Phone Battery Draining: ನಿಮ್ಮ ಫೋನ್ ಬ್ಯಾಟರಿ ಬೇಗ ಖಾಲಿಯಾಗ್ತಿದ್ಯಾ? ಹಾಗಾದ್ರೆ ಈ 5 ಟಿಪ್ಸ್‌ ತಪ್ಪದೇ ಪಾಲಿಸಿ!

By Suvarna News  |  First Published Dec 7, 2021, 12:43 PM IST

ಅತ್ಯುತ್ತಮ ಬ್ಯಾಟರಿ ಆಯ್ಕೆಯನ್ನು ಹೊಂದಿರುವ ಫೋನ್  ಖರೀದಿಸಿದರೂ ನಿಮ್ಮ ಮೊಬೈಲ್‌ ಬ್ಯಾಟರಿಯು ತುಂಬಾ ಬೇಗ ಖಾಲಿಯಾಗುತ್ತಿದೆಯೇ? ಹಾಗಾದರೆ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಬಾಳಿಕೆಯನ್ನು ಉತ್ತಮಗೊಳಿಸಲು ಇಲ್ಲಿವೆ 5 ಸಲಹೆಗಳು!


ಮೊಬೈಲ್‌ ಪೊನ್‌ (Mobile Phone) ಇಲ್ಲದ ಜಗತ್ತನ್ನು ಬಹುಶಃ ಊಹಿಸಲೂ ಸಾಧ್ಯವಿಲ್ಲ. ಕೆಲವೇ ಕೆಲವು ನಿಮಿಷ ನಮ್ಮ ಮೊಬೈಲ್‌ ನಮ್ಮಿಂದ ದೂರವಾದರೆ ಅಥವಾ ಅದು ಸ್ಥಗಿತಗೊಂಡರೆ ನಾವು ತಡಪಡಿಸಲು ಆರಂಭಿಸುತ್ತವೆ. ಮೊಬೈಲ್‌ ಫೋನ್‌ ಜೀವಂತವಾಗಿರಲು (ಕಾರ್ಯನಿರ್ವಹಿಸಲು) ಬ್ಯಾಟರಿ  (Battery) ಬಹಳ ಮುಖ್ಯ. ಸ್ಮಾರ್ಟ್‌ಫೋನ್ ಬ್ಯಾಟರಿ ಖಾಲಿಯಾಯಿತೆಂದರೆ ಎಲ್ಲ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಈ ಸಮಸ್ಯೆ ಬಗೆಹರಿಸಲು ಜನರು ಪವರ್ ಬ್ಯಾಂಕ್‌ (Power Bank) ಹಿಡಿದುಕೊಂಡು  ಸುತ್ತುವುದನ್ನು ನೀವು ನೋಡಿರಬಹುದು. ಹಾಗಾಗಿ ನಿಮ್ಮ ಮೊಬೈಲ್‌ನ ಬ್ಯಾಟರಿ ಬೇಗ ಖಾಲಿಯಾಗದಂತೆ ಕಾಳಜಿ ವಹಿಸುವುದು ಬಹಳ ಮುಖ್ಯ. .

ಹೊಸ ಫೋನ್ ಖರೀದಿಸುವಾಗ ಜನರು ಇತ್ತೀಚಿನ ಪ್ರೊಸೆಸರ್, ಎಚ್‌ಡಿ ಕ್ಯಾಮೆರಾ (HD Camera), ಉತ್ತಮ ಧ್ವನಿ, ದೀರ್ಘಕಾಲೀನ ಬ್ಯಾಟರಿ (Long Life Battery) ಮುಂತಾದ ಅಗತ್ಯತೆಗಳನ್ನು ಪರಿಶೀಲಿಸುತ್ತಾರೆ. ಜತೆಗೆ ಅತ್ಯುತ್ತಮ ಬ್ಯಾಟರಿ ಆಯ್ಕೆಯನ್ನು ಹೊಂದಿರುವ ಫೋನ್ ಅನ್ನು ಖರೀದಿಸುತ್ತಾರೆ. ಆದರೆ ಅದಾಗ್ಯೂ  ಹಲವು ಕಾರಣಗಳಿಂದ ಅದರ ಬ್ಯಾಟರಿಯು ತುಂಬಾ ಬೇಗ ಖಾಲಿಯಾಗುತ್ತದೆ. ನಿಮ್ಮ ಮೊಬೈಲ್‌ನಲ್ಲೂಈ ಸಮಸ್ಯೆಯಿದ್ದೆರ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಬಾಳಿಕೆಯನ್ನು ಉತ್ತಮಗೊಳಿಸಲು ಇಲ್ಲಿವೆ ಕೆಲವೊಂದು ಸಲಹೆಗಳು!

