ಸ್ಮಾರ್ಟ್‌ಫೋನ್ ಪ್ರಿಯರು ಕಾತರದಿಂದ ಕಾಯುತ್ತಿರುವ ಗೂಗಲ್‌ನ ಫ್ಲ್ಯಾಗ್‌ಶಿಪ್ ಸರಣಿ 'ಗೂಗಲ್ ಪಿಕ್ಸೆಲ್ 11' (Google Pixel 11) ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ನ್ಯೂಯಾರ್ಕ್‌ನಲ್ಲಿ ಆಗಸ್ಟ್ 12 ರಂದು (ಭಾರತೀಯ ಕಾಲಮಾನ ಆಗಸ್ಟ್ 13) ನಡೆಯಲಿರುವ 'Made By Google' ಈವೆಂಟ್‌ನಲ್ಲಿ ಕಂಪನಿಯು ತನ್ನ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಜಗತ್ತಿಗೆ ಪರಿಚಯಿಸಲಿದೆ.
ಅಧಿಕೃತವಾಗಿ ಹೆಚ್ಚಿನ ಮಾಹಿತಿಯನ್ನು ಗೂಗಲ್ ಬಿಟ್ಟುಕೊಡದಿದ್ದರೂ, ಲೀಕ್ ಆಗಿರುವ ವರದಿಗಳ ಪ್ರಕಾರ ಈ ಬಾರಿ ಪಿಕ್ಸೆಲ್ ಪ್ರಿಯರಿಗೆ ಹಲವು ಅಚ್ಚರಿಗಳು ಕಾದಿವೆ.
ಈ ಸರಣಿಯಲ್ಲಿ ಗೂಗಲ್ ಒಟ್ಟು 4 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಒಂದೇ ಸರಣಿಯಲ್ಲಿ ಸಾಮಾನ್ಯ ಬಳಕೆದಾರರಿಂದ ಹಿಡಿದು ಪ್ರೀಮಿಯಂ ಮತ್ತು ಫೋಲ್ಡಬಲ್ ಫೋನ್ ಇಷ್ಟಪಡುವವರಿಗೂ ಆಯ್ಕೆಗಳು ಸಿಗಲಿವೆ.
ಪಿಕ್ಸೆಲ್‌ನ ಸಿಗ್ನೇಚರ್ ಕ್ಯಾಮೆರಾ ಬಾರ್ ವಿನ್ಯಾಸ ಈ ಬಾರಿಯೂ ಮುಂದುವರಿಯಲಿದೆ. ಪಿಕ್ಸೆಲ್ 11ರ ಕ್ಯಾಮೆರಾ ಮಾಡ್ಯೂಲ್ ಈ ಬಾರಿ ಆಲ್-ಬ್ಲಾಕ್ ಫಿನಿಶ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಡಿಸ್‌ಪ್ಲೇ ಬಗ್ಗೆ ಹೇಳುವುದಾದರೆ, ಸ್ಯಾಮ್‌ಸಂಗ್‌ನ ಸುಧಾರಿತ M16 OLED ಪ್ಯಾನೆಲ್ ಅನ್ನು ಬಳಸಲಾಗುತ್ತಿದೆ. ಇದು ಕಡಿಮೆ ಬ್ಯಾಟರಿ ಬಳಸಿಕೊಂಡು ಹೆಚ್ಚಿನ ಬ್ರೈಟ್‌ನೆಸ್ ನೀಡುವ ಸಾಮರ್ಥ್ಯ ಹೊಂದಿದೆ. ತೆಳುವಾದ ಬೆಜೆಲ್‌ಗಳು ಫೋನ್‌ಗೆ ಪ್ರೀಮಿಯಂ ಲುಕ್ ನೀಡಲಿವೆ.
ಪಿಕ್ಸೆಲ್ 11 ಸರಣಿಯ ಎಲ್ಲಾ ಫೋನ್‌ಗಳು ಗೂಗಲ್‌ನ ಹೊಸ Tensor G6 ಚಿಪ್‌ಸೆಟ್ ಹೊಂದಿರಲಿವೆ. ಇದು ಫೋನ್‌ನ ಪರ್ಫಾರ್ಮೆನ್ಸ್ ಅನ್ನು ಹೆಚ್ಚಿಸುವುದಲ್ಲದೆ, ಬ್ಯಾಟರಿ ದಕ್ಷತೆಯನ್ನು ಸುಧಾರಿಸುತ್ತದೆ. ಇತ್ತೀಚಿನ ಟ್ರೆಂಡ್‌ನಂತೆ ಗೂಗಲ್ ತನ್ನ ಹೊಸ ಸರಣಿಯಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಹತ್ತು ಹಲವು ಫೀಚರ್‌ಗಳನ್ನು ನೀಡುವ ಸಾಧ್ಯತೆಯಿದೆ.
ವರದಿಗಳ ಪ್ರಕಾರ.. ಗೂಗಲ್ ಈ ಬಾರಿ 128GB ಬೇಸ್ ವೇರಿಯಂಟ್ ಅನ್ನು ಕೈಬಿಟ್ಟು ನೇರವಾಗಿ 256GB ಸ್ಟೋರೇಜ್‌ನಿಂದ ಫೋನ್‌ಗಳನ್ನು ಆರಂಭಿಸಲಿದೆ. ಅಂದರೆ ಬಳಕೆದಾರರಿಗೆ ಆರಂಭಿಕ ಮಾಡೆಲ್‌ನಲ್ಲೇ ಹೆಚ್ಚಿನ ಸ್ಟೋರೇಜ್ ಸಿಗಲಿದೆ. ಹೆಚ್ಚುವರಿ ಸ್ಟೋರೇಜ್ ಮತ್ತು ಹೊಸ ತಂತ್ರಜ್ಞಾನದ ಕಾರಣದಿಂದಾಗಿ ಈ ಸರಣಿಯ ಬೆಲೆ ಸ್ವಲ್ಪ ಹೆಚ್ಚಾಗಬಹುದು ಎನ್ನಲಾಗುತ್ತಿದೆ. ಭಾರತದಲ್ಲಿ ಪಿಕ್ಸೆಲ್ 11 ರ ಆರಂಭಿಕ ಬೆಲೆ ಅಂದಾಜು ₹79,999 ರಿಂದ ₹84,999 ಇರಬಹುದು ಎಂದು ಅಂದಾಜಿಸಲಾಗಿದೆ. ಈವೆಂಟ್ ಮುಗಿದ ತಕ್ಷಣವೇ ಪ್ರಿ-ಆರ್ಡರ್ ಪ್ರಕ್ರಿಯೆ ಕೂಡ ಆರಂಭವಾಗಲಿದೆ. ನೀವು ಕೂಡ ಬೆಸ್ಟ್ ಕ್ಯಾಮೆರಾ ಮತ್ತು ಸ್ಮೂತ್ ಆಂಡ್ರಾಯ್ಡ್ ಅನುಭವಕ್ಕಾಗಿ ಕಾಯುತ್ತಿದ್ದರೆ, ಈ ಪಿಕ್ಸೆಲ್ 11 ಸರಣಿ ನಿಮಗೆ ಬೆಸ್ಟ್ ಆಯ್ಕೆಯಾಗಬಹುದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.