ಬೆಲೆ ಏರಿಕೆಯಿಂದಾಗಿ ಖಾಸಗಿ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಕಳೆದುಕೊಳ್ಳುತ್ತಿರುವಾಗ, ಬಿಎಸ್‌ಎನ್‌ಎಲ್ ಹೊಸ ಗ್ರಾಹಕರನ್ನು ಸೆಳೆಯುತ್ತಿದೆ. ಟ್ರಾಯ್ ವರದಿಯ ಪ್ರಕಾರ, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬಿಎಸ್‌ಎನ್‌ಎಲ್ ಗಣನೀಯ ಸಂಖ್ಯೆಯ ಹೊಸ ಗ್ರಾಹಕರನ್ನುಗಳಿಸಿದೆ.
ನವದೆಹಲಿ: ಟೆಲಿಕಾಂ ಅಂಗಳದಲ್ಲಿ ಹಿಂದುಳಿದಿದೆ ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡಿದ್ದ ಸರ್ಕಾರಿ ಕಂಪನಿ ಬಿಎಸ್‌ಎನ್ಎಲ್ ಕಳೆದ ಕೆಲವು ತಿಂಗಳಿನಿಂದ ಸಂಚಲನ ಸೃಷ್ಟಿಸುತ್ತಿದೆ. ಖಾಸಗಿ ಟೆಲಿಕಾಂ ಕಂಪನಿಗಳು ಬೆಲೆ ಏರಿಕೆ ಮಾಡಿಕೊಂಡ ನಂತರ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ಹಂತ ಹಂತವಾಗಿ ಏರಿಕೆಯಾಗುತ್ತಿದೆ. ಈ ಬೆಳವಣಿಗೆಗೆ ಪೂರಕವಾಗಿ ಬಿಎಸ್‌ಎನ್‌ಎಲ್ ಸಹ ತನ್ನಲ್ಲಿ ಹಲವು ನೂತನ ಬದಲಾವಣೆಗಳನ್ನು ಮಾಡಿಕೊಂಡಿದೆ. ಇದೀಗ ಟ್ರಾಯ್ ವರದಿ ಪ್ರಕಾರ, ಎರಡು ತಿಂಗಳಲ್ಲಿ ಬಿಎಸ್‌ಎನ್‌ಎಲ್ ಹೊಸ ದಾಖಲೆಯನ್ನು ಬರೆದಿದೆ. ರಿಲಯನ್ಸ್ ಜಿಯೋ, ಏರ್‌ಟೈಲ್ ಮತ್ತು ವೊಡಾಫೋನ್ ಐಡಿಯಾ ಬೆಲೆ ಏರಿಕೆಯಿಂದ ಬೇಸತ್ತ ಗ್ರಾಹಕರು ಈ ಬಿಎಸ್‌ಎನ್‌ಎಲ್ ನ ಹೊಸ ದಾಖಲೆಗೆ ಕಾರಣರಾಗಿದ್ದಾರೆ.
ಎರಡು ತಿಂಗಳಲ್ಲಿ ಹೊಸ ದಾಖಲೆ
ಜುಲೈನಲ್ಲಿ ಬಿಎಸ್‌ಎನ್‌ಎಲ್‌ಗೆ ಸುಮಾರು 30 ಲಕ್ಷ ಹೊಸ ಗ್ರಾಹಕರು ಸೇರ್ಪಡೆಗೊಂಡಿದ್ದರು. ರಿಲಯನ್ಸ್ ಜಿಯೋ, ಏರ್‌ಟೈಲ್ ಮತ್ತು ವೊಡಾಫೋನ್ ಐಡಿಯಾ ಮೂರು ಕಂಪನಿಗಳು ಗ್ರಾಹಕರನ್ನು ಕಳೆದುಕೊಂಡಿದ್ದವು. ಏರ್‌ಟೈಲ್ 17 ಲಕ್ಷ, ವೊಡಾಫೋನ್ ಐಡಿಯಾ 14 ಲಕಷ ಮತ್ತು ರಿಲಯನ್ಸ್ ಜಯೋ 8 ಲಕ್ಷ ಬಳಕೆದಾರರನ್ನು ಕಳೆದುಕೊಂಡಿವೆ. ಇನ್ನು ಆಗಸ್ಟ್‌ನಲ್ಲಿ ಬಿಎಸ್‌ಎನ್‌ಎಲ್ ಮಾತ್ರ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.
