ಒಂದು ಬಟನ್ ಒತ್ತಿದ್ರೆ Jio-Airtelನಿಂದ ಸಿಗುತ್ತೆ ಮುಕ್ತಿ; ಕೆಲವೇ ನಿಮಿಷದಲ್ಲಿ ಮನೆಗೆ ಬರುತ್ತೆ BSNL 4G ಸಿಮ್

By Mahmad Rafik  |  First Published Sep 19, 2024, 12:41 PM IST

ಕಡಿಮೆ ಬೆಲೆ ಪ್ಲಾನ್‌ಗಳಿಂದಾಗಿ ಬಿಎಸ್‌ಎನ್‌ಎಲ್‌ಗೆ ಬದಲಾಗಲು ಬಯಸುವವರಿಗೆ ಮನೆ ಬಾಗಿಲಿಗೆ 4G ಸಿಮ್ ತಲುಪಿಸುವ ಸೇವೆ ಲಭ್ಯವಿದೆ.


ನವದೆಹಲಿ: ಕಡಿಮೆ ಬೆಲೆ ಪ್ಲಾನ್‌ಗಳಿಂದ ಇಡೀ ದೇಶದ ತುಂಬೆಲ್ಲಾ ಬಿಎಸ್‌ಎನ್‌ಎಲ್ ಸುನಾಮಿ ಶುರುವಾಗಿದೆ. ಮತ್ತೊಂದೆಡೆ ಬಿಎಸ್‌ಎನ್ಎಲ್ 4G ನೆಟ್‌ವರ್ಕ್ ಅಳವಡಿಕೆಯ ಕಾರ್ಯವೂ ವೇಗವಾಗಿ ನಡೆಯುತ್ತಿದೆ. ಈ ಎಲ್ಲಾ ಕಾರಣಗಳಿಂದ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಬಳಕೆದಾರರು ಹಂತ ಹಂತವಾಗಿ ಬಿಎಸ್‌ಎನ್‌ಎಲ್‌ನತ್ತ ಬರುತ್ತಿದ್ದಾರೆ. ಅದರಲ್ಲಿಯೂ ಟ್ಯಾರಿಫ್ ಬೆಲೆ ಏರಿಕೆ ಕಾರಣ ಜನರು ಖಾಸಗಿ ಕಂಪನಿಗಳಿಂದ ಸರ್ಕಾರಿಕಂಪನಿಯತ್ತ ಮುಖ ಮಾಡುತ್ತಿದ್ದಾರೆ. ಒಂದು ವೇಳೆ ಬಿಎಸ್‌ಎನ್‌ಎಲ್ 4G ಸಿಮ್‌ಗಾಗಿ ಕಾಯುತ್ತಿದ್ರೆ, ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ. ಇನ್ಮುಂದೆ 4G ಸಿಮ್‌ಗಾಗಿ ಕಾಯೋದು ಬೇಕಿಲ್ಲ. ಮನೆ ಬಾಗಿಲಿಗೆ ಸಿಮ್ ಬರುತ್ತದೆ. 

ಇದುವರೆಗೂ ಭಾರತದದಲ್ಲಿ ಬಿಎಸ್‌ಎನ್ಎಲ್ 25,000 4ಜಿ ಟವರ್ ಅಳವಡಿಕೆ ಮಾಡಲಾಗಿದ್ದು, ಈ ಪ್ರಕ್ರಿಯೆಗೆ ಟಾಟಾ ಸಂಸ್ಥೆ ಸಾಥ್ ನೀಡುತ್ತಿದೆ. ಈ ಮೂಲಕ ದೇಶದ ಅತಿದೊಡ್ಡ ನೆಟ್‌ವರ್ಕ್‌ವಾಗಿ ಬಿಎಸ್‌ಎನ್‌ಎಲ್ ಹೆಜ್ಜೆ ಇರಿಸುತ್ತಿದೆ. ಈ ಮೂಲಕ ಅತ್ಯಂತ ಸ್ಪೀಡ್ ಮತ್ತು ವಿಶ್ವಾಸನೀಯ ನೆಟ್‌ವರ್ಕ್ ಸೇವೆ ನೀಡುವ ಗುರಿಯನ್ನು ಬಿಎಸ್‌ಎನ್‌ಎಲ್ ಹೊಂದಿದೆ.

