ವಾಟ್ಸಪ್ ಸುಲಭವಾಗಿ ಡೌನ್‌ಲೋಡ್ ಮಾಡಬಹುದಾದ ಬಿಲ್ಟ್ ಇನ್ ಸ್ಟಿಕ್ಕರ್ ಗ್ಯಾಲರಿಯನ್ನು ಹೊಂದಿದೆ. ಆದಾಗ್ಯೂ, ವಾಟ್ಸಪ್ ಸೀಮಿತ ಪ್ರಮಾಣದಲ್ಲಿ ಸ್ಟಿಕ್ಕರ್‌ಗಳನ್ನು ಒದಗಿಸುತ್ತದೆ. ಆದರೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸಿ ನೀವು ವಿವಿಧ ಸ್ಟಿಕ್ಕರ್‌ಗಳು ಮತ್ತು ಜಿಐಎಫ್ (GIF) ಬಳಕೆ ಮಾಡಬಹುದು.
Tech Desk: ಹೊಸ ವರ್ಷ 2022ರ (New Year) ಆರಂಭಕ್ಕೆ ಕೇವಲ 1 ದಿನ ಬಾಕಿ ಇದೆ. ಈ ಹೊಸ ವರ್ಷವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಹಿಂದಿನ ವರ್ಷಕ್ಕೆ ವಿದಾಯ ಹೇಳಲು ಮತ್ತು ಹೊಸ ವರ್ಷವನ್ನು ಅತ್ಯಂತ ಸಂಭ್ರಮದಿಂದ ಸ್ವಾಗತಿಸಲು ಜನರು ಸಿದ್ಧರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊರೋನಾ ಹಿನ್ನೆಲೆ (Covid 19) ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿತ್ತು. ಈ ವರ್ಷ ಕೂಡ ಕೋವಿಡ್ ಹೊಸ ರೂಪಾಂತರಿ ಒಮಿಕ್ರೋನ್ ಭೀತಿ (Omicron Variant) ಕೂಡ ಇದೆ. ಈಗಾಗಲೇ ಹಲವು ರಾಜ್ಯಗಳು ನ್ಯೂ ಇಯರ್ ಸೆಲೆಬ್ರೇಷನ್‌ಗೆ ಬ್ರೇಕ್ ಹಾಕಿವೆ.
ಆದರೆ ಹೊಸ ವರ್ಷ ಎಂದ ಮೇಲೆ ಶುಭಾಶಯ ಕೋರದೆ ಇರಲು ಸಾಧ್ಯವೇ? ಖಂಡಿತಾ ಇಲ್ಲ! ಯಾವುದೇ ಹಬ್ಬವಿರಲಿ, ಸಂಭ್ರಮಾಚರಣೆ ಇರಲಿ ವಾಟ್ಸಪ್ ಫೇಸ್‌ಬುಕ್ ಹಾಗೂ ಇತರ ಸಾಮಾಜಿಕ ಜಾಲತಣಾಗಳಲ್ಲಿ ಸ್ಟಿಕ್ಕರ್‌ಗಳ ಮೂಲಕ ಶುಭಾಶಯ ಕೋರುವುದು ಇತ್ತೀಚೆಗಿನ ಟ್ರೆಂಡ್. ನಮ್ಮಿಂದ ದೂರವಿರುವ ನಮ್ಮ ಆತ್ಮೀಯರೊಂದಿಗೆ ಬೆಸೆಯಲು ತಂತ್ರಜ್ಞಾನ ಈ ರೀತಿಯ ಹಲವು ಸುಲಭ ಮಾರ್ಗಗಳನ್ನು ನೀಡುತ್ತದೆ. ಹೊಸ ವರ್ಷದ ಶುಭಾಷಯ ಕೋರಲು ಅತ್ಯಂತ ಸುಲಭವಾಗಿ ಲಭ್ಯವಿರುವ ಮೇಸೆಜಿಂಗ್ ಫ್ಲಾಟ್‌ಫಾರ್ಮ್ ವಾಟ್ಸಪ್. ಹಾಗಾದರೆ ಹೊಸ ವರ್ಷದ ಶುಭಾಶಯ ಕೋರುವ ವಾಟ್ಸಪ್ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?
ವಾಟ್ಸಪ್ ಸುಲಭವಾಗಿ ಡೌನ್‌ಲೋಡ್ ಮಾಡಬಹುದಾದ ಬಿಲ್ಟ್ ಇನ್ ಸ್ಟಿಕ್ಕರ್ ಗ್ಯಾಲರಿಯನ್ನು ಹೊಂದಿದೆ. ಆದಾಗ್ಯೂ, ವಾಟ್ಸಪ್ ಸೀಮಿತ ಪ್ರಮಾಣದಲ್ಲಿ ಸ್ಟಿಕ್ಕರ್‌ಗಳನ್ನು ಒದಗಿಸುತ್ತದೆ. ಆದರೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸಿ ನೀವು ವಿವಿಧ ಸ್ಟಿಕ್ಕರ್‌ಗಳು ಮತ್ತು ಜಿಐಎಫ್ (GIF) ಬಳಕೆ ಮಾಡಬಹುದು.
