
ಕೋಲ್ಕತ್ತಾ(ಜು.16): ಚಂದ್ರಯಾನ -2 ಮಿಷನ್‌ನ ಭಾಗವಾಗಿರುವ ಪ.ಬಂಗಾಳ ಮೂಲದ ವಿಜ್ಞಾನಿ ಚಂದ್ರಕಾಂತ್, ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಗಮನ ಸೆಳೆದಿದ್ದಾರೆ.
ಬಂಗಾಳದ ಕೃಷಿಕರ ಮಗ ಚಂದ್ರಕಾಂತ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಯಾದ ಚಂದ್ರಯಾನ -2 ರ ಪ್ರಮುಖ ಭಾಗವಾಗಿದ್ದಾರೆ.
ಸದ್ಯ ಚಂದ್ರಯಾನ-2 ಕಾರ್ಯಾಚರಣೆಯನ್ನು ಮುಂದೂಡಲಾಗಿದ್ದರೂ, ಚಂದ್ರಕಾಂತ್ ಕಟುಂಬ ಅವರ ಸಾಧನೆ ಬಗ್ಗೆ ಹೆಮ್ಮೆಪಡುತ್ತಿದೆ.
ಹೂಗ್ಲಿ ಜಿಲ್ಲೆಯ ಶಿಬ್‌ಪುರ ಗ್ರಾಮದಲ್ಲಿತಂದೆ ಮಧುಸೂದನ್ ಕುಮಾರ್, ಭಾನುವಾರ ರಾತ್ರಿಯಿಡೀ ಗ್ರಾಮಸ್ಥರೊಂದಿಗೆ ಉಡಾವಣೆಯ ನೇರ ಪ್ರಸಾರ ವೀಕ್ಷಣೆ ಮಾಡುತ್ತಿದ್ದರು.
ಇಡೀ ರಾತ್ರಿಯ ಕಾಯುವಿಕೆಯ ನಂತರ ಉಡಾವಣೆಯನ್ನು ಮುಂದೂಡಲಾಗಿದೆ ಎಂದು ತಿಳಿದು ಬೇಸರವಾಗಿದ್ದರೂ, ಯೋಜನೆ ಅದು ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ಮಧುಸೂದನ್.
2001 ರಲ್ಲಿ ಇಸ್ರೋಗೆ ಸೇರಿದ ಚಂದ್ರಕಾಂತ್, ಇದೀಗ ಚಂದ್ರಯಾನ-2 ಯೋಜನೆಯ ಭಾಗವಾಗಿರುವುದು ನಿಜಕ್ಕೂ ಅದ್ಭುತ ಸಾಧನೆಯೇ ಸರಿ.
ಚಂದ್ರಕಾಂತ ಅವರ ಸಹೋದರ ಶಶಿಕಾಂತ್ ಕೂಡ ಭಾರತೀಯ ಬಾಹ್ಯಾಕಾಶ ಏಜೆನ್ಸಿಯ ವಿಜ್ಞಾನಿಯಾಗಿದ್ದು, ಮಧುಸೂದನ್ ತಮ್ಮ ಇಬ್ಬರೂ ಪುತ್ರರಿಗೆ ಚಂದ್ರನ ಹೆಸರಿಟ್ಟಿರುವುದು ವಿಶೇಷ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.