ಕೇವಲ 699 ರೂಗೆ ಜಿಯೋ ಭಾರತ್ 4ಜಿ ಫೋನ್, ಇದು ದೀಪಾವಳಿ ಹಬ್ಬದ ಲಿಮಿಟೆಡ್ ಆಫರ್!

By Chethan Kumar  |  First Published Oct 26, 2024, 7:28 PM IST

ರೀಚಾರ್ಜ್ ಬೆಲೆಯಲ್ಲಿ ಇದೀಗ 4ಜಿ ಫೋನ್ ಲಭ್ಯವಿದೆ. ಇದು ದೀಪಾವಳಿ ಹಬ್ಬಕ್ಕೆ ರಿಲಯನ್ಸ್ ಜಿಯೋ ನೀಡಿದ ಭರ್ಜರಿ ಕೊಡುಗೆಯಾಗಿದೆ. ಕೇವಲ 699 ರೂಪಾಯಿ ಬೆಲೆಯಲ್ಲಿ 4ಜಿ ಫೋನ್ ಬಿಡುಗಡೆ ಮಾಡಲಾಗಿದೆ.


ನವದೆಹಲಿ(ಅ.26) ದೀಪಾವಳಿ ಹಬ್ಬಕ್ಕೆ ರಿಲಯನ್ಸ್ ಜಿಯೋ ಈಗಾಗಲೇ ಹಲವು ಆಫರ್ ಬಿಡುಗಡೆ ಮಾಡಿದೆ. ಇದೀಗ ಜಿಯೋ ತನ್ನ ಭಾರತ್ 4ಜಿ ಫೋನ್ ಬೆಲೆಯಲ್ಲಿ ಭಾರಿ ಕಡಿತ ಮಾಡಿದೆ. ಇದರ ಪರಿಣಾಮ ಕೇವಲ 699 ರೂಪಾಯಿಗೆ ಇದೀಗ ಜಿಯೋ ಭಾರತ್ 4ಜಿ ಫೋನ್ ಲಭ್ಯವಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಜಿಯೋ ಭಾರತ್ 4ಜಿ ಫೋನ್ ಬೆಲೆಗಳ ಮೇಲ ಶೇಕಡಾ 30 ರಷ್ಟು ಕಡಿತಗೊಳಿಸಲಾಗಿದೆ.  ಇದು ಲಿಮಿಟೆಡ್ ಪಿರೆಡ್ ಕೊಡುಗೆಯಾಗಿದೆ. ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಇದೀಗ ಗ್ರಾಹಕರಿಗೆ ಬಂಪರ್ ಕೊಡುಗೆ ಮೂಲಕ ವಹಿವಾಟು ವಿಸ್ತರಿಸಲು ಮುಂದಾಗಿದೆ. 

ಮತ್ತೊಂದು ವಿಶೇಷತೆ ಎಂದರಿ ಜಿಯೋ ಭಾರತ್ ಫೋನ್ ರಿಚಾರ್ಜ್ ಬೆಲೆ ಕೇವಲ 123 ರೂಪಾಯಿ. ಮಾಸಿಕ್ ಟಾರಿಫ್ ಯೋದನೆಯಲ್ಲಿ ಅನ್‌ಲಿಮಿಟೆಡ್ ಕಾಲ್, 14 ಜಿಬಿ ಉಚಿತ ಡೇಟಾ ಸಿಗಲಿದೆ. ಅತೀ ಕಡಿಮೆ ಬೆಲೆಯಲ್ಲಿ ತಿಂಗಳ ರೀಚಾರ್ಜ್ ಆಗಲಿದೆ. ಜಿಯೋದ ಮಾಸಿಕ  123 ರೂಪಾಯಿಗಳ ರೀಚಾರ್ಜ್ ಯೋಜನೆ ಇತರ ಆಪರೇಟರ್ ಗಳಿಗಿಂತ 40 ಪ್ರತಿಶತ ಅಗ್ಗವಾಗಿದೆ. ಏಕೆಂದರೆ ಇತರ ನೆಟ್‌ವರ್ಕ್‌ಗಳ ಫೀಚರ್ ಫೋನ್‌ಗಳ ಮಾಸಿಕ ರೀಚಾರ್ಜ್ ಕನಿಷ್ಠ 199 ರೂಪಾಯಿ ಇದೆ. ಇದು ಜಿಯೋಗಿಂತ 76 ರೂಪಾಯಿ ಹೆಚ್ಚು ದುಬಾರಿಯಾಗಿದೆ. ಅಂದರೆ, ಜಿಯೋ ಗ್ರಾಹಕರಿಗೆ ಪ್ರತಿ ರೀಚಾರ್ಜ್ ನಲ್ಲಿ ತಿಂಗಳಿಗೆ  76 ರೂಪಾಯಿ ಉಳಿತಾಯ ಆಗಲಿದೆ. 

Latest Videos

undefined

ಜಿಯೋ ದೀಪಾವಳಿ ಧಮಾಕಾ, ಒಂದೇ ಒಂದು ರೀಚಾರ್ಜ್‌‌ಗೆ ಪಡೆಯಿರಿ 3,350 ರೂ ಗಿಫ್ಟ್!

