಕ್ ಇಂಧನ ಸೋರಿಕೆ ಹಿನ್ನೆಲೆಯಲ್ಲಿ ಉಡ್ಡಯನ ರದ್ದುಪಡಿಸಲಾಗಿತ್ತು.
ವಿಜ್ಞಾನಿಗಳು ಹಾಗೂ ತಂತ್ರಜ್ಞರು ಇಂಧನ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸತತ ಪರಿಶ್ರಮ ವಹಿಸಿದ್ದು , ಜು.21 ರ ಮಧ್ಯಾಹ್ನ ಅಥವಾ ಜು.22ರ ಬೆಳಗಿನ ಜಾವ ಉಡ್ಡಯನ ನಡೆಸಲು ಇಸ್ರೋ ಯೋಚಿಸಿದೆ ಎನ್ನಲಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.