ಸಂಚಲನ ಸೃಷ್ಟಿಸುತ್ತಿದೆ ಡಿಜಿಟಲ್ ಕಾಂಡೋಮ್; ಇದು ಹೇಗೆ ಕೆಲಸ ಮಾಡುತ್ತೆ? ಬಳಸೋದೇಗೆ?

By Mahmad Rafik  |  First Published Oct 27, 2024, 8:57 AM IST

ಮಾರುಕಟ್ಟೆಯಲ್ಲಿ ಡಿಜಿಟಲ್ ಕಾಂಡೋಮ್ ಸಂಚಲನ ಸೃಷ್ಟಿಸಿದ್ದು, ಚರ್ಚೆಗಳು ಶುರುವಾಗಿವೆ. ಹಾಗಾದ್ರೆ ಇದನ್ನು ಬಳಕೆ ಮಾಡೋದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.


ಬೆಂಗಳೂರು: ಡಿಜಿಟಲ್ ಜಗತ್ತಿನಲ್ಲಿ ಎಲ್ಲವೂ ಸಾಧ್ಯವಿದೆ. ಡಿಜಿಟಲ್‌ ಬಳಕೆ ಶುರುವಾದಾಗಿನಿಂದ ಎಲ್ಲವೂ ಬೆರಳತುದಿಯಲ್ಲಿಯೇ ಲಭ್ಯವಾಗುತ್ತಿದೆ. ಇದೀಗ ಡಿಜಿಟಲ್ ಕಾಂಡೋಮ್ ಲಾಂಚ್ ಆಗಿದೆ. ಇದನ್ನು CAMDOM ಆಪ್‌ ಹೆಸರಿನಿಂದ ಕರೆಯಲಾಗುತ್ತದೆ. ಇದು ಯಾವುದೇ ವಸ್ತು ಅಲ್ಲ, ಮೊಬೈಲ್‌ನಲ್ಲಿರುವ ಆಪ್ ಆಗಿದ್ದು, ನಿಜವಾದ ಕಾಂಡೋಮ್‌ ಬಳಸುವಷ್ಟು ಸುಲಭ ಎಂಬ ಟ್ಯಾಗ್‌ಲೈನ್ ಸಹ ಹೊಂದಿದೆ. ದೈಹಿಕ ಸಂಬಂಧ ಬೆಳೆಸುವ ಸಂದರ್ಭದಲ್ಲಿ ಅನುಮತಿಯಿಲ್ಲದೇ ರೆಕಾರ್ಡಿಂಗ್‌ನಿಂದ ರಕ್ಷಿಸುವ ಕೆಲಸವನ್ನು ಈ ಆಪ್ ಮಾಡುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಡಿಜಿಟಲ್ ಕಾಂಡೋಮ್ ಆಪ್ ಹಲ್‌ಚಲ್ ಸೃಷ್ಟಿಸಿದೆ. ಈ ಬಗ್ಗೆ ಜನರು ಸಹ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಒಂದಿಷ್ಟು ಜನರು ಡಿಜಿಟಲ್ ಕಾಂಡೋಮ್ ಹೆಸರನ್ನ ಕೇಳಿ ಅಚ್ಚರಿ ವ್ಯಕ್ತಪಡಿಸಿದ್ರೆ, ಒಂದಿಷ್ಟು ಆಪ್‌ ಕಾರ್ಯುವೈಖರಿ ತಿಳಿದುಕೊಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಹೊಸ ತರಹದ ಸುರಕ್ಷತೆ ನೀಡುವ ಉದ್ದೇಶದಿಂದ ಹಲವು ಆಪ್‌ಗಳು ಅಂತರ್ಜಾಲದಲ್ಲಿ ಲಭ್ಯ ಇವೆ. CAMDOM ಆಪ್‌  ಸಂಗಾತಿ ಒಪ್ಪಿಗೆ ಇಲ್ಲದೇ ರೆಕಾರ್ಡಿಂಗ್ ಮಾಡೋದನ್ನು ತಡೆಯುತ್ತದೆ. ಇದರಿಂದ ಖಾಸಗಿ ಜೀವನಕ್ಕೆ ಧಕ್ಕೆಯಾಗೋದನ್ನು ತಡೆಯುವ ಕೆಲಸವನ್ನು CAMDOM ಆಪ್‌ ಮಾಡಲಿದೆ. ಜರ್ಮನಿಯ ಬ್ರಾಂಡ್ Billy Boy ಮತ್ತು ಏಜೆನ್ಸಿ Innocean Berlin ಜೊತೆಯಾಗಿ CAMDOM ಆಪ್‌ನ್ನು ಡೆವಲಪ್ ಮಾಡಿವೆ. ಸಮತಿಯಿಲ್ಲದ ರೆಕಾರ್ಡಿಂಗ್ ಅನ್ನು ತಡೆಯುವುದು ಇದರ ಉದ್ದೇಶವಾಗಿದೆ. 

