Twitter Outage: ಟ್ವಿಟರ್‌ ವೆಬ್‌ಸೈಟ್‌ ಡೌನ್‌..!

By Santosh NaikFirst Published Nov 4, 2022, 10:15 AM IST
Highlights

ಸೋಶಿಯಲ್‌ ನೆಟ್‌ವರ್ಕಿಂಗ್‌ ವೇದಿಕೆ ಟ್ವಿಟರ್‌ ವೆಬ್‌ಸೈಟ್‌ ವಿಶ್ವದ ಕೆಲವು ಭಾಗಗಳಲ್ಲಿ ವ್ಯತ್ಯಯವಾಗಿದೆ. ವೆಬ್‌ಸೈಟ್‌ಗೆ ಲಾಗಿನ್‌ ಮಾಡಲು ಸಾಧ್ಯವಾಗುತ್ತಿಲ್ಲ. ಆಪ್‌ನಲ್ಲಿ ಎಂದಿನಂತೆ ಕಾರ್ಯನಿರ್ವಹಣೆ ಆಗುತ್ತಿದೆ ಎಂದು ಡೌನ್‌ ಡಿಟೆಕ್ಟರ್‌ನಲ್ಲಿ ಬಳಕೆದಾರರು ದೂರಿದ್ದಾರೆ.

ಬೆಂಗಳೂರು (ನ.4): ಎಲಾನ್‌ ಮಸ್ಕ್‌ ಟ್ವಿಟರ್‌ನ ಮಾಲೀಕತ್ವ ಪಡೆದುಕೊಂಡ ಬಳಿಕ ಸೋಶಿಯಲ್‌ ಮೀಡಿಯಾ ವೇದಿಕೆಯಲ್ಲಿ ಮೊದಲ ಬಾರಿಗೆ ಸಮಸ್ಯೆ ಎದುರಾಗಿದೆ. ಹಲವಾರು ಟ್ವಿಟರ್‌ ಬಳಕೆದಾರರು ಪ್ರಸ್ತುತ ತಮ್ಮ ಟ್ವಿಟರ್‌ ಖಾತೆಗಳನ್ನು ಪ್ರವೇಶಿಸಲು ಸಮಸ್ಯೆಗಳನ್ನು ಎದುರಿಸಿದ್ದಾರೆ. ಟ್ವಿಟರ್‌ ಬಳಕೆದಾರರು ತಮ್ಮ ಫೀಡ್‌ಗೆ ಪ್ರವೇಶಿಸಲು ಪ್ರಯತ್ನ ಮಾಡುವ ವೇಳೆ ಟ್ವಿಟರ್‌ ಪುಟದಲ್ಲಿ ಏನನ್ನೂ ತೋರಿಸುತ್ತಿಲ್ಲ. ಫೀಡ್‌ ಪುಟವು, 'ಸಮ್‌ಥಿಂಗ್‌ ವೆಂಟ್‌ ರಾಂಗ್‌, ಬಟ್‌ ಡೋಂಟ್‌ ಫ್ರೆಟ್‌-ಲೆಟ್ಸ್‌ ಗಿವ್‌ ಇಟ್‌ ಅನದರ್‌ ಶಾಟ್‌'ಎನ್ನುವ ಬರಹ ಕಾಣಿಸಿಕೊಂಡಿದೆ. ಅದರರ್ಥ, ಏನೋ ತಪ್ಪಾಗಿದೆ. ಆದರೆ, ಚಿಂತಿಸಬೇಡಿ-ನೀವ್ಯಾಕೆ ಮತ್ತೊಮ್ಮ ಪ್ರಯತ್ನ ಮಾಡಬಾರದು ಎನ್ನುವ ಪುಟ ಮಾತ್ರವೇ ಕಂಡಿದೆ. ಟ್ವಿಟರ್‌ ಮೊಬೈಲ್‌ ಅಪ್ಲಿಕೇಶನ್‌ಗಳಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ವೆಬ್‌ಸೈಟ್‌ನಲ್ಲಿ ಟ್ವಿಟರ್‌ ಬಳಕೆ ವೇಳೆ ಮಾತ್ರವೇ ಸಮಸ್ಯೆ ಉಂಟಾಗಿದೆ.  ಡೌನ್‌ಡಿಟೆಕ್ಟರ್ ಪ್ರಕಾರ, ಈ 'ಸಮಸ್ಯೆ' ಅಪ್ಲಿಕೇಶನ್‌ಗಿಂತ ಹೆಚ್ಚಾಗಿ ಟ್ವಿಟರ್‌ನ ಡೆಸ್ಕ್‌ಟಾಪ್ ಆವೃತ್ತಿಯಲ್ಲಿದೆ ಎಂದು ಹೇಳಿದೆ.

