
ನವದೆಹಲಿ(ನ.02): ಚಂದ್ರಯಾನ -2 ಮುಗಿದ ಅಧ್ಯಾಯವಲ್ಲ ಎಂದಿರುವ ಇಸ್ರೋ ಮುಖ್ಯಸ್ಥ ಕೆ.ಶಿವನ್, ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರನ್ನು ಮತ್ತೊಮ್ಮೆ ಇಳಿಸುವ ಪ್ರಯತ್ನ ನಡೆಸುವುದಾಗಿ ಘೋಷಿಸಿದ್ದಾರೆ.
ವಿಜ್ಞಾನ-ಅಧ್ಯಾತ್ಮ: ವಿಜ್ಞಾನಿಯೊಳಗೊಬ್ಬ ಆಸ್ತಿಕನ ಹುಡುಕುತ್ತಾ..!
ಲ್ಯಾಂಡಿಂಗ್ ತಂತ್ರಜ್ಞಾನವನ್ನು ಮತ್ತಷ್ಟು ಹರಿತಗೊಳಿಸಿ ಮತ್ತೆ ಚಂದ್ರನ ದಕ್ಷಿಣ ಧ್ರುವಕ್ಕೆ ನೌಕೆ ಕಳುಹಿಸಲಾಗುವುದು ಎಂದು ಶಿವನ್ ಸ್ಪಷ್ಪಪಡಿಸಿದ್ದಾರೆ. ಅಲ್ಲದೇ ಮುಂದಿನ ಪ್ರಯತ್ನದಲ್ಲಿ ಖಂಡಿತವಾಗಿಯೂ ಯಶಸ್ಸು ಸಿಗಲಿದೆ ಎಂದು ಶಿವನ್ ಭರವಸೆ ವ್ಯಕ್ತಪಡಿಸಿದ್ದಾರೆ.
ಸದಾ ಸಾಧನೆಯ ಗುಂಗಲ್ಲೇ ಇರೋ ಇಸ್ರೋ ಸಿವನ್ (ಶಿವ)ಗೆ ದಕ್ಕದ ಚಂದ್ರನೇ..?
ತಮಿಳುನಾಡಿನ ಬಡ ರೈತನ ಮಗ ಶಿವನ್ ಇಸ್ರೋ ಅಧ್ಯಕ್ಷರಾದ ಕಥೆ!
ಐಐಟಿ ದೆಹಲಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವನ್, ಇಸ್ರೋ ತನ್ನೆಲ್ಲಾ ಅನುಭವ, ಜ್ಞಾನ ಮತ್ತು ತಾಂತ್ರಿಕ ಪರಾಕ್ರಮವನ್ನು ಧಾರೆ ಎರೆದು ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲಿದೆ ಎಂದು ಘೋಷಿಸಿದರು.
ಅಲ್ಲದೇ ಸದ್ಯ ಚಂದ್ರನ ದಕ್ಷಿಣ ಧ್ರುವದಲ್ಲಿ ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್ ಸ್ಥಳವನ್ನೂ ಪತ್ತೆ ಹಚ್ಚುವ ವಿಶ್ವಾಸವನ್ನು ಶೀವನ್ ವ್ಯಕ್ತಪಡಿಸಿದ್ದಾರೆ.
ಮರೆಯಾಯ್ತು ಚಂದ್ರಯಾನ: ಇಸ್ರೋ ಮುಂದಿನ ಯೋಜನೆ ಗಗನಯಾನ!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.