ವಿಶ್ವದ ಅತ್ಯಂತ ದೊಡ್ಡ ಕಪ್ಪುರಂಧ್ರ: ಬೆಳಕು ಹಾಯಲು ಬಿಡದು ಬೇಡಿದರೂ ಇಂದ್ರ!

By nikhil vk  |  First Published Nov 26, 2019, 7:33 PM IST

ನೋಡಬನ್ನಿ ವಿಶ್ವದ ಅತ್ಯಂತ ದೊಡ್ಡ ಕಪ್ಪುರಂಧ್ರ| ಸೂರ್ಯನಿಗಿಂತ 66 ಬಿಲಿಯನ್ ಪಟ್ಟು ದ್ರವ್ಯರಾಶಿ| ಭೂಮಿಯಿಂದ ಸುಮಾರು 10.37 ಬಿಲಿಯನ್ ಜ್ಯೋತಿರ್ವರ್ಷ ದೂರ ಇರುವ ಕಪ್ಪುರಂಧ್ರ| 194 ಬಿಲಿಯನ್ ಕಿ.ಮೀ ವ್ಯಾಸ ಹೊಂದಿರುವ TON 618| ಸೌರಮಂಡಲಕ್ಕಿಂತಲೂ ದುಪ್ಪಟ್ಟು ಪ್ರದೇಶವನ್ನು ಒಳಗೊಳ್ಳುವ TON 618| 114 ಟ್ರಿಲಿಯನ್ ಸೂರ್ಯನಷ್ಟು ಅಗಾಧ ಬೆಳಕನ್ನು ಹೊರಸೂಸುವ ಕಪ್ಪುರಂಧ್ರ|


ವಾಷಿಂಗ್ಟನ್(ನ.26): ಬ್ರಹ್ಮಾಂಡ ನಿಜಕ್ಕೂ ನಾವು ಊಹಿಸಿದ್ದಕ್ಕಿಂತಲೂ ಅಗಾಧವಾದುದು. ಬ್ರಹ್ಮಾಂಡದ ಮುಂದೆ ಭೂಮಿಯಷ್ಟೇ ಅಲ್ಲ, ಜೀವನದ ಮೂಲಾಧಾರವಾಗಿರುವ ಸೂರ್ಯ ಕೂಡ ಕುಬ್ಜ. ಸೂರ್ಯನಿಗಿಂತ ಲಕ್ಷಾಂತರ ಪಟ್ಟು ದೊಡ್ಡದಾದ ನಕ್ಷತ್ರಗಳು ಈ ವಿಶ್ವದ ಮೂಲೆಯಲ್ಲಿ ಬೆಳಗುತ್ತಿವೆ.

ಅದರಂತೆ ಬೆಳಕೂ ಸೇರಿದಂತೆ ತನ್ನ ಸುತ್ತಲಿನ ಎಲ್ಲವನ್ನೂ ಹಿರಿಕೊಳ್ಳುವ ನುಂಗುಬಾಕ ಕಪ್ಪುರಂಧ್ರಗಳು ನಮ್ಮ ವಿಶ್ವದ ವಿಶಿಷ್ಟ ಅತಿಥಿಯಾಗದ್ದು, ಈ ಕಪ್ಪುರಂಧ್ರಗಳ ಭೀತಿ ಖಗೋಳಶಾಸ್ತ್ರಜ್ಞರನ್ನು ಕಾಡುತ್ತಲೇ ಇದೆ.

Latest Videos

undefined

ಕಪ್ಪು ರಂದ್ರ ಎನ್ನುವುದು ಅತ್ಯಂತ ಸಾಂದ್ರವಾದ ವಸ್ತು. ಇದರಿಂದ ಬೆಳಕು ಕೂಡ ತಪ್ಪಿಸಿಕೊಳ್ಳುವಂತಿಲ್ಲ. ಇವೆಂಟ್ ಹಾರಿಜಾನ್ ಎಂದು ಕರೆಯಲಾಗುವ ಕಪ್ಪು ರಂಧ್ರದೊಳಗೆ ಎಲ್ಲ ವಸ್ತುಗಳು ಸಮಾಗಮವಾಗಿ ಬಿಡುತ್ತವೆ. 

ವಿಶ್ವದ ಅತ್ಯಂತ ದೊಡ್ಡ ನಕ್ಷತ್ರ: ಸೂರ್ಯ ಸುಳಿಯದು ಯುವೈ ಸ್ಕೂಟಿ ಹತ್ರ!

ಊಹಿಸಲೂ ಅಸಾಧ್ಯವಾದಷ್ಟು ಪ್ರಬಲ ಗುರುತ್ವ ಶಕ್ತಿ ಹೊಂದಿರುವ ಕಪ್ಪುರಂಧ್ರಗಳು, ಬೆಳಕನ್ನೂ ಕೂಡ ಹಾದು ಹೋಗಲು ನಿಡುವುದಿಲ್ಲ. ಅಲ್ಲದೇ ಗಾತ್ರದಲ್ಲಿಯೂ ಈ ಕಪ್ಪುರಂಧ್ರಗಳಿಗೆ ಸರಿಸಮನಾದ ಭೌತ ವಸ್ತು ಬ್ರಹ್ಮಾಂಡದಲ್ಲಿ ಮತ್ತೊಂದಿಲ್ಲ.