Tap to resize

Latest Videos

CAMDOM ಆಪ್‌ ಬಳಸಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಮತ್ತು ಮೈಕ್ರೋಫೋನ್ ಅನ್ನು ಬ್ಲೂಟೂತ್ ಮೂಲಕ ನಿರ್ಬಂಧಿಸಬಹುದು. 
ಇದರಿಂದಾಗಿ ಯಾವುದೇ ಒಪ್ಪಿಗೆಯಿಲ್ಲದ ವೀಡಿಯೊ ಅಥವಾ ಆಡಿಯೊ ರೆಕಾರ್ಡಿಂಗ್ ಅನ್ನು ತಡೆಯಬಹುದು ಎಂದು ಡೆವಲಪರ್ ಹೇಳುತ್ತಾರೆ.

ಹೇಗೆ ಕೆಲಸ ಮಾಡುತ್ತೆ?
ಸುರಕ್ಷತೆಗಾಗಿಯೇ ಈ ಆಪ್ ಡೆವಲಪ್ ಮಾಡಲಾಗಿದೆ. ಸ್ಮಾರ್ಟ್‌ಫೋನ್ ಬ್ಲಾಕ್ ಮಾಡಿ ಅನುಮತಿ ಅಥವಾ ಒಪ್ಪಿಗೆ ಇಲ್ಲದೇ ವಿಡಿಯೋ ರೆಕಾರ್ಡಿಂಗ್ ಮಾಡೋದನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ. ಬಳಕೆದಾರರು ತಮ್ಮ ಸಂಗಾತಿಯ ಸ್ಮಾರ್ಟ್‌ಫೋನ್ ಬಳಿಯೇ ತಮ್ಮ ಫೋನ್ ಇರಿಸಿ ವರ್ಚುವಲ್ ಬಟನ್ ಸ್ವೈಪ್ ಮಾಡಬೇಕಾಗುತ್ತದೆ. ಹೀಗೆ ಮಾಡೋದರಿಂದ ಕೋಣೆಯಲ್ಲಿರುವ ಎಲ್ಲಾ ಕ್ಯಾಮೆರಾ ಮತ್ತು ಮೈಕ್ರೋಫೋನ್‌ ಗಳು ಬಂದ್ ಆಗಲಿವೆ. ಇಷ್ಟು ಮಾತ್ರವಲ್ಲದೇ ಇಬ್ಬರಲ್ಲಿ ಯಾರೇ ಹೇಳದೇ ಹೊರಡುತ್ತಿದ್ದರೆ ಅಲಾರಂ ಆಗುವ ಮೂಲಕ ನಿಮ್ಮನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತದೆ. 

ಈ CAMDOM ಆಪ್‌ ಸಕ್ರಿಯವಾಗಿ ಯಾವುದೇ ಅಡೆತಡೆಯಿಲ್ಲದೇ ಕೆಲಸ ಮಾಡಬೇಕಾದರೆ ನಿಮ್ಮ ಫೋನ್‌ನನ್ನು ಸಂಗಾತಿ ಫೋನ್ ಪಕ್ಕದಲ್ಲಿಯೇ ಇರಿಸಬೇಕು. ಮೊಬೈಲ್ ಮಾತ್ರವಲ್ಲದೇ ಕೋಣೆಯಲ್ಲಿ ರಹಸ್ಯ ಕ್ಯಾಮೆರಾ ಇರಿಸಿದ್ದರೂ ಅದನ್ನು ಆಫ್ ಮಾಡುವಲ್ಲಿ CAMDOM ಆಪ್‌ ಯಶಸ್ವಿಯಾಗುತ್ತದೆ. ಅಪಾಯದ ಸಂದರ್ಭದಲ್ಲಿಯೂ ಅಲಾರಂ ಮೂಲಕ   ನಿಮ್ಮನ್ನು ರಕ್ಷಣೆ ಮಾಡುತ್ತದೆ.