ಡೌನ್‌ ಡಿಟೆಕ್ಟರ್‌ (DownDetector) ಪ್ರಕಾರ, ಟ್ವಿಟರ್‌ ವೆಬ್‌ಸೈಟ್‌ ಔಟೇಜ್‌ ಸೀಮಿತವಾಗಿದ್ದಾಗಿದೆ. ಸುಮಾರು ಮುಂಜಾನೆ 3 ಗಂಟೆಗೆ ಇದು ಪ್ರಾರಂಭವಾಗಿದೆ ಮತ್ತು ಮುಂಜಾನೆ ಏಳು ಗಂಟೆಯ ವೇಳೆಗೆ ದೊಡ್ಡ ಪ್ರಮಾಣದಲ್ಲಿ ಇದು ಗೊತ್ತಾಗಿದೆ. ಡೌನ್‌ ಡಿಟೆಕ್ಟರ್‌ ವೆಬ್‌ಸೈಟ್‌ ಭಾರತದ ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಯಾವ ಸೋಶಿಯಲ್‌ ಮೀಡಿಯಾ ವೆಬ್‌ಸೈಟ್‌ ಡೌನ್‌ ಆಗಿದೆ, ಯಾವ ನೆಟ್‌ವರ್ಕಿಂಗ್‌ ಫ್ಲಾಟ್‌ಫಾರ್ಮ್‌ ಸಮಸ್ಯೆಗಳ್ನು ಎದುರಿಸುತ್ತಿದೆ ಎಂದು ಹೇಳುವ ಸೈಟ್‌ ಆಗಿದೆ. ಇನ್ಸ್‌ಟಾಗ್ರಾಮ್‌ (Instagram) ಸಹ ಭಾಗಶಃ ಸ್ಥಗಿತಗೊಂಡ ಕೆಲವೇ ದಿನಗಳಲ್ಲಿ ಟ್ವಿಟರ್‌ನಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ.

Latest Videos

ಈ ಮೊದಲು, ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್‌ಆಪ್‌ ಕೂಡ ಸುಮಾರು ಒಂದೆರಡು ಗಂಟೆಗಳ ಕಾಲ ದೊಡ್ಡ ಮಟ್ಟದಲ್ಲಿ ಸ್ಥಗಿತಗಿಂಡಿತ್ತು. ಮೆಸೇಜ್‌ಗಳನ್ನು ಕಳಿಸಲು ಹಾಗೂ ಸ್ವೀಕರಿಸಲು ಜನರಿಗೆ ಸಾಧ್ಯವಾಗುತ್ತಿರಲಿಲ್ಲ. ಅನ್‌ಲೈನ್‌ ಔಟೇಜ್‌ಗಳ ಬಗ್ಗೆ ವಿವರ ನೀಡುವ ಡೌನ್‌ ಡಿಟೆಕ್ಟರ್‌, ವಾಟ್ಸ್‌ಆಪ್‌ ಔಟೇಜ್‌ ಬಗ್ಗೆಯೂ ತಕ್ಷಣವೇ ವರದಿ ಮಾಡಿತ್ತು.

Twitterನ ಶೇ. 50 ರಷ್ಟು ಸಿಬ್ಬಂದಿ ಕಿತ್ತೊಗೆಯಲು ಎಲಾನ್‌ ಮಸ್ಕ್‌ ಪ್ಲ್ಯಾನ್‌..!

