ಇತಿಹಾಸ ಕೊರೆದ ಇಸ್ರೋ: ನಭಕ್ಕೆ ಚಿಮ್ಮಿದ ಕಾರ್ಟೊಸ್ಯಾಟ್-3!

By Web DeskFirst Published Nov 27, 2019, 12:04 PM IST
Highlights

ಐತಿಹಾಸಿಕ ಸಾಧನೆಗೆ ಮುನ್ನಡಿ ಬರೆದ ಇಸ್ರೋ|  ಸುಧಾರಿತ ಭೂ ವೀಕ್ಷಣೆ ಉಪಗ್ರಹ ಕಾರ್ಟೊಸ್ಯಾಟ್-3 ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿ| 13 ಯುಎಸ್ ನ್ಯಾನೊ ಸ್ಯಾಟಲೈಟ್‌ಗಳನ್ನು ಕಕ್ಷೆಗೆ ಸೇರಿಸಿದ ಇಸ್ರೋ| ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಇಸ್ರೋದ ಪಿಎಸ್ಎಲ್ ವಿ-ಸಿ47 ರಾಕೆಟ್| ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ| ಭೂಮಿಯ ಚಿತ್ರಣ ಹಾಗೂ ಮ್ಯಾಪ್‌ಗೆ ಸಂಬಂಧಿಸಿದ ಅಧ್ಯಯನಕ್ಕೆ ಕಾರ್ಟೊಸ್ಯಾಟ್‌-3 ಸಹಕಾರಿ| ಹೈ ರೆಸಲ್ಯೂಶನ್‌ ಫೋಟೋ ಸೆರೆ ಹಿಡಿಯುವ ಸಾಮರ್ಥ್ಯ ಇರುವ  ಕಾರ್ಟೊಸ್ಯಾಟ್‌-3|

ಶ್ರೀಹರಿಕೋಟಾ(ನ.27): ಕೆಲವರು ಇತಿಹಾಸ ಬರೆಯುತ್ತಾರೆ. ಇನ್ನೂ ಕೆಲವರು ಇತಿಹಾಸವನ್ನು ಕೊರೆಯುತ್ತಾರೆ. ಬರೆದ ಇತಿಹಾಸವನ್ನು ಅಳಿಸಲು ಸಾಧ್ಯ ಹೌದಾದರೂ, ಕೊರೆದ ಇತಿಹಾಸವನ್ನು ಅಳಿಸಲು ಸಾಧ್ಯವೇ ಇಲ್ಲ.

ಅಂತೆಯೇ ಇತಿಹಾಸವನ್ನು ಸುವರ್ಣಾಕ್ಷರಗಳಲ್ಲಿ ಕೊರೆಯುವ ರೂಢಿ ಹೊಂದಿರುವ ಇಸ್ರೋ, ಇದೀಗ ಮತ್ತೊಂದು ಮೈಲುಗಲ್ಲನ್ನು ತನ್ನ ಮುಡಿಗೇರಿಸಿಕೊಂಡಿದೆ.

Indian Space Research Organisation (ISRO): PSLV-C47 successfully injects Cartosat-3 spacecraft into orbit. 13 commercial satellites from USA successfully placed in their designated orbits. https://t.co/hHNopHFi6x

— ANI (@ANI)

ಸುಧಾರಿತ ಭೂ ವೀಕ್ಷಣೆ ಉಪಗ್ರಹ ಕಾರ್ಟೊಸ್ಯಾಟ್-3 ಹಾಗೂ 13 ಯುಎಸ್ ನ್ಯಾನೊ ಸ್ಯಾಟಲೈಟ್‌ಗಳನ್ನು ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.

ನಾವು ವಚನಬದ್ಧ: ಚಂದ್ರಯಾನ-3 ಯೋಜನೆಗೆ ಇಸ್ರೋ ಸಿದ್ಧ!

