ಆಕಾಶಕ್ಕೆ ಕನ್ನಡಿ ಹಾಕಿ ಭೂಮಿಗೆ ಟಾರ್ಚ್‌ ಹಿಡಿಯುವ ಪ್ರಯೋಗಕ್ಕೆ ಅಮೆರಿಕಾ ಒಪ್ಪಿಗೆ

Published : Jul 12, 2026, 07:04 AM IST
Reflect Orbital plans

ಸಾರಾಂಶ

ರಿಫ್ಲೆಕ್ಟ್‌ ಆರ್ಬಿಟಲ್‌ ಕಂಪನಿಯು ಬಾಹ್ಯಾಕಾಶದಲ್ಲಿ ಬೃಹತ್ ಕನ್ನಡಿಗಳನ್ನು ಅಳವಡಿಸಿ, ಸೂರ್ಯನ ಬೆಳಕನ್ನು ಭೂಮಿಗೆ ಪ್ರತಿಫಲಿಸುವ ಯೋಜನೆಗೆ ಅನುಮತಿ ಪಡೆದಿದೆ. ಈ ತಂತ್ರಜ್ಞಾನವು ಕೃಷಿ ಮತ್ತು ತುರ್ತು ಸಂದರ್ಭಗಳಲ್ಲಿ ನೆರವಾಗುವ ಗುರಿ ಹೊಂದಿದ್ದರೂ, ಖಗೋಳ ತಜ್ಞರು ಇದರಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ವ್ಯಾಂಕೋವರ್‌: ಖಗೋಳ ತಜ್ಞರು, ಸಾರ್ವಜನಿಕರ ವಿರೋಧದ ನಡುವೆಯೂ ರಿಫ್ಲೆಕ್ಟ್‌ ಆರ್ಬಿಟಲ್‌ ಕಂಪನಿಯ ಬಾಹ್ಯಾಕಾಶದಲ್ಲಿ ಬೃಹತ್‌ ಕನ್ನಡಿಯನ್ನೊಳಗೊಂಡ ಉಪಗ್ರಹದ ಮೂಲಕ ಬೆಳಕನ್ನು ಪ್ರತಿಫಲಿಸುವ ಪ್ರಯೋಗಕ್ಕೆ ಅಮೆರಿಕದ ಸಂವಹನ ಆಯೋಗವು ಒಪ್ಪಿಗೆ ನೀಡಿದೆ.

ರಿಫ್ಲೆಕ್ಟ್‌ ಆರ್ಬಿಟಲ್‌ ಕಂಪನಿಯು ಮೊದಲಿಗೆ ಒಂದು ಎರಾಂಡಿಲ್‌-1 ಉಪಗ್ರಹದ ಮೂಲಕ ಸೂರ್ಯನ ಬೆಳಕನ್ನು ಭೂಮಿಗೆ ಪ್ರತಿಫಲಿಸುವ ಪ್ರಯೋಗ ನಡೆಸಲು ಅವಕಾಶ ಪಡೆದಿದೆ. ಈ ಮೂಲಕ ಕತ್ತಲೆಯಲ್ಲೂ ಸೂರ್ಯನ ಬೆಳಕನ್ನು ಭೂಮಿಗೆ ಪ್ರತಿಫಲಿಸುವ ಪ್ರಯೋಗ ನಡೆಸಲಾಗುತ್ತದೆ. ಈ ಬೆಳಕು ಸುಮಾರು 5 ಕಿ.ಮೀ. ವ್ಯಾಪ್ತಿ ಹೊಂದಿರಲಿದ್ದು, ಪ್ರತಿ ನಾಲ್ಕು ನಿಮಿಷಗಳಿಗೆ ಬೆಳಕನ್ನು ಮರು ನಿರ್ದೇಶನ ಮಾಡಬೇಕಾಗುತ್ತದೆ.

50 ಸಾವಿರ ಉಪಗ್ರಹ

ಇದು ಆರಂಭ ಅಷ್ಟೆ, ರಿಫ್ಟೆಕ್ಟ್‌ ಆರ್ಬಿಟಲ್‌ ಇಂಥ 50 ಸಾವಿರ ಉಪಗ್ರಹಗಳನ್ನು 2035ರ ಹೊತ್ತಿಗೆ ಬಾಹ್ಯಾಕಾಶಕ್ಕೆ ಕಳುಹಿಸಲು ಉದ್ದೇಶಿಸಿದೆ. ಈ ಉಪಗ್ರಹಗಳು 60 ಅಡಿ ಉದ್ದ 60 ಅಡಿ ಅಗಲದ ಕನ್ನಡಿಯನ್ನು ಹೊಂದಿರಲಿವೆ. ಇವು ಬಾಹ್ಯಾಕಾಶದಿಂದ ಸೂರ್ಯನ ಬೆಳಕನ್ನು ಭೂಮಿಗೆ ಪ್ರತಿಫಲಿಸಲಿವೆ. ಕೃಷಿ, ನೈಸರ್ಗಿಕ ವಿಕೋಪದಂಥ ತುರ್ತು ಸಂದರ್ಭ ಹಾಗೂ ಉದ್ಯಮ ಕ್ಷೇತ್ರಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಬೇಡಿಕೆ ಇಟ್ಟರೆ ರಾತ್ರಿ ಹೊತ್ತಿನಲ್ಲೂ ನಿರ್ದಿಷ್ಟ ಪ್ರದೇಶಕ್ಕೆ ಬೆಳಕಿನ ವ್ಯವಸ್ಥೆ ಮಾಡುವ ಉದ್ದೇಶ ಕಂಪನಿಯದ್ದಾಗಿದೆ.

ಆದರೆ, ಈ ಪ್ರಯೋಗದಿಂದ ಮಾನವನ ಆರೋಗ್ಯ, ಸುರಕ್ಷತೆ, ಖಗೋಳ ಮತ್ತು ಕೆಳ ಭೂವಾತಾವರಣದ ಮೇಲೆ ಅನೇಕ ಅಡ್ಡಪರಿಣಾಮಗಳೂ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಕನ್ನಡಿಯ ಪ್ರತಿಫಲನವು ಪೈಲಟ್‌ಗಳು ಹಾಗೂ ಚಾಲಕರಿಗೆ ಕಿರಿಕಿರಿ ಉಂಟು ಮಾಡಬಹುದು. ಸಸ್ಯಗಳು, ಪ್ರಾಣಿಗಳ ದೇಹದ ನೈಸರ್ಗಿಕ ಗಡಿಯಾರದಲ್ಲಿ ಬದಲಾವಣೆಗೆ ಕಾರಣವಾಗಬಹುದು. ಇತರೆ ಉಪಗ್ರಹಗಳಿಗೂ ಸಮಸ್ಯೆ ತಂದಿಡಬಹುದು ಎಂದು ಹೇಳಲಾಗಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತಕ್ಕೆ ಬಂದ ಅನ್ಯಗ್ರಹ ಜೀವಿ? ಚಂದ್ರಲೋಕದಿಂದ ಬಂದವನಂತೆ ಈತ! 3 ವರ್ಷ ಭೂಮಿ ಮೇಲೆ ಇದ್ದವ ಏನಂದ
ಅನ್ಯಗ್ರಹ ಜೀವಿಗಳ UFO ಚಲನೆ ರಹಸ್ಯ ವಿಡಿಯೋ, ದಾಖಲೆ ಬಿಡುಗಡೆ ಮಾಡಿದ ಅಮೆರಿಕ ರಕ್ಷಣಾ ಇಲಾಖೆ