ಹೊಸ ವರ್ಷದ ವಾಟ್ಸಪ್ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?
*Google Play ಗೆ ಹೋಗಿ
*New Year 2022 stickers for WhatsApp ಎಂದು ಟೈಪ್ ಮಾಡಿ
*Google Play ಈಗ ವಿವಿಧ ಸ್ಟಿಕ್ಕರ್ ಆಯ್ಕೆಗಳನ್ನು ತೋರಿಸುತ್ತದೆ
*ನಿಮ್ಮ ಆದ್ಯತೆಯ ಯಾವುದೇ ಅಪ್ಲಿಕೇಶನ್‌ನೊಂದಿಗೆ ನೀವು ಡೌನ್‌ಲೋಡ್ ಮಾಡಬಹುದು.
*ಆದರೆ ಸ್ಪ್ಯಾಮ್ ಅಪ್ಲಿಕೇಶನ್ ಡೌನ್‌ಲೋಡ್ ಆಗದಂತೆ ಎಚ್ಚರವಹಿಸಿ
*ಡೌನ್‌ಲೋಡ್ ಮಾಡುವ ಮುನ್ನ ನೀವು ಆ್ಯಪ್ ರೇಟಿಂಗ್ ಅನ್ನು ಸಹ ಪರಿಶೀಲಿಸಬಹುದು
*ಅನೇಕ ಅಪ್ಲಿಕೇಶನ್‌ಗಳು ಅನಿಮೇಟೆಡ್ ಮತ್ತು ಕಸ್ಟಮೈಸ್ ಮಾಡಿದ ವೈಶಿಷ್ಟ್ಯಗಳನ್ನು ಸಹ ನೀಡುತ್ತವೆ
*ನೀವು ಇಷ್ಟಪಡುವ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ
ವಾಟ್ಸಪ್ ಸ್ಟಿಕ್ಕರ್‌ಗಳನ್ನು ಬಳಸುವುದು ಹೇಗೆ?
*ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್ ತೆರೆಯಿರಿ
*ನಿಮ್ಮ ಆಯ್ಕೆಯ ಸ್ಟಿಕರ್ ಮೇಲೆ ಟ್ಯಾಪ್ ಮಾಡಿ Add to WhatsApp ಮೇಲೆ ಕ್ಲಿಕ್ ಮಾಡಿ
*ನಿಮ್ಮ ಪ್ರೀತಿಪಾತ್ರರನ್ನು ಹಾರೈಸಲು ನೀವು ಈಗ ಆ ಯಾವುದೇ ಸ್ಟಿಕ್ಕರ್‌ಗಳನ್ನು ಬಳಸಬಹುದು
*ಸ್ಟಿಕ್ಕರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆಯೇ ಎಂದು ಪರಿಶೀಲಿಸಲು
*ವಾಟ್ಸಾಪ್ ತೆರೆಯಿರಿ ಹಾಗೂ ನೀವು ಬಯಸುವ ವ್ಯಕ್ತಿಯ ಚಾಟ್ ವಿಂಡೋಗೆ ಹೋಗಿ
*ಟೈಪಿಂಗ್ ಬಾರ್‌ನಲ್ಲಿರುವ ಸ್ಮೈಲಿ ಐಕಾನ್ ಮೇಲೆ ಕ್ಲಿಕ್ ಮಾಡಿ
*ಸ್ಟಿಕ್ಕರ್‌ಗಳ ವಿಭಾಗಕ್ಕೆ ಹೋಗಿ
*ಇಲ್ಲಿ ನೀವು ಹೊಸ ವರ್ಷ 2022 ಕ್ಕೆ ಹೊಸದಾಗಿ ಸೇರಿಸಲಾದ ಸ್ಟಿಕ್ಕರ್‌ಗಳನ್ನು ಸುಲಭವಾಗಿ ನೋಡಬಹುದು ಹಾಗೂ ನಿಮ್ಮ ಪ್ರೀತಿ ಪಾತ್ರರಿಗೆ ಅವುಗಳನ್ನು ಕಳುಹಿಸಬಹುದು.
ಇದನ್ನೂ ಓದಿ:
1) Amazon's Best Phone: ಐಫೋನ್ 13 ಅಮೆಜಾನ್ ಗ್ರಾಹಕರ ಆಯ್ಕೆಯ ವರ್ಷದ ಅತ್ಯುತ್ತಮ ಸ್ಮಾರ್ಟ್‌ಫೋನ್!
2) 3D Printed Burgers: ಇಸ್ರೇಲ್‌ನ ಕಸ್ಟಮೈಸಡ್ ಪ್ರಿಂಟೆಡ್ ಬರ್ಗರ್ 6 ನಿಮಿಷದಲ್ಲಿ ಸವಿಯಲು ಸಿದ್ಧ!
3) 5G Launch in India: 13 ಮಹಾನಗರಗಳಲ್ಲಿ 2022ಕ್ಕೆ ಸೇವೆ ಆರಂಭ: 4Gಗಿಂತ 100 % ಹೆಚ್ಚು ವೇಗದ ಇಂಟರ್ನೆಟ್!