ತಿಂಗಳಿಗೆ 76 ರೂಪಾಯಂತೆ ಉಳಿತಾಯ ಮಾಡಿದರೆ 9 ತಿಂಗಳಲ್ಲಿ ಉಳಿತಾಯ ಆಗುವ ಮೊತ್ತ ಜಿಯೋ ಫೋನ್ ಬೆಲೆಗೆ ಸಮವಾಗಲಿದೆ.  ಹೀಗಾಗಿ ಗ್ರಾಹಕರು ರೀಚಾರ್ಜ್‌ಗೆ ಹೆಚ್ಚಿನ ಹಣ ರೀಚಾರ್ಜ್ ಮಾಡುವ ತಲೆನೋವಿನಿಂದ ದೂರವಾಗಬಹುದು.  ಇನ್ನು 2ಜಿ ಯಿಂದ 4ಜಿ ಗೆ ಅಪ್‌ಗ್ರೇಡ್ ಆಗುವ ಸುವರ್ಣ ಅವಕಾಶವನ್ನು ಜಿಯೋ ನೀಡುತ್ತಿದೆ. 455 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, ಚಲನಚಿತ್ರ ಪ್ರೀಮಿಯರ್‌ಗಳು ಮತ್ತು ಹೊಸ ಚಲನಚಿತ್ರಗಳು, ವೀಡಿಯೊ ಶೋಗಳು, ಲೈವ್ ಸ್ಪೋರ್ಟ್ಸ್ ಕಾರ್ಯಕ್ರಮಗಳು, ಜಿಯೋ ಸಿನೆಮಾ ಮುಖ್ಯಾಂಶಗಳು, ಡಿಜಿಟಲ್ ಪಾವತಿಗಳು, ಕ್ಯೂಆರ್ ಕೋಡ್ ಸ್ಕ್ಯಾ‌ನ್‌ಗಳು ಜಿಯೋಭಾರತ್ 4 ಜಿ ಫೋನ್‌ನಲ್ಲಿ ಲಭ್ಯವಿದೆ. ಜಿಯೋಪೇ ಮತ್ತು ಜಿಯೋಚಾಟ್ ನಂತಹ ಪ್ರಿಲೋಡೆಡ್ ಅಪ್ಲಿಕೇಶನ್ ಗಳು ಸಹ ಈ ಫೋನ್‌ನಲ್ಲಿ ಲಭ್ಯವಿರುತ್ತವೆ. ಹತ್ತಿರದ ಅಂಗಡಿಗಳ ಹೊರತಾಗಿ, ಫೋನ್ ಅನ್ನು ಜಿಯೋಮಾರ್ಟ್ ಅಥವಾ ಅಮೆಜಾನ್‌ನಿಂದ ಸಹ ಖರೀದಿಸಬಹುದು.

ಜಿಯೋ ಭಾರತ್ ಫೋನ್ ಹೊಸ ಕೊಡುಗೆ ಮೂಲಕ ಗ್ರಾಹಕರ ಬಳಿ ಬಂದಿದೆ. ಅತೀ ಕಡಿಮೆ ಬೆಲೆಯಲ್ಲಿ ಫೋನ್, ಕಡಿಮೆ ರೀಚಾರ್ಜ್, ಉಚಿತ ಸೌಲಭ್ಯಗಳು ಸಿಗಲಿದೆ. ಈಗಾಗಲೇ ಜಿಯೋ ಭಾರತ್ ಫೋನ್‌ಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಇದೀಗ ಜಿಯೋ ಭಾರತ್ ಆಫರ್‌ನಿಂದ ಮಾರಾಟದಲ್ಲೂ ಗಣನೀಯ ಏರಿಕೆ ಕಾಣುವ ಸಾಧ್ಯತೆ ಇದೆ. 

ಜಿಯೋ 153 ರೂ ಪ್ಲಾನ್, ಉಚಿತ ಡೇಟಾ, 28 ವ್ಯಾಲಿಟಿಡಿ ಜೊತೆಗೆ ಜಿಯೋ ಟಿವಿ-ಸಿನಿಮಾ ಸಬ್‌ಸ್ಕ್ರಿಪ್ಶನ್!

ಇತ್ತೀಚೆಗೆ ಜಿಯೋ ಭಾರತ್ ಫೀಚರ್ ಫೋನ್ ಕೂಡ ಬಿಡುಗಡೆ ಮಾಡಿತ್ತು. ಜಿಯೋ ಭಾರತ್ V3 ಹಾಗೂ ಜಿಯೋ ಭಾರತ್ V4 ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಹೆಚ್ಚಿನ ಬ್ಯಾಟರಿ ಬಾಳಿಕೆ ಹಾಗೂ ಉಪಯೋಗಕ್ಕಾಗಿ  1000 mAh ಬ್ಯಾಟರಿ ಪ್ಯಾಕ್ ಇದರಲ್ಲಿ ಬಳಸಲಾಗಿದೆ. 128 ಜಿಬಿ ಸ್ಟೋರೇಜ್ ವಿಸ್ತರಿಸಬಹುದಾದ ಸಾಮರ್ಥ್ಯ ಹೊಂದಿದೆ. ವಿಶೇಷ ಅಂದರೆ 12 ಭಾಷೆಗಳಿಗೆ ಈ ಜಿಯೋ ಬಾರತ್  V3,  V4 ಫೋನ್ ಸಪೋರ್ಟ್ ಮಾಡಲಿದೆ. ಈ ಫೋನ್ ಕೂಡ 123 ರೂಪಾಯಿ ಬೆಲೆಯಲ್ಲಿ ರೀಚಾರ್ಜ್ ಮಾಡಬಹುದು. 
 

click me!