Tap to resize

Latest Videos

undefined

ದೂರವಾಯ್ತು ಬಿಎಸ್‌ಎನ್‌ಎಲ್‌ಗೆ ಇದ್ದ ಸಮಸ್ಯೆ-  ಕೈ ಜೋಡಿಸಿದ  ದೇಶಿ ಕಂಪನಿ  

LILO App
ಈಗಾಗಲೇ ದೇಶದ ಕೆಲವು ಪ್ರದೇಶಗಳಲ್ಲಿ ಬಿಎಸ್ಎನ್ಎಲ್ 4ಜಿ ನೆಟ್‌ವರ್ಕ್ ಸೇವೆ ಆರಂಭಗೊಂಡಿದೆ. ಕೇರಳ, ಪುಣೆ  ಸೇರಿದಂತೆ ಕೆಲವು ಭಾಗಗಳಲ್ಲಿ ಬಳಕೆದಾರರು 4ಜಿ ಸೇವೆಯನ್ನು ಬಳಸುತ್ತಿದ್ದಾರೆ. ಒಂದು ವೇಳೆ ನೀವು ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಹುಡುಕುತ್ತಿದ್ರೆ, ನಿಮ್ಮ ನೆಟ್‌ವರ್ಕ್‌ನ್ನು ಬಿಎಸ್‌ಎನ್‌ಎಲ್‌ಗೆ ಬದಲಿಸುತ್ತಿದ್ದರೆ ಸಿಮ್ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ನೀವು LILO ಆಪ್ ಮೂಲಕ 4G ಸಿಮ್ ಬುಕ್ ಮಾಡಬಹುದು. ಈ ಆಪ್ Android ಮತ್ತು iOSನಲ್ಲಿ ಲಭ್ಯವಿದೆ. ಇದರಿಂದ ಬಿಎಸ್‌ಎನ್‌ಎಲ್ ಸಿಮ್ ಮನೆಯ ಬಾಗಿಲಿಗೆ ತಲುಪಿಸಲಾಗುತ್ತದೆ.

ಒಂದು ವೇಳೆ ನೀವು ಆಪ್ ಡೌನ್‌ಲೋಡ್ ಮಾಡಿಕೊಳ್ಳಲು ಇಷ್ವವಾಗದಿದ್ರೆ ಯಾವುದೇ ತೊಂದರೆ ಇಲ್ಲ. ಬಿಎಸ್‌ಎನ್‌ಎಲ್ 4G ಸಿಮ್  ಆರ್ಡರ್ ಮಾಡಲು ಮತ್ತೊಂದು ಆಯ್ಕೆಯನ್ನು ಗ್ರಾಹಕರಿಗೆ ನೀಡುತ್ತಿದೆ. ವಾಟ್ಸಪ್‌ನಲ್ಲಿ Hi ಎಂದು ಟೈಪ್ ಮಾಡಿ 8891767525 ಸಂಖ್ಯೆಗೆ ಮೆಸೇಜ್ ಮಾಡಬೇಕು. ಈ ಮೂಲಕ ಯಾವುದೇ ಚಿಂತೆ ಇಲ್ಲದೇ ನಿಮ್ಮ ನೆಟ್‌ವರ್ಕ್ ಬದಲಿಸಿಕೊಳ್ಳಬಹುದು.

ಬಿಎಸ್‌ಎನ್‌ಎಲ್‌ 4G ಲಾಂಚ್ ಯಾವಾಗ? ಮೋದಿ ಸರ್ಕಾರದಿಂದ ಮಹತ್ವದ ಮಾಹಿತಿ

click me!