ಇದನ್ನೂ ಓದಿ: ಕಾಂಡೋಮ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಬಳಕೆಯ ಉದ್ದೇಶವೇ ಈಡೇರಲ್ಲ, ಈ 6 ವಿಷಯ ನಿಮಗೆ ಗೊತ್ತಿರಲಿ!

ಆಪ್‌ ಡೆವಲಪರ್ ಮಾತು
CAMDOM ಆಪ್‌ ಡೆವಲಪರ್ ಆಗಿರುವ Felipe Almeida ಕೆಲವು ಮಾಹಿತಿಯನ್ನು ಸಹ ನೀಡಿದ್ದಾರೆ. ಈ ಆಪ್‌ನಲ್ಲಿ ದಾಖಲಾಗುವ ಎಲ್ಲಾ ಡೇಟಾ  ಗೌಪ್ಯವಾಗಿರಿಸಲಾಗುತ್ತೆ ಮತ್ತು ಸುರಕ್ಷಿತವಾಗಿರುತ್ತದೆ ಎಂಬ ಭರವಸೆಯನ್ನು ನೀಡಿದ್ದಾರೆ.  Billy Boy ಮತ್ತು  Innocean Berlin ಜಂಟಿಯಾಗಿ CAMDOM ಆಪ್‌ ರಚಿಸಲಾಗಿದೆ. ಇಂದಿನ ಕಾಲದಲ್ಲಿ ಖಾಸಗಿ ಫೋಟೋ ಮತ್ತು ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ನಂತರ ಬ್ಲ್ಯಾಕ್‌ಮೇಲ್ ಮಾಡುವ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಈ ಹಿನ್ನೆಲೆ ಸುರಕ್ಷತೆಗಾಗಿ CAMDOM ಆಪ್‌ ಡೆವಲಪ್ ಮಾಡಲಾಗಿದೆ. ನಮ್ಮ ಆಪ್ ಇಂತಹ ಘಟನೆಗಳನ್ನು ತಡೆಯುವ ಕೆಲಸ ಮಾಡುತ್ತದೆ Felipe Almeida ಹೇಳುತ್ತಾರೆ. 

ಇದು ಏಕಕಾಲದಲ್ಲಿ ಹಲವು ಡಿವೈಸ್‌ಗಳನ್ನು ಬ್ಲಾಕ್ ಮಾಡುವ ಸಾಮಾರ್ಥ್ಯವನ್ನು ಹೊಂದಿದೆ. ನೀವು ಒಂದಕ್ಕಿಂತ ಹೆಚ್ಚು ಫೋನ್‌ಗಳನ್ನು ಹೊಂದಿದ್ದರೂ ಸಹ ರಕ್ಷಣೆ ನೀಡುತ್ತದೆ. ಈ ಅಪ್ಲಿಕೇಶನ್ ಅನ್ನು ವಿಶೇಷವಾಗಿ ಲೈಂಗಿಕ ಸುರಕ್ಷತೆ ಜಾಗೃತ ಡಿಜಿಟಲ್ ಪೀಳಿಗೆಗಾಗಿ ವಿನ್ಯಾಸಗೊಳಿಸಲಾಗಿದೆ, ಇದರಿಂದ ಅವರ ಗೌಪ್ಯತೆಯನ್ನು ರಕ್ಷಿಸಬಹುದು ಎಂದು ಆಪ್ ಡೆವಲಪರ್ ಮಾಹಿತಿ ನೀಡುತ್ತಾರೆ.

ಇದನ್ನೂ ಓದಿ: ಸಂಗಾತಿ ಸಮ್ಮತಿ ಇಲ್ಲದೇ ಲೈಂಗಿಕ ಕ್ರಿಯೆಯಲ್ಲಿ ಕಾಂಡೋಮ್ ತೆಗೆದ ಪೊಲೀಸ್ ಪೇದೆಗೆ ಜೈಲು ಶಿಕ್ಷೆ ಪ್ರಕಟ

click me!