ಜಾಹಿರಾತು ಏನೂ ಇಲ್ಲದೇ ವಾಟ್ಸ್​​ಆ್ಯಪ್‌ಗೆ ಹಣ ಏಲ್ಲಿಂದ ಬರುತ್ತೆ ಗೊತ್ತೇ?

By Shashishekar P  |  First Published Nov 7, 2022, 12:08 PM IST

How does WhatsApp make money: ಉಚಿತ ಸೇವೆಯನ್ನು ನಿಡುತ್ತಿರುವ ವಾಟ್ಸ್ಆ್ಯಪ್ ಹೇಗೆ ಹಣಗಳಿಸುತ್ತದೆ? ಇಲ್ಲಿದೆ ಮಾಹಿತಿ 


ಮೊಬೈಲ್ ನಲ್ಲಿ ನೀವು ಯಾವುದೇ ಆ್ಯಪ್ (Applications) ಡೌನ್ಲೋಡ್ ಮಾಡಿ ಬಳಕೆ ಮಾಡಿದರೂ ಅವುಗಳಲ್ಲೆಲ್ಲಾ ಜಾಹಿರಾತುಗಳು ಕಾಣಿಸಿಕೊಳ್ಳುತ್ತವೆ. ಒಂದು ವೇಳೆ ನೀವು ಡೌನ್‌ಲೋಡ್ ಮಾಡಿದ ಆ್ಯಪ್‌ನಲ್ಲಿ ಜಾಹಿರಾತು ಕಾಣಿಸದಿದ್ದರೂ ಕೂಡ ಅದು ನಿಮ್ಮಿಂದ ಹಣ ಪಡೆಯಲು ಪ್ರಯತ್ನಿಸುತ್ತದೆ ಎಂದರೆ, ಇದು ಆ ಆ್ಯಪ್ ನಿರ್ಮಾತೃಗಳ ಸಹಜ ಆದಾಯದ ಮೂಲ ಎಂಬುದನ್ನು ನಾವೇನು ನಿಮಗೆ ತಿಳಿಸಿಕೊಡಬೇಕಿಲ್ಲ. ನಿಮಗೆಲ್ಲಾ ತಿಳಿದಿರುವಂತೆ, ಯಾವುದೇ ಸೇವೆಗೆ ಹಣ ಪಡೆಯುವಂತೆ ಆ್ಯಪ್ ನಿರ್ಮಾಣ ಮಾಡಿದವರು ಸಹ ತಮ್ಮ ಸೇವೆಗೆ ಹಣ ಪಡೆಯುತ್ತಾರೆ ಎಂಬುದು ನಿಜ. ಆದರೆ, ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ 'ವಾಟ್ಸ್ಆ್ಯಪ್' (WhatsApp) ಯಾವುದೇ ಜಾಹಿರಾತು ನೀಡದೇ, ಉಚಿತವಾಗಿ ಸೇವೆ ನೀಡಿ ಹಣ ಗಳಿಸುವುದು ಹೇಗೆ ಎಂಬುದು ನಿಮಗೆ ಗೊತ್ತಾ? 

ಹೌದು, ಕೇವಲ 150 ಕೋಟಿ ಡಾಲರ್ ಬೆಲೆಯನ್ನು ಹೊಂದಿದ್ದ ವಾಟ್ಸ್ಆ್ಯಪ್ ಅನ್ನು ಫೇಸ್‌ಬುಕ್‌ (Facebook) ಕಂಪೆನಿ ಬರೋಬ್ಬರಿ 1,900 ಕೋಟಿ ಡಾಲರ್‌ ಕೊಟ್ಟು ಖರೀದಿಸಿ ನಂತರ ಉಚಿತವಾಗಿ ಸೇವೆ ನೀಡುತ್ತದೆ ಎಂದರೆ ಎಲ್ಲರಿಗೂ ಆಶ್ಚರ್ಯವಾಗುತ್ತದೆ ಅಲ್ಲವೇ. ಹಾಗಾದರೆ, ಉಚಿತ ಸೇವೆಯನ್ನು ನಿಡುತ್ತಿರುವ ವಾಟ್ಸ್ಆ್ಯಪ್ ಹೇಗೆ ಹಣಗಳಿಸುತ್ತದೆ ಎಂಬುದನ್ನು ನಾವು ತಿಳಿಯೋಣ!