Tap to resize

Latest Videos

1.ನಿಮ್ಮ ಮೊಬೈಲ್‌ ವೈಬ್ರೇಶನ್‌ ಬ್ಯಾಟರಿ ಖಾಲಿ ಮಾಡುತ್ತದೆ

ಮೊಬೈಲ್‌ ವೈಬ್ರೇಶನ್ (Mobile Vibration) ರಿಂಗ್ ಟೋನ್‌ಗಿಂತ ಹೆಚ್ಚಿನ ಬ್ಯಾಟರಿಯನ್ನು ಖಾಲಿ ಮಾಡುತ್ತದೆ. ಹಾಗಾಗಿ ಟೈಪ್ ಮಾಡುವಾಗ, ಮೇಸೆಜ್ ಕಳುಹಿಸುವಾಗ ಅಥವಾ ಕಾಲ್‌ ಸ್ವೀಕರಿಸುವಾಗ ವೈಬ್ರೇಶನ್‌ ಆಫ್‌ ಮಾಡುವುದು ಒಳಿತು. ಕೇವಲ ರಿಂಗ್‌ ಟೋನ್‌ ಮತ್ತು ನೋಟಿಫಿಕೇಶನ ಆನ್‌ ಇಟ್ಟರೆ ಸಾಕು. ಇಲ್ಲದಿದ್ದೆರ ವೈಬ್ರೇಶನ್  ಮೊಬೈಲ್ ಬ್ಯಾಟರಿ ಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುತ್ತದೆ. ಹಾಗಾಗಿ  ಮೊಬೈಲ್‌ ವೈಬ್ರೇಶನ್‌  ಆಫ್‌ ಮಾಡುವುದರಿಂದ ಸ್ಮಾರ್ಟ್‌ಫೋನ್ ಬ್ಯಾಟರಿ ಅವಧಿಯನ್ನು ಅಗಾಧವಾಗಿ ಹೆಚ್ಚಿಸಬಹುದು.

Amazon Offers: iPhone 12 Pro ಖರೀದಿ ಮೇಲೆ ಭರ್ಜರಿ ರಿಯಾಯಿತಿ! ಈ ಆಫರ್‌ ಮಿಸ್‌ ಮಾಡ್ಕೋಬೇಡಿ!

2. ಕಪ್ಪು ಬಣ್ಣದ ವಾಲಲ್‌ಪೇಪರ್ ಮೊಬೈಲ್ ಬ್ಯಾಟರಿ ಸೇವ್‌ ಮಾಡುತ್ತದೆ!