ಉಪಗ್ರಹಗಳನ್ನು ಹೊತ್ತೊಯ್ದ ಇಸ್ರೋದ ಉಡಾವಣಾ ವಾಹಕ ಪಿಎಸ್ಎಲ್ ವಿ-ಸಿ47 ರಾಕೆಟ್, ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ ಯಶಸ್ವಿಯಾಗಿ ಉಡಾವಣೆಗೊಂಡಿದೆ.

ಭಾರತೀಯ ಕಾಲಮಾನ 9.28ರ ವೇಳೆಗೆ 44.4 ಮೀಟರ್ ಎತ್ತರದ 320 ಟನ್ ತೂಕದ ರಾಕೆಟ್, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು. ಮೋಡಕವಿದ ವಾತಾವರಣವಿದ್ದರೂ ಕೂಡ ಉಡಾವಣೆ ಸಹಜವಾಗಿ ಯಶಸ್ವಿಯಾಗಿ ನಡೆದಿದೆ ಎಂದು ಇಸ್ರೊ ತಿಳಿಸಿದೆ.

Indian Space Research Organisation (ISRO) launches PSLV-C47 carrying Cartosat-3 and 13 nanosatellites from Satish Dhawan Space Centre at Sriharikota pic.twitter.com/FBcSW0t1T2

— ANI (@ANI)

ಭೂಮಿಯ ಚಿತ್ರಣ ಹಾಗೂ ಮ್ಯಾಪ್‌ಗೆ ಸಂಬಂಧಿಸಿದ ಅಧ್ಯಯನಕ್ಕೆ ಸಹಾಯಕಾರಿಯಾಗುವ ಕಾರ್ಟೊಸ್ಯಾಟ್‌-3 ಉಪಗ್ರಹ ಸೇರಿದಂತೆ, ಅಮೆರಿಕದ 13 ಮೈಕ್ರೋ ಉಪಗ್ರಹಗಳನ್ನು ಇಸ್ರೋ ನಭಕ್ಕೆ ಕಳುಹಿಸಿದೆ. 

ಹೈ ರೆಸಲ್ಯೂಶನ್‌ ಇರುವ ಫೋಟೊಗಳನ್ನು ಸೆರೆ ಹಿಡಿಯುವ ಸಾಮರ್ಥ್ಯವಿರುವ 3ನೇ ತಲೆಮಾರಿನ ಉಪಗ್ರಹ ಕಾರ್ಟೊಸ್ಯಾಟ್‌-3, ಒಟ್ಟು 1625 ಕೆಜಿ ತೂಕವಿದ್ದು 5 ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ.

ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಸದೇ ಬಿಡಲ್ಲ: ಇಸ್ರೋ ಅಧ್ಯಕ್ಷರ ಘೋಷಣೆ!

ಪ್ರಧಾನಿ ಮೋದಿ ಅಭಿನಂದನೆ:

PM Modi: I congratulate the ISRO team on yet another successful launch of PSLV-C47 carrying indigenous Cartosat-3 satellite&over a dozen nano satellites of USA. The advanced Cartosat-3 will augment our high resolution imaging capability. ISRO has once again made the nation proud. pic.twitter.com/2DEFkJwrRH

— ANI (@ANI)

ಇನ್ನು ಇಸ್ರೋದ ಐತಿಹಾಸಿಕ ಸಾಧನೆ ಕೊಂಡಾಡಿರುವ ಪ್ರಧಾನಿ ಮೋದಿ, ಭಾರತೀಯ ವಿಜ್ಞಾನಿಗಳ ಸಾಮರ್ಥ್ಯ ಇಡೀ ವಿಶ್ವಕ್ಕೆ ಪರಿಚಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಭವಿಷ್ಯದಲ್ಲಿ ಇಸ್ರೋ ಇನ್ನೂ ಅನೇಕ ಖಗೋಳೀಯ ವಿಸ್ಮಯಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗಲಿ ಎಂದು ಪ್ರಧಾನಿ ಹಾರೈಸಿದ್ದಾರೆ.

ನವೆಂಬರ್ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!