Salesmen Against Reliance: ಮುಖೇಶ್‌ ಅಂಬಾನಿಯ ಜಿಯೋ ಮಾರ್ಟ್ ವಿರುದ್ಧ ಸಮರ ಸಾರಿದ ಸ್ಥಳೀಯ ವಿತರಕರು!

By Suvarna NewsFirst Published Dec 7, 2021, 2:05 PM IST
Highlights

*Jio Mart ಮೊರೆ ಹೋಗುತ್ತಿರವ ಸ್ಥಳೀಯ ವ್ಯಾಪಾರಿಗಳು!
*ಅಂಗಡಿಗೆ ಹೋಗಿ ಆರ್ಡರ್ ಪಡೆಯುತ್ತಿದ್ದ ವಿತರಕರಿಗೆ ಸಂಕಟ 
*ಅಸಹಕಾರ ಚಳವಳಿಗೆ ಮುಂದಾಗಿರುವ ವಿತರಕರ ಒಕ್ಕೂಟ

ಮುಂಬೈ(ಡಿ. 07): ಭಾರತೀಯ ಮಾರುಕಟ್ಟೆಯಲ್ಲಿ ಈಗ  ಆನಲೈನ್‌ ಶಾಪಿಂಗ್‌ (Online Shopping) ಹವಾ ಜೋರಾಗಿದೆ. 5 ರೂಪಾಯಿಯ ಚಾಕಲೆಟ್‌ ನಿಂದ ಹಿಡಿದು ಲಕ್ಷಾಂತರ ರೂಪಾಯಿಯ ಗ್ರಹಬಳಕೆ ವಸ್ತುಗಳವರೆಗೂ ಆನಲೈನ್‌ ನಲ್ಲಿ ಎಲ್ಲವೂ ಲಭ್ಯವಿದೆ. ಆನ್‌ಲೈನ್ ಶಾಪಿಂಗ್‌ ಅಬ್ಬರ ಜೋರಾದಂತೆಲ್ಲಾ ಸ್ಥಳಿಯ ವ್ಯಾಪಾರಸ್ಥರೂ (Local Business) ನಷ್ಟ ಅನುಭವಿಸುತ್ತಿದ್ದಾರೆ. ಜನರಿಗೆ ಮನೆಯಲ್ಲಿಯೇ ಕುಳಿತು ಆರ್ಡರ್‌ ಮಾಡುವ ಅವಕಾಶವಿದ್ದಾಗ ಅಂಗಡಿಗೆ ಹೋಗಿ ಖರೀದಿಸುವವವರ ಸಂಖ್ಯೆ ಕಡಿಮೆಯಾಗದೆ. 

ಇಂಥಹದ್ದೇ ಆನಲೈನ್‌ ಗ್ರೋಸರಿ ಶಾಪಿಂಗ್‌ (Online Grocery) ಆ್ಯಪ್‌ ಜಿಯೋ ಮಾರ್ಟ್‌ (Jio Mart) ವಿರುದ್ಧ ಸ್ಥಳಿಯ ಅಂಗಡಿಗಳಿಗೆ ಗೃಹೋಪಯೋಗಿ ವಸ್ತುಗಳ ಸರಬರಾಜು ಮಾಡುವ ವಿತರಕರು ಈಗ ಸಮರ ಸಾರಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ (Reliance Industries) ಮಾಲೀಕತ್ವದ ಕಂಪನಿಗೆ ಗ್ರಾಹಕ ಕಂಪನಿಗಳು (Consumer Companies) ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಒದಗಿಸಿದರೆ ಇತರ ಸ್ಟೋರ್‌ಗಳಿಗೆ ಸರಬರಾಜುಗಳನ್ನು ಮಾಡುವುದನ್ನು ಸ್ಥಗಿತಗೊಳಿಸುವುದಾಗಿ ವಿತರಕರು ಬೆದರಿಕೆ ಹಾಕಿದ್ದಾರೆ.

ಮಾರಾಟದಲ್ಲಿ  20-25% ರಷ್ಟು ಕುಸಿತ!

