ತೀವ್ರ ಚಟುವಟಿಕೆಯ ಕೇಂದ್ರ: ಹಬಲ್ ಗುರುತಿಸಿದ ವಿಶಿಷ್ಟ ಸ್ಪೈರಲ್ ಗ್ಯಾಲಕ್ಸಿ !

By nikhil vk  |  First Published Dec 28, 2019, 7:03 PM IST

ತೀವ್ರ ಚಟುವಟಿಕೆಯ ಕೇಂದ್ರ ಹೊಂದಿರುವ ಗ್ಯಾಲಕ್ಸಿ ಪತ್ತೆ|  ESO 021-G004 ಗ್ಯಾಲಕ್ಸಿ ಪತ್ತೆ ಹಚ್ಚಿದ ನಾಸಾದ ಹಬಲ್ ಟೆಲಿಸ್ಕೋಪ್| ಭೂಮಿಯಿಂದ 130 ಮಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿರುವ ವಿಶಿಷ್ಟ ಗ್ಯಾಲಕ್ಸಿ| ಸಕ್ರಿಯ ನ್ಯೂಕ್ಲಿಯಸ್‌ನ ಪರಿಣಾಮವಾಗಿ ತೀವ್ರ ಚಟುವಟುವಟಿಕೆಯಿಂದ ಕೂಡಿರುವ ಕೇಂದ್ರ| ಗ್ಯಾಲಕ್ಸಿಯ ಕೇಂದ್ರದಲ್ಲಿ ಸುಪ್ತವಾಗಿರುವ ಬೃಹತ್ ಕಪ್ಪು ಕುಳಿ| 


ವಾಷಿಂಗ್ಟನ್(ಡಿ.28): ESO 021-G004 ಎಂಬ ಹೆಸರಿನ ಮಧ್ಯಮ ಪ್ರಕಾಶಮಾನವಾದ ಸುರುಳಿಯಾಕಾರದ ನಕ್ಷತ್ರಪುಂಜವನ್ನು ನಾಸಾದ ಹಬಲ್ ಪತ್ತೆ ಹಚ್ಚಿದೆ.

ಭೂಮಿಯಿಂದ ಕೇವಲ 130 ಮಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿರುವ ಈ ಗ್ಯಾಲಕ್ಸಿಯ ಕೇಂದ್ರ ತೀವ್ರ ಚಟುವಟಿಕೆಯಿಂದ ಕೂಡಿದೆ ಎಂದು ನಾಸಾದ ವಿಜ್ಞಾನಿಗಳು ತಿಳಿಸಿದ್ದಾರೆ.

Latest Videos

undefined

ಹಬಲ್ ಗುರುತಿಸಿದ ಈ ಗ್ಯಾಲಕ್ಸಿ ಸೂಪರ್ ನೋವಾಗಳ ಮದರ್‌ಲ್ಯಾಂಡ್!

ESO 021-G004 ಗ್ಯಾಲಕ್ಸಿ ಕೇಂದ್ರದಿಂದ ಹೊರಸೂಸುವ ಎಲ್ಲಾ ತರಂಗಾಂತರಗಳಲ್ಲಿನ ವಿಕಿರಣವನ್ನು ಅಳೆಯುವ ಮೂಲಕ, ಇದರ ಕೇಂದ್ರ  ಸಕ್ರಿಯ ನ್ಯೂಕ್ಲಿಯಸ್‌ನ ಪರಿಣಾಮವಾಗಿ ತೀವ್ರ ಚಟುವಟುವಟಿಕೆಯಿಂದ ಕೂಡಿದೆ ಎಂದು ನಾಸಾ ತಿಳಿಸಿದೆ.

High-energy radiation is generated by material falling inward into the central region of galaxy ESO 021-G004, and meeting the behemoth lurking there — a supermassive black hole: https://t.co/k8iTBbITXh pic.twitter.com/blVBbxHL9z

— Hubble (@NASAHubble)

ESO 021-G004ನ ಕೇಂದ್ರ ಪ್ರದೇಶಕ್ಕೆ ಒಳಮುಖವಾಗಿ ಚಿಮ್ಮುವ ಮೂಲಕ ಈ ವಿಕಿರಣ ಉತ್ಪತ್ತಿಯಾಗುತ್ತಿದೆ ಎಂದು ನಾಸಾ ಹೇಳಿದೆ. 

ಗ್ಯಾಲಕ್ಸಿಯ ಕೇಂದ್ರದಲ್ಲಿ ಸುಪ್ತವಾಗಿರುವ ಬೃಹತ್ ಕಪ್ಪು ಕುಳಿ ಗ್ಯಾಲಕ್ಸಿಯಲ್ಲಿರುವ ಇತರ ಭೌತಿಕ ವಸ್ತುಗಳನ್ನು ತನ್ನತ್ತ ಸೆಳೆಯುತ್ತಿದ್ದು,  ಇದರ ಪರಿಣಾಮವಾಗಿ ಅಕ್ರಿಶನ್ ಡಿಸ್ಕ್ ಕಕ್ಷೆ ರೂಪುಗೊಂಡಿದೆ ಎನ್ನಲಾಗಿದೆ.

ಹಬಲ್ ಕಣ್ಣಿಗೆ ಬಿದ್ದ ಸುಂದರ ನೀಲಿ ನಕ್ಷತ್ರಗಳ ಗ್ಯಾಲಕ್ಸಿ!

ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕದಲ್ಲಿರುವ  ವೈಡ್ ಫೀಲ್ಡ್ ಕ್ಯಾಮೆರಾ 3ರ ಮೂಲಕ ಈ ಗ್ಯಾಲಕ್ಸಿಯ ಚಿತ್ರಗಳನ್ನು  ಸಂಗ್ರಹಿಸಲಾಗಿದೆ.

click me!