Tap to resize

Latest Videos

undefined

ವಾಟ್ಸ್ಆ್ಯಪ್ ಆದಾಯವನ್ನು ಬಿಟ್ಟುಕೊಟ್ಟಿಲ್ಲ. ಹೌದು, ಫೇಸ್‌ಬುಕ್ ಕಂಪೆನಿ ವಾಟ್ಸ್ಆ್ಯಪ್ ಅನ್ನು ಖರೀದಿಸಿ ಉಚಿತ ಸೇವೆಯನ್ನು ನಿಡಿದ ನಂತರ, ಇಲ್ಲಿಯವರೆಗೂ ವಾಟ್ಸ್ಆ್ಯಪ್ ಆದಾಯ ಎಷ್ಟು ಮತ್ತು ಯಾವ ಮೂಲದಿಂದ ಆದಾಯ ಪಡೆಯುತ್ತಿದೆ ಎಂದು ಯಾರಿಗೂ ತಿಳಿದಿಲ್ಲ. ಫೇಸ್‌ಬುಕ್ ಕಂಪನಿ ಕೂಡ ಈ ಬಗ್ಗೆ ಮಾಹಿತಿ ನೀಡದೇ ಇರುವುದರಿಂದ ಯಾರಿಗೂ ವಾಟ್ಸ್ಆ್ಯಪ್ ಹೇಗೆ ಹಣಗಳಿಸುತ್ತಿದೆ ಎಂಬ ಸ್ಪಷ್ಟ ಮಾಹಿತಿ ಇಲ್ಲ.

Whatsapp ಹೊಸ ಫೀಚರ್ಸ್ , ಗ್ರೂಪ್ ಸದಸ್ಯರ ಮಿತಿ 1024ಕ್ಕೆ ಏರಿಕೆ, 32 ಮಂದಿಗೆ ವಿಡಿಯೋ ಕಾಲ್!

ಆದರೆ, ವಾಟ್ಸ್ಆ್ಯಪ್‌ಗೆ ನೇರ ಆದಾಯವಿಲ್ಲ. ಮೊದಲೇ ಹೇಳಿದಂತೆ ವಾಟ್ಸ್ಆ್ಯಪ್ ಉಚಿತ ಸೇವೆಯನ್ನು ನೀಡುತ್ತಿರುವುದರಿಂದ ಅದಕ್ಕೆ ನೇರ ಆದಾಯವಿಲ್ಲ. ಜಾಹಿರಾತುಗಳನ್ನು ನಿಡದೇ, ಬಳಕೆದಾರರಿಂದ ಹಣ ಸಂಗ್ರಹಿಸದೇ ವಾಟ್ಸ್‌ಆಪ್ ನೇರವಾಗಿ ಹಣ ಗಳಿಸಲು ಸಾಧ್ಯವಿಲ್ಲ. ಅಂದರೆ ವಾಟ್ಸ್ಆ್ಯಪ್ ಒಂದು ಉಚಿತವಾಗಿಯೇ ಸೇವೆ ನೀಡಬೇಕು ಅಥವಾ ಇತರೆ ಮೂಲಗಳಿಂದ ಹಣ ಗಳಿಸಬೇಕು.

