
ಪೆಂಟಗನ್ (ಜು.11) ಅನ್ಯಗ್ರಹ ಜೀವಿಗಳ ಇರುವಿಕೆ ಕುರಿತು ಸತತ ಅಧ್ಯಯನಗಳು ನಡೆದಿದೆ. ಹಲವು ಬಾರಿ ಅನ್ಯಗ್ರಹ ಜೀವಿಗಳ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಅಧ್ಯಯನಗಳು ಇರುವಿಕೆಯನ್ನು ಅಲ್ಲಗೆಳೆದಿಲ್ಲ. ಈ ಕುರಿತು ಅಮೆರಿಕ ಅತೀ ಹೆಚ್ಚು ಸಂಶೋಧನೆ ನಡೆಸಿದೆ. ಇದೀಗ ಅಮೆರಿಕ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗನ್ ಇದೀಗ ಎಲಿಯನ್ ಹಾರುವ ವಸ್ತುವಿನ ವಿಡಿಯೋ ಸೇರಿದಂತೆ ಹಲವು ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಅನ್ಯಗ್ರಹ ಜೀವಿಗಳ ಕುರಿತು ಹಲವು ರೋಚಕ ಮಾಹಿತಿಗಳು ಬಯಲಾಗಿದೆ.
ರಹಸ್ಯ ದಾಖಲೆ, ವಿಡಿಯೋಗಳ ಬಹಿರಂಗ ಮಾಡಿದ ಮಿಲಿಟರಿ ಅಧಿಕಾರಿ, ನನ್ನ 28 ವರ್ಷಗಳ ಸೇವೆಯಲ್ಲಿಈ ರೀತಿಯ ಹಾರುವ ವಸ್ತುಗಳನ್ನು ನೋಡಿಲ್ಲ ಎಂದಿದ್ದಾರೆ. ಅಮೆರಿಕದ ಪೆಂಟಗನ್ ಕಚೇರಿ ಬಿಡುಗೆಡೆ ಮಾಡಿದ ಮಾಹಿತಿಗಳಲ್ಲಿ 40 ಫೈಲ್ಸ್, 14 ಡಾಕ್ಯುಮೆಂಟ್, 19 ವಿಡಿಯೋ, ನಾಲ್ಕು ಆಡಿಯೋ ಹಾಗೂ 3 ಚಿತ್ರಗಳು ಒಳಗೊಂಡಿದೆ. ಇದರೊಂದಿಗೆ ಅನ್ಯಗ್ರಹ ಜೀವಿಗಳ ಇರುವಿಕೆ ಕುರಿತು ಹಲವು ರೋಚಕ ಮಾಹಿತಿಗಳು ಇದೀಗ ಬಹಿರಂಗವಾಗಿದೆ. ಜಂಟಿಯಾಗಿ ನಡೆಸಿದ ಸಂಶೋಧನೆಯಲ್ಲಿ ಪೆಂಟಗನ್, ನಾಸಾ, ಸಿಐಎ, ಎಫ್‌ಬಿಐ, ಇಂಧನ ಇಲಾಖೆ ಹಲವು ದಾಖಲೆ ಸಂಗ್ರಹಿಸಿದೆ.
ಅನ್ಯಗ್ರಹ ಜೀವಿಗಳ ಕುರಿತು ರಹಸ್ಯ ಫೈಲ್ಸ್ ಇದೀಗ ಅಮೆರಿಕ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ರಹಸ್ಯ ಫೈಲ್ಸ್‌ಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಹಿ ಮಾಡಿದ್ದಾರೆ. ಹಲವು ಎಜೆನ್ಸಿಗಳು ಕಲೆ ಹಾಕಿದ ಮಹತ್ವದ ದಾಖಲೆಗಳು ಇದಾಗಿದೆ.
