ನ್ಯೂಯಾರ್ಕ್[ಏ.20]: ದೋಷದಿಂದ ಕೂಡಿದ ಮೊಬೈಲ್ ಅನ್ನು ವಾಪಸ್ ಪಡೆದು ತನ್ನ ಹಣ ಹಿಂದಿರುಗಿಸುವಂತೆ ಕೇಳಿಕೊಂಡ ಗ್ರಾಹಕರೊಬ್ಬರಿಗೆ ಗೂಗಲ್ ಸಂಸ್ಥೆ ಸುಮಾರು 6,20,000 ಮೌಲ್ಯದ ಪಿಕ್ಸಲ್-3ಯ 10 ಮೊಬೈಲ್‌ಗಳನ್ನು ಕಾಣಿಕೆಯಾಗಿ ನೀಡಿದ ಅಪರೂಪದ ಸಂಗತಿ ಅಮೆರಿಕದಲ್ಲಿ ನಡೆದಿದೆ.
ರೆಡ್ಡಿಟ್ ವೆಬ್‌ಸೈಟ್ ಮೂಲಕ ಇಲ್ಲಿನ ಚೀಟೋಜ್ ಎಂಬ ಗ್ರಾಹಕ ಬಿಳಿ ಬಣ್ಣದ ಪಿಕ್ಸಲ್-3 ಮೊಬೈಲ್ ಅನ್ನು ಖರೀದಿಸಿದ್ದರು. ಆದರೆ, ಅದರಲ್ಲಿ ದೋಷ ಕಂಡು ಬಂದ ಕಾರಣಕ್ಕೆ ಮೊಬೈಲ್ ವಾಪಸ್ ಪಡೆದು ತನ್ನ ಹಣ ವಾಪಸ್ ನೀಡುವಂತೆ ಕೋರಿದ್ದರು. ಈ ಪ್ರಕಾರ ಗ್ರಾಹಕಗೆ 5500 ರು. ಮರುಪಾವತಿ ಮಾಡಲಾಗುವುದು ಎಂದು ತಿಳಿಸಲಾಗಿತ್ತು.
ಆದರೆ, ಪಿಕ್ಸಲ್ ಸಂಸ್ಥೆ ತನಗೆ ಹಣ ಮರುಪಾವತಿ ಮಾಡಿಲ್ಲ. ಬದಲಿಗೆ ಪಿಕ್ಸಲ್-3ಯ 10 ಮೊಬೈಲ್‌ಗಳನ್ನು ಕಳುಹಿಸಿಕೊಟ್ಟಿದೆ ಎಂದು ಹೇಳಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.