ಡೇಟಾ ಮಾರಿಕೊಳ್ಳುತ್ತಿದೆಯೇ?: ಜಾಹಿರಾತುಗಳನ್ನು ನಿಡದೇ, ಬಳಕೆದಾರರಿಂದ ಹಣ ಸಂಗ್ರಹಿಸದೇ ವಾಟ್ಸ್ಆ್ಯಪ್ ಹಣಗಳಿಸಲು ಡೇಟಾ ಮಾರಿಕೊಳ್ಳುತ್ತಿದೆಯೇ ಎಂಬ ಅನುಮಾನ ಬಹುತೇಕರಿಗೆ ಕಾಡಿದೆ. ಆದರೆ, ವಾಟ್ಸ್ಆ್ಯಪ್ನಲ್ಲಿರುವ ಬಳೆಕೆದಾರರ ಸ್ನೇಹಿಯಾದ ಅಂಶ 'ಎನ್‌ಕ್ರಿಪ್ಷನ್' ಬಳಕೆದಾರರ ಮೆಸೇಜ್‌ಗಳನ್ನು ಗೌಪ್ಯವಾಗಿಡುವ ಹೊಣೆ ಹೊತ್ತಿರುವುದರಿಂದ ಇದರಿಮದ ಸಹ ಹಣ ಗಳಿಸಲು ಸಾಧ್ಯವಿಲ್ಲ.

ನಿಮ್ಮ ಸ್ಮಾರ್ಟ್ ಫೋನನ್ನು ಅಪ್ಡೇಟ್ ಮಾಡುವ ಮುನ್ನ ತಪ್ಪದೇ ಈ ಕೆಲಸ ಮಾಡಿ: ಮೇಲಿನ ಎಲ್ಲಾ ಕಾರಣಗಳಿಂದ ನಮಗೆ ತಿಳಿಯುವ ಅಂಶವೇನೆಂದರೆ ವಾಟ್ಸ್ಆ್ಯಪ್‌ಗೆ ಯಾವುದೇ ಆದಾಯವಿಲ್ಲ. ವಾಟ್ಸ್ಆ್ಯಪ್ ಇಂದು ಕಾರ್ಯನಿರ್ವಹಿಸುತ್ತಿರುವ ರೂಪದಲ್ಲಿ ವಾಟ್ಸ್ಆ್ಯಪ್ ಹಣಗಳಿಕೆಯನ್ನೇ ಮಾಡುತ್ತಿಲ್ಲ. ಆದರೆ, ಭವಿಷ್ಯದಲ್ಲಿ ಭಾರೀ ಲಾಭದ ನಿರೀಕ್ಷೆಯನ್ನು ವಾಟ್ಸ್ಆ್ಯಪ್ ಹೊಂದಿದೆ. ಜಾಹಿರಾತು ನೀಡದೇ, ಗ್ರಾಹಕರಿಂದ ಹಣವನ್ನು ಪಡೆಯದೇ ಹಣಗಳಿಸಲು ವಾಟ್ಸ್ಆ್ಯಪ್‌ಗೆ ಭವಿಷ್ಯದಲ್ಲಿ ಸಾಧ್ಯವಾಗಲಿದೆಯಂತೆ. ಗ್ರಾಹಕರಿಗೆ ಕಿರಿಕಿಯಾಗದಂತಹ ಸೇವೆಗಳನ್ನು ನೀಡುತ್ತಾ. ಬ್ಯುಸಿನೆಸ್ ಜೊತೆಗಾರರ ಜೊತೆ ಸೇರಿ ಕಮಿಷನ್ ಲೆಕ್ಕದಲ್ಲಿ ಹಣಗಳಿಸುವ ಲೆಕ್ಕಾಚಾರವನ್ನು ವಾಟ್ಸ್ಆ್ಯಪ್ ಹೊಂದಿದೆ. ಉದಾಹರಣೆಗೆ ಈಗಾಗಲೇ ಪ್ರಸಿದ್ಧಿ ಪಡೆಯುತ್ತಿರುವ ವಾಟ್ಸ್ಆ್ಯಪ್ ಪೇಮೆಂಟ್.

click me!