ಆಶ್ಚರ್ಯಕರವಾಗಿ, ಕಪ್ಪು ವಾಲ್‌ಪೇಪರ್ (Black Wallpaper) ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಅವಧಿಯನ್ನು ಉಳಿಸುತ್ತದೆ! ನಿಮ್ಮ ಸ್ಮಾರ್ಟ್‌ಫೋನ್ AMOLED ಡಿಸ್‌ಪ್ಲೇ ಹೊಂದಿದ್ದರೆ, ಡಾರ್ಕ್ ವಾಲ್‌ಪೇಪರ್‌ಗಳನ್ನು ಬಳಸಿಕೊಂಡು ನಿಮ್ಮ ಬ್ಯಾಟರಿಯನ್ನು ಉಳಿಸಬಹುದು. ಗಾಢವಾದ ಬಣ್ಣಗಳುಳ್ಳ ವಾಲ್‌ಪೇಪರ್ ಬಳಸಿದಾಗ AMOLED ಡಿಸ್ಪ್ಲೇಗಳಲ್ಲಿನ ಪಿಕ್ಸೆಲ್ಗಳು‌ (Pixel) ಹೆಚ್ಚು ಬ್ಯಾಟರಿ ಶಕ್ತಿಯನ್ನು  ಬಳಸುತ್ತವೆ.  ಕಪ್ಪು ಬಣ್ಣ  ಬಳಸಿದರೆ ಇದಕ್ಕೆ ಹೆಚ್ಚು ಶಕ್ತಿಯ ಅಗತ್ಯವಿರುವುದಿಲ್ಲ.  ಹಾಗಾಗಿ ಕಪ್ಪು ವಾಲ್‌ಪೇಪರ್ ಬಳಸುವುದರಿಂದ ಮೊಬೈಲ್‌ ಬ್ಯಾಟರಿ ಉಳಿಸಬಹುದು.

3. ಬಳಕೆಯಲ್ಲಿಲ್ಲದ  ಯಾವುದೇ ಆ್ಯಪ್/ಸೇವೆ  ಆಫ್ ಮಾಡಿ

Bluetooth, GPS, Wi-Fi, ಮೊಬೈಲ್ ಡೇಟಾ ಮತ್ತು  ಇಂಟರ್ನೆಟ್ ಅನ್ನು ಹಂಚಿಕೊಳ್ಳಲು ಹಾಟ್‌ಸ್ಪಾಟ್ (Hotspot) ಸ್ಮಾರ್ಟ್‌ಫೋನ್‌ನ ಬಳಕೆದಾರರು ಸಹಜವಾಗಿ ಬಳಸುವ ಸೇವೆಗಳು. ಆದರೆ ಈ ವೈಶಿಷ್ಟ್ಯಗಳು ಹೆಚ್ಚಿನ ಬ್ಯಾಟರಿಯನ್ನು ಖಾಲಿ ಮಾಡುತ್ತವೆ. ಬಳಕೆಯಲ್ಲಿಲ್ಲದಿದ್ದಾಗ, ವಿಶೇಷವಾಗಿ ಬ್ಯಾಟರಿ ಖಾಲಿಯಾದಾಗ ಅದನ್ನು ಆಫ್ ಮಾಡಿ. ಬ್ಯಾಟರಿ ಸೇವ್ ಮೋಡ್ (Battery Saver Mode) ಅನ್ನು ಆನ್‌ ಮಾಡುವುದು ಮತ್ತು ಕಡಿಮೆ ಬ್ಯಾಟರಿ  ಇದ್ದಾಗ ಏರ್‌ಪ್ಲೇನ್ ಮೋಡ್ (Airplane Mode) ಆನ್‌ ಮಾಡುವುದು ಕೂಡ ಬ್ಯಾಟರಿಯನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

Scammersಯಿಂದ ನಿಮ್ಮ ಆ್ಯಂಡ್ರಾಯ್ಡ್ ಫೋನ್‌ ರಕ್ಷಿಸಲು ಇಲ್ಲಿವೆ 8 ಸುಲಭ ಉಪಾಯಗಳು!