ಕಳೆದ ವಾರವಷ್ಟೇ ಎಲಾನ್‌ ಮಸ್ಕ್‌ ಟ್ವಿಟರ್‌ ಖರೀದಿ ಪ್ರಕ್ರಿಯೆಯನ್ನೂ ಪೂರ್ಣ ಮಾಡಿದ್ದರು. ಅದರ ಬೆನ್ನಲ್ಲಿಯೇ ಟ್ವಿಟರ್‌ನ ಉನ್ನತ ಅಧಿಕಾರಿಗಳನ್ನು ಹುದ್ದೆಯಿಂದ ವಜಾ ಮಾಡಿದ್ದರು. ಶುಕ್ರವಾರ ಕೂಡ ಎಲಾನ್‌ ಮಸ್ಕ್‌ ಟ್ವಿಟರ್‌ನ ಇನ್ನೂ ಕೆಲವು ಅಧಿಕಾರಿಗಳು ವಜಾ ಮಾಡಲಿದ್ದಾರೆ. ದಿ ವರ್ಜ್‌ ಪ್ರಕಟ ಮಾಡಿರುವ ಸಹಿ ಇರದ ಆಂತರಿಕ ಮೆಮೋ ಮಾಹಿತಿಯ ಪ್ರಕಾರ, ಟ್ವಿಟರ್‌ ಉದ್ಯೋಗಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಸಾಮೂಹಿಕ ವಜಾ ಪ್ರಕ್ರಿಯೆ ಕಂಪನಿಯಲ್ಲಿ ಆರಂಭಗೊಂಡಿದೆ ಎಂದು ತಿಳಿಸಲಾಗಿದೆ. ಟ್ವಿಟರ್‌ ಕಚೇರಿಯಲ್ಲಿ ಉದ್ಯೋಗಿಗಳ ಬ್ಯಾಡ್ಜ್‌ ಆಕ್ಸೆಸ್‌ ತಾತ್ಕಾಲಿಕವಾಗಿ ಸ್ಥಗಿತವಾಗಿದೆ ಎಂದು ಕಂಪನಿ ತಿಳಿಸಿದೆ. ಪೆಸಿಪಿಕ್‌ ಸ್ಟ್ಯಾರ್ಡ್‌ ಟೈಮ್‌ ಪ್ರಕಾರ ಬೆಳಗ್ಗೆ 9 ಗಂಟೆಯ ವೇಳೆಗೆ ಉದ್ಯೋಗಿಗಳು ಕಂಪನಿಯಿಂದ ಈ ಮೇಲ್‌ ನಿರೀಕ್ಷೆ ಮಾಡಬೇಕು. ಇದರಲ್ಲಿ ಅವರು ಉದ್ಯೋಗಿಯಾಗಿ ಉಳಿದುಕೊಂಡಿದ್ದಾರೆಯೇ ಅಥವಾ ಇಲ್ಲವೇ ಎನ್ನುವುದನ್ನು ತಿಳಿಸಲಾಗುತ್ತದೆ ಎಂದು ಆಂತರಿಕ ಮೆಮೋದಲ್ಲಿ ತಿಳಿಸಲಾಗಿದೆ.

Twitter ಭಾಗವಾಗಿಲ್ಲ ಎಂದು ಪರಾಗ್‌ ಅಗರ್ವಾಲ್‌ ಸ್ಪಷ್ಟನೆ : ಭಾರತೀಯ ಮೂಲದವರಿಗೆ ಸಿಗುವ ಪರಿಹಾರ ಎಷ್ಟು ಗೊತ್ತಾ..?

ಟ್ವಿಟರ್‌ನಲ್ಲಿ ವರ್ಕ್‌ಫ್ರಂ ಹೋಮ್‌ ಬಂದ್‌, 3700 ಸಿಬ್ಬಂದಿ ಕಡಿತಕ್ಕೆ ಕ್ಷಣಗಣನೆ: ಟ್ವಿಟರ್‌ ಅನ್ನು ಖರೀದಿ ಬಳಿಕ ಭಾರೀ ಪ್ರಮಾಣದಲ್ಲಿ ಬದಲಾವಣೆ ಮಾಡುತ್ತಿರುವ ಎಲಾನ್‌ ಮಸ್ಕ್‌ ಇದೀಗ ಎಲ್ಲಾ ಸಿಬ್ಬಂದಿಗಳಿಗೆ ವರ್ಕ್‌ ಫ್ರಂ ಹೋಮ್‌ ಅನ್ನು ಪೂರ್ಣವಾಗಿ ರದ್ದುಗೊಳಿಸುವ ನಿರ್ಧರಿಸಿದ್ದಾರೆ. ಈ ಕುರಿತು ಅವರು ಶೀಘ್ರವೇ ಘೋಷಣೆ ಮಾಡುವ ಸಾಧ್ಯತೆ ಇದೆ. ಇದರ ಜೊತೆಗೆ ವೆಚ್ಚ ಕಡಿತದ ನಿಟ್ಟಿನಲ್ಲಿ ಕಂಪನಿಯ ಅಂದಾಜು 7500 ಸಿಬ್ಬಂದಿ ಪೈಕಿ ಶೇ.50ರಷ್ಟುಅಂದರೆ ಸುಮಾರು 3,700 ಸಿಬ್ಬಂದಿಗಳನ್ನು ಇನ್ನು ಎರಡು ದಿನದಲ್ಲಿ ಹುದ್ದೆಯಿಂದ ತೆಗೆದುಹಾಕುವ ಸಾಧ್ಯತೆಯೂ ಇದೆ ಎಂದು ವರದಿಗಳು ತಿಳಿಸಿವೆ. ಮಸ್ಕ್‌ ಈಗಾಗಲೇ ಕಂಪನಿಯ ಆಡಳಿತ ಮಂಡಳಿಯನ್ನು ಪೂರ್ಣ ವಿಸರ್ಜಿಸಿದ್ದು, ಸಿಇಒ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳನ್ನು ಕಿತ್ತುಹಾಕಿದ್ದಾರೆ.

click me!