Rekitt Benckiser, Unilever ಮತ್ತು Colgate-Palmolive ನಂತಹ ಕಂಪನಿಗಳನ್ನು ಪ್ರತಿನಿಧಿಸುವ ಭಾರತೀಯ ವಿತರಕರು ಕಳೆದ ತಿಂಗಳು ಈ ಬಗ್ಗೆ ತಿಳಿಸಿದ್ದು ಸ್ಥಳೀಯ ಅಂಗಡಿ ಮಾಲೀಕರು ಭಾರತೀಯ ಬಿಲಿಯನೇರ್ ಮುಖೇಶ್ ಅಂಬಾನಿಯವರ (Mukesh Ambani) ರಿಲಯನ್ಸ್‌ನಿಂದ ಹೆಚ್ಚು ಗೃಹೋಪಯೋಗಿ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗಾಗಿ ಕಳೆದ ವರ್ಷದಲ್ಲಿ ಅವರ ಮಾರಾಟವು 20-25% ರಷ್ಟು ಕುಸಿದಿದೆ ಎಂದು ತಿಳಿಸಿದ್ದಾರೆ.ರಿಲಯನ್ಸ್‌ ಮಾಲೀಕತ್ವದ JioMartನಲ್ಲಿ ಸಾಮಗ್ರಿಗಳು ರಿಯಾಯಿತಿ ದರದಲ್ಲಿ (Discounted Price) ಲಭ್ಯವಿದೆ. ಹಾಗಾಗಿ ಸ್ಥಳೀಯ ಮತ್ತು ಚಿಕ್ಕ ವ್ಯಾಪಾರಸ್ಥರು ಈ ಅಪ್ಲಿಕೇಶನ್‌ನಿಂದ ಡಿಜಿಟಲ್‌ನಲ್ಲಿ ಆರ್ಡರ್ ಮಾಡಲು ಮುಂದಾಗುತ್ತಿದ್ದಾರೆ. ಇದು ದಶಕಗಳಿಂದ ಅಂಗಡಿಯಿಂದ ಅಂಗಡಿಗೆ ಹೋಗಿ ಆರ್ಡರ್ ತೆಗೆದುಕೊಳ್ಳುತ್ತಿದ್ದ 450,000 ಕ್ಕೂ ಹೆಚ್ಚು ಕಂಪನಿಯ ಮಾರಾಟಗಾರರಿಗೆ ನಷ್ಟ ಉಂಟು ಮಾಡುವ  ಸಾಧ್ಯತೆ ಇದೆ.

ಗ್ರಾಹಕರ ವೇದಿಕೆಗಳಿಗೆ ಪತ್ರ 

ಅಖಿಲ ಭಾರತ ಗ್ರಾಹಕ ಉತ್ಪನ್ನಗಳ ವಿತರಕರ ಒಕ್ಕೂಟ  400,000 ಸದಸ್ಯರನ್ನು ಹೊಂದಿದೆ. ರಿಲಯನ್ಸ್‌ನಂತಹ ಇತರ ದೊಡ್ಡ ಕಾರ್ಪೊರೇಟ್ ವಿತರಕರಿಗೆ (Corporate Companies) ನೀಡುವ  ಬೆಲೆಯಲ್ಲಿಯೇ ತಮಗೂ ಉತ್ಪನ್ನಗಳನ್ನು ನೀಡಬೇಕು ಎಂದು ಒಕ್ಕೂಟ ಗ್ರಾಹಕರ ವೇದಿಕೆಗಳಿಗೆ ಪತ್ರ ಬರೆದಿದೆ. ಬೆಲೆ-ಸಮಾನತೆಯ ಬೇಡಿಕೆಯನ್ನು ಪೂರೈಸದಿದ್ದರೆ, ವಿತರಕರು ಸ್ಥಳೀಯ ಮತ್ತು ಸಣ್ಣ ವ್ಯಾಪಾರಸ್ಥರ ಸ್ಟೋರ್‌ಗಳಿಗೆ ಉತ್ಪನ್ನಗಳ ವಿತರಣೆಯನ್ನು ನಿಲ್ಲಿಸುತ್ತಾರೆ ಮತ್ತು ಡೊಡ್ಡ ಕಂಪನಿಗಳ ಜತೆಗೆ  ಪಾಲುದಾರಿಕೆಗಳು ಜನವರಿ 1 ರ ನಂತರವೂ ಮುಂದುವರಿದರೆ ಹೊಸದಾಗಿ  ಬಿಡುಗಡೆ ಮಾಡುವ ಗ್ರಾಹಕ ಸರಕುಗಳನ್ನು (New Product Launch) ಸಹ ಅಂಗಡಿಗಳಿಗೆ ಪರಿಚಯಿಸುವುದಿಲ್ಲ ಎಂದು ಒಕ್ಕೂಟವು ತನ್ನ ಪತ್ರದಲ್ಲಿ ತಿಳಿಸಿದೆ.