4. Auto Sync ಅನ್ನು ಆಫ್ ಮಾಡಿ

Gmail, Twitter, WhatsApp ಸೇರಿದಂತೆ ಹಲವು ಅಪ್ಲಿಕೇಶನ್‌ಗಳು ಇತ್ತೀಚಿನ ಅಪ್ಡೇಟ್ ನೀಡಲು ಡೇಟಾವನ್ನು ನಿರಂತರವಾಗಿ ರಿಫ್ರೆಶ್ ಮಾಡಲು ಆಟೋ ಸಿಂಕ್ (Auto Sync) ವಿಧಾನ ಬಳಸುತ್ತವೆ. ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚಿನ ಬ್ಯಾಕ್ ಎಂಡ್ (Back End) ಕೆಲಸಗಳು ನಡೆಯುತ್ತವೆ. ಅದು ನಿಮ್ಮ ಮೊಬೈಲ್‌ ಬ್ಯಾಟರಿ ಶಕ್ತಿಯನ್ನು ಹೆಚ್ಚು ವ್ಯಯಿಸುತ್ತವೆ. ನೀವು  ಸೆಟ್ಟಿಂಗೆ ಹೋಗಿ ಗೂಗಲ್ ಖಾತೆಯಲ್ಲಿ (Google Account) ನಿಮಗೆ ಯಾವ ಮಾಹಿತಿ ಸಿಂಕ್‌ ಆಗಬೇಕು  ಅಂಥಹ ಆ್ಯಪ್‌ಗಳಿಗಷ್ಟೇ ಆಟೋ ಸಿಂಕ್‌ ಆನ್‌ ಮಾಡಬಹುದು. ಇದರಿಂದ ಬ್ಯಾಕ್ ಎಂಡ್‌ನಲ್ಲಿ ನಿಮಗೆ ಗೊತ್ತಿಲ್ಲದೆಯೇ ಬ್ಯಾಟರಿ ವ್ಯಯವಾಗುವುದನ್ನು ನೀವು ತಡೆಯಬಹುದು.

5.ಆನ್-ಸ್ಕ್ರೀನ್ ವಿಜೆಟ್‌ಗಳನ್ನು (widgets) ತೆಗೆದುಹಾಕಿ!

ನಿಮ್ಮ ಡಿಸ್‌ಪ್ಲೇಯಲ್ಲಿಯೇ ಎಲ್ಲಾ ಮಾಹಿತಿಯನ್ನು ನೋಡಲು ಇಷ್ಟಪಡುತ್ತೀರಾ? ಹಾಗದರೆ ವಿಜೆಟ್‌ಗಳು‌ (ಆ್ಯಪ್‌ಗಳ ಮಧ್ಯ ಡಿಸ್ಪ್ಲೇ ಆಗುವ ಇತರ ಮಾಹಿತಿಗಳು) ನಿಮ್ಮ ಫೇವರೇಟ್ ಆಗಿರಬಹುದು. ಉದಾಹರಣೆಗೆ ಹವಾಮಾನ ಮಾಹಿತಿ, ಕ್ರಿಕೆಟ್‌ ಸ್ಕೋರ್‌, ಆ್ಯಂಟಿ ವೈರಸ್‌ ಸ್ಕ್ಯಾನ್‌ ಇತ್ಯಾದಿ. ಆದರೆ ಇವುಗಳು ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಹಾಳುಮಾಡುತ್ತದೆ. ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಅವಧಿಯನ್ನು ಉಳಿಸಲು ಅನಗತ್ಯವಾದ ವಿಜೆಟ್‌ಗಳನ್ನು ನೀವು ತೆಗೆದುಹಾಕಬಹುದು.‌

ಮತ್ತೆ ಬಂದ Joker Malware| ಈ 15 App ಡೌನ್‌ಲೋಡ್ ಮಾಡಿದ್ರೆ ಕೂಡಲೇ ಡಿಲೀಟ್ ಮಾಡಿ!

ಈ 5 ಸಲಹೆಗಳನ್ನು ಪಾಲಿಸಿ ನಿಮ್ಮ ಮೊಬೈಲ್‌ ಬ್ಯಾಟರಿ ಖಾಲಿಯಾಗದಂತೆ ನೀವು ಕಾಳಜಿ ವಹಿಸಬಹುದು. ಜತೆಗೆ ಯಾವಾಗಲೂ ಪವರ್‌ ಬ್ಯಾಂಕ್‌ ಹಿಡಿದುಕೊಂಡು ಓಡಾಡುವುದರಿಂದಲೂ ತಪ್ಪಿಸಿಕೊಳ್ಳಬಹುದು.

click me!