
ವಾಷಿಂಗ್ಟನ್(ಡಿ.15): ನಮ್ಮ ಕ್ಷಿರಪಥ ನಕ್ಷತ್ರಪುಂಜದ ಭಾಗವಾದ ಧೂಮಕೇತುವೊಂದು ಸೌರಮಂಡಲದ ಪರಿಧಿಯೊಳಗೆ ಪ್ರವೇಶಿಸಿದ್ದು, ಇದೇ ಮೊದಲ ಬಾರಿಗೆ ಅಂತರ್ ತಾರಾವಲಯದಿಂದ ಧೂಮಕೇತುವೊಂದು ಸೌರಮಂಡಲ ಪ್ರವೇಶಿಸಿದೆ.
ಕಾಮೆಟ್ 2ಐ/ಬೋರಿಸೊವ್ ಎಂಬ ಹೆಸರಿನ ಈ ಧೂಮಕೇತುವನ್ನು ಕಳೆದ ಆಗಸ್ಟ್ 30, 2019 ರಂದು ಕ್ರಿಮಿಯಾದ ಹವ್ಯಾಸಿ ಖಗೋಳ ವಿಜ್ಞಾನಿ ಗೆನ್ನಡಿ ಬೊರಿಸೊವ್ ಕಂಡುಹಿಡಿದರು. ಈ ಹಿನ್ನೆಲೆಯಲ್ಲಿ ಇದಕ್ಕೆ ಬೋರಿಸೊವ್ ಎಂದು ಹೆಸರಿಸಲಾಗಿದೆ.
ಹಬಲ್ ಗುರುತಿಸಿದ ಈ ಗ್ಯಾಲಕ್ಸಿ ಸೂಪರ್ ನೋವಾಗಳ ಮದರ್‌ಲ್ಯಾಂಡ್!
ಕಾಮೆಟ್ 2ಐ/ಬೋರಿಸೊವ್ ಧೂಮಕೇತುವನ್ನು ಹಬಲ್ ಟೆಲಿಸ್ಕೋಪ್ ತನ್ನ ಕ್ಯಾಮರಾಗಳಲ್ಲಿ ಸೆರೆಹಿಡಿದಿದೆ. ಮೊದಲ ಫೋಟೋವನ್ನು 16 ನವೆಂಬರ್ 2019ರಂದು ಕ್ಲಿಕ್ಕಿಸಲಾಗಿದ್ದು, ಧೂಮಕೇತುವಿನ ಬೆಳಕಿನ ಹಿಂದೆ ಇಡೀ ಮಿಲ್ಕಿ ವೇ ಗ್ಯಾಲಕ್ಸಿ ಕಾಣುತ್ತಿರುವುದು ಸ್ಪಷ್ಟವಾಗಿದೆ.
ಭೂಮಿಯಿಂದ 327 ದಶಲಕ್ಷ ಕಿ.ಮೀ ದೂರದಲ್ಲಿರುವ ಕಾಮೆಟ್ 2ಐ/ಬೋರಿಸೊವ್ ಧೂಮಕೇತುವಿನ ಬಾಲ ಫೋಟೋದಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ.
ಎರಡನೇಯ ಫೋಟೋದಲ್ಲಿ ಕಾಮೆಟ್ 2ಐ/ಬೋರಿಸೊವ್ ಧೂಮಕೇತು ಸೂರ್ಯನ ಹತ್ತಿರಕ್ಕೆ ಬಂದಿದ್ದು, ಡಿ.28ಕ್ಕೆ ಭೂಮಿಯಿಂದ ಕೇವಲ 290 ದಶಲಕ್ಷ ಕಿ.ಮೀ. ದೂರದಿಂದ ಹಾದು ಹೋಗಲಿದೆ.
ಹಬಲ್ ಕಣ್ಣಿಗೆ ಬಿದ್ದ ಸುಂದರ ನೀಲಿ ನಕ್ಷತ್ರಗಳ ಗ್ಯಾಲಕ್ಸಿ!
ಕಾಮೆಟ್ 2ಐ/ಬೋರಿಸೊವ್ ಕೇವಲ ಒಂದು ಕಿ.ಮೀ ವ್ಯಾಸ ಹೊಂದಿರುವುದು ವಿಶೇಷ ಎಂದು ನಾಸಾ ಹೇಳಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.