Military Clothing System: -50ಡಿಗ್ರಿ ಸೆಲ್ಸಿಯಸ್ ತಾಪಮಾನ ತಡೆಯಬಲ್ಲ ಸೇನಾ ಉಡುಪು ಭಾರತದಲ್ಲೇ ಅಭಿವೃದ್ಧಿ!

By Suvarna News  |  First Published Dec 30, 2021, 8:29 AM IST

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ಐದು ಭಾರತೀಯ ಕಂಪನಿಗಳಿಗೆ ಮಿಲಿಟರಿ ದರ್ಜೆಯ ಬಟ್ಟೆಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಹಸ್ತಾಂತರಿಸಿದೆ.


Tech Desk: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ಐದು ಭಾರತೀಯ ಕಂಪನಿಗಳಿಗೆ ಮಿಲಿಟರಿ ದರ್ಜೆಯ ಬಟ್ಟೆಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಹಸ್ತಾಂತರಿಸಿದೆ. ಇದು ಹಿಮಾಲಯದ ಶಿಖರಗಳಲ್ಲಿ ಸೇನೆ ತನ್ನ ಕಾರ್ಯಾಚರಣೆಯನ್ನು ನಡೆಸಲು  ವಿದೇಶಿಗಳಿಂದ ತೀವ್ರವಾದ ಶೀತ ಹವಾಮಾನದ ಉಡುಪುಗಳನ್ನು (Extreme Cold Weather Clothing System) ಆಮದು ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಲಿದೆ. ಈ ತಂತ್ರಜ್ಞಾನವನ್ನು ದೇಶೀಯ ಕಂಪನಿಗಳಿಗೆ ವರ್ಗಾಯಿಸಲಾಗಿದ್ದೂ ಇದರಿಂದ ಅವರು ಮಿಲಿಟರಿ ದರ್ಜೆಯ (Military Standard) ಬಟ್ಟೆಗಳನ್ನು ಭಾರತೀಯ ಸೇನೆಗೆ ನೀಡುವುದಲ್ಲದೇ ಇತರ ದೇಶಗಳಿಗೆ ರಫ್ತು ಕೂಡ ಮಾಡಬಹುದಾಗಿದೆ.

ಹಿಮನದಿಗಳು ಮತ್ತು ಹಿಮಾಲಯ ಶಿಖರಗಳಲ್ಲಿ ತನ್ನ ನಿರಂತರ ಕಾರ್ಯಾಚರಣೆಗಾಗಿ ಭಾರತೀಯ ಸೇನೆಗೆ ತೀವ್ರವಾದ ECWS ಅಗತ್ಯವಿದೆ. ಭಾರತೀಯ ಸೇನೆಯು ಇತ್ತೀಚಿನವರೆಗೂ, ಅತಿ ಎತ್ತರದ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳಿಗೆ ತೀವ್ರ ಶೀತ ಹವಾಮಾನದ ಉಡುಪುಗಳು ಮತ್ತು ಹಲವಾರು ವಿಶೇಷ ಉಡುಪು ಮತ್ತು ಪರ್ವತಾರೋಹಣ ಸಲಕರಣೆ (SCME) ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು.

Tap to resize

Latest Videos

undefined

-50 ಡಿಗ್ರಿ ಸೆಲ್ಸಿಯಸ್ ತಾಪಮಾನ ತಡೆಯಬಲ್ಲ ಉಡುಪು!

ಡಿಆರ್‌ಡಿಓದ ದೆಹಲಿ ಮೂಲದ ಲ್ಯಾಬ್ ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯಾಲಜಿ ಅಂಡ್ ಅಲೈಡ್ ಸೈನ್ಸಸ್ (DIPAS) ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದೆ. ಈ ತೀವ್ರವಾದ ಶೀತ ಹವಾಮಾನದ ಉಡುಪು ಮೂರು-ಪದರದ ವ್ಯವಸ್ಥೆಯಾಗಿದ್ದು, ಇದು +15 ಡಿಗ್ರಿ ಸೆಲ್ಸಿಯಸ್‌ನಿಂದ  -50 ಡಿಗ್ರಿ ಸೆಲ್ಸಿಯಸ್ ನಡುವೆ ಉಷ್ಣ ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ವಿವಿಧ ಹಂತದ ದೈಹಿಕ ಚಟುವಟಿಕೆಯ ಸಮಯದಲ್ಲಿ ಹಿಮಾಲಯ ಪ್ರದೇಶಗಳಲ್ಲಿನ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಹೊಸ ತೀವ್ರವಾದ ಶೀತ ಹವಾಮಾನದ ಉಡುಪುಗಳನ್ನು ಐದು ವಿವಧ ದೈಹಿಕ ಚಟುವಟಿಕೆಗಳಿಗೆ ವಿನ್ಯಾಸಗೊಳಿಸಲಾಗಿದೆ. 