undefined
ಟ್ರಾಯ್ ಪ್ರಕಾರ, ಆಗಸ್ಟ್‌ನಲ್ಲಿ ಬಿಎಸ್‌ಎನ್‌ಎಲ್‌ಗೆ 25 ಲಕ್ಷ ಹೊಸ ಗ್ರಾಹಕರನ್ನು ತನ್ನ ಆಕರ್ಷಿಸಿಕೊಂಡಿದೆ. ರಿಲಯನ್ಸ್ ಜಿಯೋ 40 ಲಕ್ಷ, ಏರ್‌ಟೈಲ್ 24 ಲಕ್ಷ ಮತ್ತು ವೊಡಾಫೋನ್ ಐಡಿಯಾ 19 ಲಕ್ಷ ಗ್ರಾಹಕರನ್ನು ಕಳೆದುಕೊಳ್ಳುವ ಮೂಲಕ ತೀವ್ರ ಆಘಾತಕ್ಕೊಳಗಾಗಿವೆ. ಮೂರು ಖಾಸಗಿ ಕಂಪನಿಯ ಗ್ರಾಹಕರು ಸರ್ಕಾರಿ ಕಂಪನಿತ್ತ ಮುಖ ಮಾಡುತ್ತಿರೋದು ಸ್ಪಷ್ಟವಾಗಿದೆ. ಜಿಯೋ ಸೇರಿದಂತೆ ಮೂರು ಕಂಪನಿಗಳು ಹೊಸ ಪ್ಲಾನ್ ಪರಿಚಯಿಸಿದರೂ ಗ್ರಾಹಕರನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತಿವೆ.
ಯಾರು ಪಾಲುದಾರಿಕೆ ಎಷ್ಟು?
ಆಗಸ್ಟ್ ಅಂತ್ಯಕ್ಕೆ ಟೆಲಿಕಾಂ ಅಂಗಳದಲ್ಲಿ ಶೇ.40ರಷ್ಟು ಬಳಕೆದಾರರನ್ನು ಹೊಂದುವ ಮೂಲಕ ರಿಲಯನ್ಸ್ ಜಿಯೋ ಮೊದಲ ಸ್ಥಾನದಲ್ಲಿದೆ. ಏರ್‌ಟೈಲ್ ಶೇ.33 ಮತ್ತು ವೊಡಾಪೋನ್ ಐಡಿಯಾ ಶೇ.18ರಷ್ಟು ಗ್ರಾಹಕರನ್ನು ಹೊಂದುವ ಮೂಲಕ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಬಿಎಸ್‌ಎನ್‌ಎಲ್ ಶೇ.7.8 ಮತ್ತು ಎಂಟಿಎನ್‌ಎಲ್ ಶೇ.0.2ರಷ್ಟು ಪಾಲು ಹೊಂದಿವೆ. ಎರಡೂ ಸೇರಿಸಿದರೂ ಬಿಎಸ್ಎನ್‌ಎಲ್ ಪಾಲುದಾರಿಕೆ ಕೇವಲ ಶೇ.8ರಷ್ಟು ಮಾತ್ರ ಹೊಂದಿದೆ.
