ರಾವಣ-1 ಉಪಗ್ರಹ ಯಶಸ್ವಿ ಉಡಾವಣೆ: ಬಾಹ್ಯಾಕಾಶ ಜಗತ್ತಿಗೆ ಕಾಲಿಟ್ಟ ಶ್ರೀಲಂಕಾ!

By Web DeskFirst Published Apr 18, 2019, 4:48 PM IST
Highlights

‘ರಾವಣ-1 ಉಪಗ್ರಹ ಯಶಸ್ವಿ ಉಡಾವಣೆ| ಬಾಹ್ಯಾಕಾಶ ಜಗತ್ತಿಗೆ ಕಾಲಿಟ್ಟ ಶ್ರೀಲಂಕಾ| ಅರ್ಥುರು ಸಿ ಕ್ಲಾರ್ಕೆ ಸಂಸ್ಥೆಯ ಇಂಜಿನಿಯರ್​ಗಳು ನಿರ್ಮಿಸಿದ ಉಪಗ್ರಹ| ಥಿರಿಂಡು ದಯಾರತ್ನೆ ಮತ್ತು ದುಲಾನಿ ಚಾಮಿಕಾ ಕನಸಿನ ಕೂಸು| ಜಪಾನಿನ ಯೂಷು ಇನ್ಸ್​ಟಿಟ್ಯೂಟ್​ ಆಫ್​ ಟೆಕ್ನಲಾಜಿಸ್ ನಲ್ಲಿ ಉಪಗ್ರಹ ನಿರ್ಮಾಣ| ಐದು ವರ್ಷಗಳವರೆಗೆ ಸಕ್ರಿಯವಾಗಿರಲಿರುವ ಉಪಗ್ರಹ|

ಕೋಲಂಬೋ(ಏ.18): ಬಾಹ್ಯಾಕಾಶ ಜಗತ್ತಿಗೆ ಶ್ರೀಲಂಕಾ ಅಧಿಕೃತವಾಗಿ ಪ್ರವೇಶ ಪಡೆದಿದ್ದು, ತನ್ನ ಮೊದಲ ‘ರಾವಣ-1' ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದೆ.

ಅರ್ಥುರು ಸಿ ಕ್ಲಾರ್ಕೆ ಸಂಸ್ಥೆಯ ಇಂಜಿನಿಯರ್​ಗಳಾದ ಥಿರಿಂಡು ದಯಾರತ್ನೆ ಮತ್ತು ದುಲಾನಿ ಚಾಮಿಕಾ ಈ ಉಪಗ್ರಹವನ್ನು ತಯಾರಿಸಿದ್ದಾರೆ.

Sri Lanka's first satellite 'Raavana 1' will be launched into orbit shortly on board an Antares rocket from the Mid-Atlantic Regional Spaceport at ’s Wallops Flight Facility in Virginia, USA (File) pic.twitter.com/GskpF7ujIo

— Sri Lanka Technologies (@srilankatech)

ಜಪಾನಿನ ಯೂಷು ಇನ್ಸ್​ಟಿಟ್ಯೂಟ್​ ಆಫ್​ ಟೆಕ್ನಲಾಜಿಸ್​ ಸಂಸ್ಥೆಯಲ್ಲಿ ಈ ಉಪಗ್ರಹ ನಿರ್ಮಿಸಲಾಗಿದ್ದು, ಒಟ್ಟು ಐದು ಯೋಜನೆಗಳಿಗೆ ಈ ಉಪಗ್ರಹ ಸಹಾಯಕಾರಿಯಾಗಲಿದೆ ಎಂದು ಹೇಳಲಾಗಿದೆ. 

1,000 ಕ್ಯೂಬಿಕ್​ ಸೆ.ಮೀ ಅಳತೆ ಹೊಂದಿರುವ ಈ ಉಪಗ್ರಹ ಕೇವಲ 1.05 ಕೆ.ಜಿ ತೂಕವಿದೆ. ಈ ಉಪಗ್ರಹ ಐದು ವರ್ಷಗಳವರೆಗೆ ಸಕ್ರಿಯವಾಗಿರಲಿದೆ ಎಂದು ಅಂದಾಜಿಸಲಾಗಿದೆ.
 

click me!