90ರ ದಶಕ ಅಥವಾ ಅದಕ್ಕಿಂತ ಮುಂಚೆ ಹುಟ್ಟಿದವರ ಪೈಕಿ ಒನಿಡಾ ಟಿವಿ ಯಾರಿಗೆ ನೆನಪಿಲ್ಲ? ಕೋರೆ ಹಲ್ಲುಗಳು, ಎರಡು ಕೊಂಬುಗಳನ್ನು ಹೊಂದಿದ್ದ ದೆವ್ವದ ಆ ಟಿವಿ ಜಾಹೀರಾತು ಸ್ಮೃತಿಪಟಲದಿಂದ ಸುಲಭವಾಗಿ ಅಳಿಸಿಹೋಗುವಂಥದ್ದಲ್ಲ.
ಟಿವಿ ಆರಂಭ ಕಾಲದಲ್ಲಿ ಬಹಳ ಸುದ್ದಿ ಮಾಡಿದ್ದ ಒನಿಡಾ ಈಗ ಹೊಸ ಬಗೆಯ ಟಿವಿಯನ್ನು ಪರಿಚಯಿಸಲು ಹೊರಟಿದೆ. ಟಿವಿಯಲ್ಲಿ ಸಿನಿಮಾ ಸ್ಕ್ರೀನ್ ಅನುಭವ ನೀಡಲು ಹೊರಟಿದೆ ಒನಿಡಾ.
ಇದನ್ನೂ ಓದಿ | ಜನವರಿಯಿಂದ ಈ ಫೋನ್‌ಗಳಲ್ಲಿ ವಾಟ್ಸಪ್ ಸಿಗಲ್ಲ!
ಇನ್‌ಬಿಲ್ಟ್ ಅಲೆಕ್ಸಾ ವಾಯ್ಸ್ ಅಸಿಸ್ಟೆನ್ಸ್, ಡಾಲ್ಬಿ ಆಡಿಯೋ ಹಾಗೂ ಡಿಟಿಎಸ್ ಟ್ರೂ ಸೌಂಡ್ ಹೊಂದಿರುವ ಒನಿಡಾದ ಹೊಸ ಟಿವಿ 32 ಹಾಗೂ 43 ಇಂಚುಗಳಲ್ಲಿ ಲಭ್ಯವಿದೆ.
ಟಿವಿ ಎದುರು ಕೂತಲ್ಲಿಂದಲೇ ಈ ಚಾನೆಲ್ ಬೇಕು ಅಂದರೆ ಸಾಕು, ರಿಮೋಟ್ ಸಹಾಯವಿಲ್ಲದೇ ಆ ಚಾನೆಲ್ ಪ್ಲೇ ಆಗುತ್ತೆ. ಸೌಂಡ್ ಕ್ವಾಲಿಟಿ ಬಹಳ ಚೆನ್ನಾಗಿರುತ್ತೆ ಅಂತ ಕಂಪೆನಿ ಹೇಳಿಕೊಂಡಿದೆ. ಈ ಟಿವಿಗಳು ಅಮೆಜಾನ್ ಪೇನಲ್ಲಿ ಲಭ್ಯ.
ಅಮೆಜಾನ್ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಈ ಟಿವಿಯನ್ನು ಒನಿಡಾ ಮಾರುಕಟ್ಟೆಗೆ ಬಿಟ್ಟಿದೆ. 32 ಇಂಚಿನ ಬೆಲೆ12999 ಆಗಿದ್ದರೆ, 43 ಇಂಚು ಟಿವಿ ಬೆಲೆ 21999 ರು. ಆಗಿದೆ.