ಅದರಂತೆ ಬ್ರಹ್ಮಾಂಡದ ಅತ್ಯಂತ ದೊಡ್ಡ ಕಪ್ಪುರಂಧ್ರವನ್ನು ಪತ್ತೆ ಹಚ್ಚುವಲ್ಲಿ ಖಗೋಳ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. TON 618 ನಮಗೆ ಗೊತ್ತಿರುವ ವಿಶ್ವದ ಅತ್ಯಂತ ದೊಡ್ಡ ಕಪ್ಪುರಂಧ್ರ ಎಂಬುದು ಸಾಬೀತಾಗಿದೆ.

ಕೆನಿಸ್ ವೆನಾಸಿಟಾಯ್ ತಾರಾವಲಯದಲ್ಲಿರುವ TON 618 ಸುಮಾರು 10 ಬಿಲಿಯನ್ ವರ್ಷಗಳಷ್ಟು ಹಿಂದೆ ನಿರ್ಮಾಣಗೊಂಡ ಕಪ್ಪುರಂಧ್ರವಾಗಿದೆ. ಅಂದರೆ ವಿಶ್ವದ ಜನನದ ಕೇವಲ 3 ಬಿಲಿಯನ್ ವರ್ಷಗಳ ತರುವಾಯ ಈ ಕಪ್ಪುರಂಧ್ರ ರಚನೆಯಾಗಿದೆ.

114 ಟ್ರಿಲಿಯನ್ ಸೂರ್ಯನಷ್ಟು ಅಗಾಧ ಬೆಳಕನ್ನು ಹೊರಸೂಸುವ TON 618 ಕಪ್ಪುರಂಧ್ರ, ಸೂರ್ಯನಿಗಿಂತ 66 ಬಿಲಿಯನ್ ಪಟ್ಟು ದ್ರವ್ಯರಾಶಿಯನ್ನು ಹೊಂದಿದೆ.

ಸರಿಸುಮಾರು 194 ಬಿಲಿಯನ್ ಕಿ.ಮೀ ವ್ಯಾಸ ಹೊಂದಿರುವ TON 618, ನಮ್ಮ ಸೌರಮಂಡಲಕ್ಕಿಂತಲೂ ದುಪ್ಪಟ್ಟು ಪ್ರದೇಶವನ್ನು ಒಳಗೊಂಡಿದೆ.  ಇದು ಭೂಮಿಯಿಂದ ಸುಮಾರು 10.37 ಬಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿದೆ.

ವಿಶ್ವದ ಅತ್ಯಂತ ದೊಡ್ಡ ಗ್ಯಾಲಕ್ಸಿ: ಒಳ ಹೊಕ್ಕರೆ ಹೊರ ಬರಲಾಗದು ಗ್ಯಾರಂಟೀ!

ಕಪ್ಪುರಂಧ್ರದ ಪತ್ತೆ:
1957 ರಲ್ಲೇ TON 618 ಕಪ್ಪುರಂಧ್ರವನ್ನು ಪತ್ತೆ ಹಚ್ಚಲಾಗಿತ್ತಾದರೂ , 1963ರಲ್ಲಿ ಇದರ ಅಸ್ತಿತ್ವದ ಕುರಿತು ಮೊದಲ ಬಾರಿಗೆ ದೃಢೀಕರಿಸಲಾಯಿತು. 

ಮುಂದೆ 1970ರಲ್ಲಿ ಮೇರಿ ಹೆಲೆನ್ ಅಲ್ರಿಚ್ ಮೆಕ್’ಡೋನಾಲ್ಡ್ ವೀಕ್ಷಣಾಲಯದಲ್ಲಿ TON 618 ನ ಹೆಚ್ಚಿನ ಅಧ್ಯಯನ ನಡೆಸುವ ಮೂಲಕ ಇದನ್ನು ವಿಶ್ವದ ಅತ್ಯಂತ ದೊಡ್ಡ ಕಪ್ಪುರಂಧ್ರ ಎಂದು ಘೋಷಿಸಿದರು.

TON 618 ಕಪ್ಪುರಂಧ್ರದ ಇವೆಂಟ್ ಹಾರಿಜಾನ್ ಸರಿಸುಮಾರು 1,300 ಖಗೋಳಮಾನ ವ್ಯಾಸವನ್ನು ಹೊಂದಿದೆ. ಸೂರ್ಯ ಮತ್ತು ಭೂಮಿ ನಡುವಿನ ದೂರವನ್ನು ಖಗೋಳಮಾನ ಎನ್ನುತ್ತಾರೆ. ಒಂದು ಖಗೋಳಮಾನ ಎಂದರೆ ಸುಮಾರು 150 ಮಿಲಿಯನ್ ಕಿ.ಮೀಗಳು.

click me!