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಈ ಉಡುಪುಗಳಲ್ಲಿ ಗಾಳಿಯ ಚಲನವಲನೆಗೂ ಸಾಕಷ್ಟು ಜಾಗ ನೀಡಲಾಗಿದ್ದು, ಬೆವರಿನ ತ್ವರಿತ ಹೀರಿಕೊಳ್ಳುವಿಕೆ ಹಾಗೂ ವಾಟರ್‌ಪ್ರೂಫ್‌, ಕಡಿಮೆ ಶಾಖ ಮತ್ತು ನೀರಿನ ನಷ್ಟ ತಡೆಯುವಿಕೆ ಸೇರಿದಂತೆ  ಹೆಚ್ಚಿನ ಎತ್ತರದ ಕಾರ್ಯಾಚರಣೆಗಳಿಗೆ ಅಗತ್ಯವಿರುವ ವೈಶಿಷ್ಟ್ಯಗಳನ್ನು  ECWC ತಂತ್ರಜ್ಞಾನ ಒದಗಿಸುತ್ತೆ.

 

Secretary, DD R&D and Chairman Defence Research and Development Organisation (DRDO) Dr G Satheesh Reddy handed over technology for indigenous extreme cold weather clothing system (ECWS) to 05 Indian companies in New Delhi on Dec 27, 2021.https://t.co/NF4UazIC1W pic.twitter.com/XjZssHJGxq

— PRO, Hyderabad, Ministry of Defence (@dprohyd)

 

ರಫ್ತು ಸಾಮರ್ಥ್ಯವನ್ನು ಕೂಡ ಹೆಚ್ಚಿಸುತ್ತದೆ!

ಹಮಾಲಯದ ಶಿಖರಗಳಲ್ಲಿನ ಹವಾಮಾನವು ವ್ಯಾಪಕವಾಗಿ ಏರಿಳಿತವಾಗುತ್ತದೆ. ಇಲ್ಲಿ ಹವಾಮಾನ ಸ್ಥಿರತೆ ಕಂಡುಬರುವುದಿಲ್ಲ.  ಹಾಗಾಗಿ ಹೊಸ ತೀವ್ರವಾದ ಶೀತ ಹವಾಮಾನದ ಉಡುಪುಗಳು ಚಾಲ್ತಿಯಲ್ಲಿರುವ ಹವಾಮಾನ ಪರಿಸ್ಥಿತಿಗಳಿಗೆ ಅಗತ್ಯವಾದ ನಿರೋಧನವನ್ನು ಪೂರೈಸುತ್ತದೆ.  ಡಿಆರ್‌ಡಿಒ ಅಧ್ಯಕ್ಷ ಜಿ ಸತೀಶ್ ರೆಡ್ಡಿ ಮಾತನಾಡಿ, ವಿಶೇಷ ಉಡುಪು ಮತ್ತು ಪರ್ವತಾರೋಹಣ ಉಪಕರಣಗಳ ವಸ್ತುಗಳಿಗೆ ಸ್ಥಳೀಯ ಕೈಗಾರಿಕಾ ನೆಲೆಯನ್ನು ಅಭಿವೃದ್ಧಿಪಡಿಸುವುದು ಸೇನೆಯ ಅಗತ್ಯತೆಗಳನ್ನು ಮಾತ್ರವಲ್ಲದೆ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

1) Narendra Modi New Car: ಮರ್ಸಿಡೀಸ್ ಮೇಬ್ಯಾಕ್ ಎಸ್ 650ಗೆ 12 ಕೋಟಿ ಅಲ್ಲ, ಕೇವಲ 3 ಕೋಟಿ!

2) Foxconn Tamil Nadu: ಚೆನ್ನೈನ ಐಫೋನ್ ಕಾರ್ಖಾನೆ ಮೌಲ್ಯಮಾಪನಕ್ಕೆ ಅಧಿಕಾರಿ ನೇಮಿಸಿದ ಆ್ಯಪಲ್‌!

3) Defence Salary Package Scheme ಭಾರತೀಯ ಸೇನಾ ಯೋಧರು, ಕುಟುಂಬದ ರಕ್ಷಣಾ ಪ್ಯಾಕೇಜ್ ನವೀಕರಿಸಿದ SBI!

click me!