
ವಾಷಿಂಗ್ಟನ್(ಸೆ.18): ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಹಾಲಿವುಡ್ ನಟ ಬ್ರ್ಯಾಡ್ ಪಿಟ್ ಇತ್ತೀಚಿಗೆ, ನಾಸಾ ಕೇಂದ್ರಕ್ಕೆ ಭೇಟಿ ನೀಡಿದ್ದರು.
ವಾಷಿಂಗ್ಟನ್‌ನಲ್ಲಿರುವ ನಾಸಾದ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದ ಬ್ರ್ಯಾಡ್ ಪಿಟ್, ನಾಸಾದ ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ಪಡೆದರು.
ಈ ವೇಳೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿ ನಿಕ್ ಹಗ್ಯೂ ಅವರೊಂದಿಗೆ ಬ್ರ್ಯಾಡ್ ಪಿಟ್ ವಿಡಿಯೋ ಸಂವಾದ ನಡೆಸಿದರು. ಭಾರತದ ಇಸ್ರೋ ಚಂದ್ರಯಾನ-2 ಯೋಜನೆಯ ಹಿನ್ನಡೆಯ ಕುರಿತು ಮಾಹಿತಿ ಪಡೆದರು. ವಿಕ್ರಮ್ ಲ್ಯಾಂಡರ್ ಕುರಿತು ಏನಾದರೂ ಮಾಹಿತಿ ಲಭ್ಯವಿದೆಯಾ ಎಂದು ನಿಕ್ ಅವರನ್ನು ಕೇಳಿದರು.
ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇರುವುದನ್ನು ನೀವು ನೋಡಬಲ್ಲಿರಾ ಎಂದು ಬ್ರ್ಯಾಡ್ ಪಿಟ್ ಗಗನಯಾತ್ರಿ ನಿಕ್ ಅವರನ್ನು ಕೇಳಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಚಂದ್ರನ ಅಂಗಳ ಕಾಣುವುದಿಲ್ಲ ಎಂದು ನಿಕ್ ಪ್ರತ್ಯುತ್ತರ ನೀಡಿದರು.
ತಮ್ಮ ಮುಂದಿನ ಚಿತ್ರದ ಪ್ರಚಾರಕ್ಕಾಗಿ ನಾಸಾ ಕೇಂದ್ರಕ್ಕೆ ಭೇಟಿ ನೀಡಿದ್ದ ಬ್ರ್ಯಾಡ್ ಪಿಟ್, ಬಾಹ್ಯಾಕಾಶ ನಿಲ್ದಾಣದಲ್ಲಿನ ಜೀವನ ಕ್ರಮದ ಕುರಿತು ಮಾಹಿತಿ ಪಡೆದರು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.