ಇದನ್ನೂ ಓದಿ: ಹೊಸ ಲೋಗೋ ಬಿಡುಗಡೆಗೊಳಿಸಿ, ಗ್ರಾಹಕರಿಗೆ ಗುಡ್‌ನ್ಯೂಸ್ ಕೊಟ್ಟ ಬಿಎಸ್‌ಎನ್‌ಎಲ್; ಜಿಯೋ, ಏರ್‌ಟೆಲ್‌ಗೆ ಶಾಕ್
ಸದ್ಯ ಬಿಎಸ್‌ಎನ್‌ಎಲ್ ಲಾಭದಲ್ಲಿದ್ದು, ಕಡಿಮೆ ಟ್ಯಾರಿಫ್ ಬೆಲೆಗಳನ್ನು ಹೊಂದಿವೆ. Average Revenue Per User (ARPU) ಪ್ರಕಾರ ನೋಡೋದಾದ್ಗರೆ ಏರ್‌ಟೈಲ್ 211 ರೂ., ಜಿಯೋ 195 ರೂ. ಮತ್ತು ವೊಡಾಫೋನ್ ಐಡಿಯಾ 146 ರೂ. ಹೊಂದಿದೆ. ಇನ್ನು ಬಿಎಸ್‌ಎನ್‌ಎಲ್ ಕೇವಲ 100 ರೂಪಾಯಿ ARPU ಹೊಂದಿದೆ. ಸರ್ಕಾರಿ ಕಂಪನಿಯೇ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಸೇವೆಯನ್ನು ಒದಗಿಸುತ್ತಿದೆ.
ಬಿಎಸ್‌ಎನ್‌ಎಲ್ ಯಾಕೆ ಬೆಲೆ ಏರಿಕೆ ಮಾಡಿಲ್ಲ?
ಬಿಎಸ್‌ಎನ್‌ಎಲ್ ಇದುವರೆಗೂ ಅಧಿಕೃತವಾಗಿ 4G ಸೇವೆಯನ್ನು ಆರಂಭಿಸದ ಕಾರಣ ಬೆಲೆ ಏರಿಕೆ ಮಾಡಿಕೊಂಡಿಲ್ಲ. ಇತ್ತ ಜಿಯೋ ಮತ್ತು ಏರ್‌ಟೈಲ್ ತನ್ನ ಬಳಕೆದಾರರನ್ನು 4Gಯಿಂದ 5Gಗೆ ವರ್ಗಾಯಿಸುತ್ತಿವೆ. ಇನ್ನು ವೊಡಾಫೋನ್ ಐಡಿಯಾ ತನ್ನ ಬಳಕೆದಾರರಿಗೆ 4G ಸೇವೆಯನ್ನು ನೀಡುತ್ತಿದೆ. 5G ಸೇವೆ ಆರಂಭಿಸಲು ವೊಡಾಫೋನ್ ಐಡಿಯಾ ಬಂಡವಾಳ ಸಂಗ್ರಹಕ್ಕೆ ಪ್ರಯತ್ನಿಸುತ್ತಿದೆ. ಸದ್ಯಕ್ಕೆ ಯಾವುದೇ ಬೆಲೆ ಏರಿಕೆ ಮಾಡಲ್ಲ ಎಂದು ಬಿಎಸ್‌ಎನ್ಎಲ್ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಮತ್ತೊಂದೆಡೆ 4ಜಿ ಸೇವೆ ಆರಂಭಿಸಲು ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್ ಕ್ಷಿಪ್ರವಾಗಿ ಕೆಲಸ ಮಾಡುತ್ತಿದ್ದು, ಹೊಸ ಏಳು ಸೇವೆಗಳನ್ನು ಸಹ ಬಿಡುಗಡೆಗೊಳಿಸಿದೆ.
ಇದನ್ನೂ ಓದಿ: ಗ್ರಾಹಕರಿಗಾಗಿ ಹೊಸ 7 ಸೇವೆ ಬಿಡುಗಡೆಗೊಳಿಸಿದ ಬಿಎಸ್‌ಎನ್‌ಎಲ್: ಪತರಗುಟ್ಟಿದ ಜಿಯೋ, ಏರ್‌ಟೆಲ್