Jio Hikes Prepaid Tariffs: ಏರ್ಟೆಲ್, ವೊಡಾಫೋನ್ ಬೆನ್ನಲ್ಲೇ ಜಿಯೋ ಗ್ರಾಹಕರಿಗೆ ಶಾಕ್: ರೀಚಾರ್ಜ್ ದರ ಹೆಚ್ಚಳ!

"ನಾವು ಅನೇಕ ವರ್ಷಗಳಿಂದ  ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಖ್ಯಾತಿ ಮತ್ತು ಅಭಿಮಾನವನ್ನು ಗಳಿಸಿದ್ದೇವೆ. ಈಗ ನಾವು ಗ್ರಾಹಕರನ್ನು (ಸಣ್ಣ ವ್ಯಾಪಾರಿಗಳು) ಕಳೆದುಕೊಂಡರೆ  ನಮಗೆ ನಷ್ಟವಾಹಲಿದೆ. ಹಾಗಾಗಿ ನಾವು 'ಅಸಹಕಾರ' ಚಳುವಳಿಯನ್ನು  ಮಾಡಲು ನಿರ್ಧರಿಸಿದ್ದೇವೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಪತ್ರವನ್ನು ರೆಕಿಟ್, ಹಿಂದೂಸ್ತಾನ್ ಯೂನಿಲಿವರ್, ಕೋಲ್ಗೇಟ್ ಮತ್ತು ಇತರ 20 ಗ್ರಾಹಕ ಸರಕು ಕಂಪನಿಗಳಿಗೆ ಕಳುಹಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಧೈರ್ಯಶೀಲ್ ಪಾಟೀಲ್ ಹೇಳಿದ್ದಾರೆ. ಆದರೆ ಪತ್ರ ಕಳುಹಿಸಿದ್ದ ಮೂರು ಗ್ರಾಹಕ ಕಂಪನಿಗಳೂ ಹಾಗೂ ರಿಲಯನ್ಸ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ

Mukesh Ambaniಗೆ ಬಿಗ್ ಶಾಕ್, ಗೌತಮ್ ಅದಾನಿ ಈಗ ಏಷ್ಯಾದ ಅತೀ ಶ್ರೀಮಂತ ವ್ಯಕ್ತಿ!

ಸ್ಥಳೀಯ ಮತ್ತು ಚಿಕ್ಕ ವ್ಯಾಪಾರಸ್ಥರ ಸ್ಟೋರ್‌ಗಳು, ಅಥವಾ "ಕಿರಾಣಗಳು", ಭಾರತದಲ್ಲಿ ಸುಮಾರು $900 ಬಿಲಿಯನ್ ರಿಟೇಲ್ ಮಾರುಕಟ್ಟೆಯ 80% ರಷ್ಟು ಪಾಲನ್ನು ಹೊಂದಿವೆ. ಈಗ 150 ನಗರಗಳಿಂದ ಸುಮಾರು 300,000 ಮಳಿಗೆಗಳು ರಿಲಯನ್ಸ್‌ನಿಂದ ಸರಕುಗಳನ್ನು ಆರ್ಡರ್ ಮಾಡುತ್ತಿವೆ. ಕಂಪನಿಯು 2024 ರ ವೇಳೆಗೆ 10 ಮಿಲಿಯನ್ ಪಾಲುದಾರ ಅಂಗಡಿಗಳನ್ನು ಸೇರಿಸುವ ಗುರಿಯನ್ನು ಹೊಂದಿದೆ.

click me!