ಅಮೆರಿಕ ಬಿಡುಗಡೆ ಮಾಡಿರುವ ದಾಖಲೆಗಳು ಅನ್ಯಗ್ರಹ ಜೀವಿಗಳ 2010 ಹಾಗೂ ಅದ ನಂತರದಲ್ಲಿ ಸಿಕ್ಕ ದಾಖಲೆಗಳು, ಕುರುಹುಗಳು, ವಿಡಿಯೋಗಳಾಗಿದೆ.ಈ ಪೈಕಿ ಅತ್ಯಾಧುನಿಕ ಸೆನ್ಸರ್ ಮೂಲಕ ರೆಕಾರ್ಡ್ ಮಾಡಿದ ಇನ್‌ಫ್ರಾರೆಡ್ ವಿಡಿಯೋ ಸೇರಿದೆ. ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಸಾಗರ ಹಾಗೂ ಮಧ್ಯಪ್ರಾಚ್ಯ ಏಷ್ಯಾ ವಾಯುಪ್ರದೇಶದಲ್ಲಿ ಹಾರಟದ ವೇಳೆ ಸೇನಾ ಪೈಲೆಟ್ ತನ್ನ ವಿಮಾನದ ಕ್ಯಮೆರಾದಲ್ಲಿ ಸೆರೆಯಾದ ವಿಡಿಯೋಗಳು ಈ ದಾಖಲೆಯಲ್ಲಿದೆ. ಪೈಲೆಟ್ ತನಗಾದ ವಿಚಿತ್ರ ಅನುಭವಗಳನ್ನು, ವಿಚಿತ್ರ ವಸ್ತುವಿನ ಹಾರಾಟವನ್ನು ವಿವರಿಸಿದ ದಾಖಲೆಗಳು ಇವೆ.
2020ರಲ್ಲೂ ಅನ್ಯಗ್ರಹ ಜೀವಿಯ ಸುಳಿವು ಪತ್ತೆಯಾಗಿದೆ ಎಂದು ಈ ರಹಸ್ಯ ದಾಖಲೆಗಳು ಹೇಳುತ್ತಿದೆ. ಅಮೆರಿಕನ್ ಏರ್‌ಫೋರ್ಸ್ ಪೈಲೆಟ್ ನಿಗೂಡ ವಸ್ತುವೊಂದನ್ನು ಹಾರಾಟದ ವೇಳೆ ಪತ್ತೆ ಹಚ್ಚಿದ್ದರು. ಈ ಕುರಿತು ದಾಖಲೆಗಳು ಬಿಡುಗಡೆ ಮಾಡಿದ ಫೈಲ್ಸ್‌ನಲ್ಲಿದೆ. 2019ರ ಆರಂಭದಲ್ಲಿ ಪೂರ್ವ ಅಮೆರಿಕದಲ್ಲಿ ಪತ್ತೆಯಾದ ಅನ್ಯಗ್ರಹ ಜೀವಿಯ ಯುಎಫ್ಒ ಕುರಿತು ಮಾಹಿತಿಯೂ ಇದರಲ್ಲಿದೆ.
2025ರಲ್ಲಿ ಇಂಡೋ ಪೆಸಿಫಿಕ್ ಸೇನಾ ಕಾರ್ಯಾಚರಣೆ ವೇಳೆ ಚೀನಾ ಸಮುದ್ರದ ಮೇಲೆ ವಿಚಿತ್ರ ಹಾರುವ ವಸ್ತು ಪತ್ತೆಯಾಗಿತ್ತು. ಆರಂಭದಲ್ಲೇ ಉಲ್ಕೆ ಎಂದೇ ಭಾವಿಸಲಾಗಿತ್ತು. ಬಳಿಕ ಇದು ಉಲ್ಕೆ ಅಲ್ಲ ಅನ್ನೋ ಖಚಿತಗೊಂಡಿತು. ಶೀಘ್ರದಲ್ಲೇ ಯುಎಫ್ಒ ಕುರಿತು ಮತ್ತಷ್ಟು ರಹಸ್ಯ ಫೈಲ್ಸ್ ಅಮೆರಿಕ ಬಿಡುಗಡೆ ಮಾಡಲಿದೆ.
The Creepiest UFO Video Ever Released By The White House 👽🛸🇺🇸
What is that thing? Is it an ALIEN? 😱
DOW-UAP-PR116, Unresolved UAP Report, Atlantic Ocean, 2020 pic.twitter.com/vOabmCyBb6— Interstellar (@InterstellarUAP) July 10, 2026
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.