Amazon Mobile and TV Savings Days Sale : ಸ್ಮಾರ್ಟ್‌ಫೋನ್, ಸ್ಮಾರ್ಟ್ ಟಿವಿಗಳ ಮೇಲಿದೆ ಅತ್ಯುತ್ತಮ ಡೀಲ್ಸ್!‌

Published : Feb 13, 2022, 09:03 AM ISTUpdated : Feb 13, 2022, 09:41 AM IST
Amazon Mobile and TV Savings Days Sale : ಸ್ಮಾರ್ಟ್‌ಫೋನ್, ಸ್ಮಾರ್ಟ್ ಟಿವಿಗಳ ಮೇಲಿದೆ ಅತ್ಯುತ್ತಮ ಡೀಲ್ಸ್!‌

ಸಾರಾಂಶ

ಅಮೆಝಾನ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಸೇಲ್ ಈಗ ಲೈವ್ ಆಗಿದ್ದು  ಸ್ಮಾರ್ಟ್‌ಫೋನ್‌ಗಳು ಮತ್ತು ಟಿವಿಗಳಲ್ಲಿ ಹಲವಾರು ಡೀಲ್‌ಗಳು ಮತ್ತು ಕೊಡುಗೆಗಳನ್ನು ಕಂಪನಿ  ನೀಡಿದೆ

Tech Desk: ಅಮೆಝಾನ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಸೇಲ್ ಈಗ ಲೈವ್ ಆಗಿದ್ದು  ಸ್ಮಾರ್ಟ್‌ಫೋನ್‌ಗಳು ಮತ್ತು ಟಿವಿಗಳಲ್ಲಿ ಹಲವಾರು ಡೀಲ್‌ಗಳು ಮತ್ತು ಕೊಡುಗೆಗಳನ್ನು, ಕಂಪನಿ  ನೀಡಿದೆ. ಮಾರಾಟದ ಸಮಯದಲ್ಲಿ, ಗ್ರಾಹಕರು Samsung, OnePlus, Xiaomi, Realme, OPPO ಮತ್ತು Tecno ಸೇರಿದಂತೆ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳ ಮೇಲೆ ರಿಯಾಯಿತಿಗಳನ್ನು ಪಡೆಯಬಹುದು.  AmazonBasics, Samsung, Hisense, Sony ಮತ್ತು Xiaomi ನಂತಹ ಬ್ರ್ಯಾಂಡ್‌ಗಳ ಟಿವಿಗಳಲ್ಲಿ ಗ್ರಾಹಕರು 40 ಪ್ರತಿಶತದವರೆಗೆ ರಿಯಾಯಿತಿಗಳನ್ನು ಪಡೆಯಬಹುದು. ಅಮೆಝಾನ್ ಪ್ರಕಾರ, ಅನೇಕ ಸ್ಮಾರ್ಟ್‌ಫೋನ್ ರಿಯಾಯಿತಿಗಳು ಮತ್ತು ಡೀಲ್‌ಗಳು ಬ್ಯಾಂಕ್ ಕಾರ್ಡ್‌ಗಳ ವಿಶೇಷ ರಿಯಾಯಿತಿ ಒಳಗೊಂಡಿವೆ.

ಅಮೆಜಾನ್‌ನ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಮಾರಾಟವು ಫೆಬ್ರವರಿ 15 ರವರೆಗೆ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಲೈವ್ ಆಗಿರುತ್ತದೆ ಮತ್ತು ಮಾರಾಟದ ಅವಧಿಯವರೆಗೆ ಗ್ರಾಹಕರು ರಿಯಾಯಿತಿ ದರದಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಟಿವಿಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಮೊಬೈಲ್ ಬಿಡಿಭಾಗಗಳು ಸಹ ರಿಯಾಯಿತಿ ದರದಲ್ಲಿ ಮಾರಾಟವಾಗಿದ್ದು, ಆರಂಭಿಕ ಬೆಲೆಯ ರೂ. 69ರಿಂದ ಲಭ್ಯವಿದೆ. 
ಪವರ್ ಬ್ಯಾಂಕ್‌ಗಳ ಬೆಲೆಯು ರೂ. 399 ನಿಂದ ಪ್ರಾರಂಭವಾಗುತ್ತವೆ ಎಂದು ಅಮೆಜಾನ್ ತಿಳಿಸಿದೆ.

ಇದನ್ನೂ ಓದಿ: 'Boycott Amazon': ತ್ರಿವರ್ಣ ಧ್ವಜಕ್ಕೆ ಅವಮಾನ : ಭಾರತೀಯರ ಕೆಂಗಣ್ಣಿಗೆ ಗುರಿಯಾದ ಅಮೆಝಾನ್!

ಸ್ಮಾರ್ಟ್‌ಫೋನ್‌ಗಳ ಮೇಲೆ ಅತ್ಯುತ್ತಮ ಡೀಲ್‌ಗಳು:  ಅಮೆಜಾನ್ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಮಾರಾಟದಲ್ಲಿ, ಪ್ರಸ್ತುತ   ರೂ. 22,999 ಬೆಲೆಯಿರುವ Redmi Note 11T 5G ರೂ. 19,999ಗೆ ಖರೀದಿಗೆ ಲಭ್ಯವಿದೆ. ಕಂಪನಿಯ Mi 11X, Qualcomm Snapdragon 870 SoC ಯನ್ನು ಹೊಂದಿದ್ದು ಬ್ಯಾಂಕ್ ರಿಯಾಯಿತಿಗಳು ಸೇರಿದಂತೆ ರೂ. 6,000  ರಿಯಾಯಿತಿ ಜೊತೆಗೆ   25,999 ರೂ.ಗೆ ಲಭ್ಯವಿದೆ. ಜತೆಗೆ ಹೆಚ್ಚುವರಿ ರೂ. 3,000 ವಿನಿಮಯದ ಮೇಲೆ ರಿಯಾಯಿತಿ ನೀಡಲಾಗುತ್ತಿದೆ. 

ಪ್ರಸ್ತುತ 34,999 ರೂ. ಬೆಲೆಯ  Samsung Galaxy M52 5G  10 ರಷ್ಟು ಬ್ಯಾಂಕ್ ರಿಯಾಯಿತಿ ಸೇರಿದಂತೆ 22,999ರೂ.ಗೆ ಲಭ್ಯವಿದೆ.   ರೂ. 23,999 ಬೆಲೆಯ  Samsung Galaxy M32 5G ಬ್ಯಾಂಕ್ ರಿಯಾಯಿತಿ ರೂ. 2,000. ಸೇರಿದಂತೆ  ರೂ.20,999ಗೆ ಲಭ್ಯವಿದೆ.  

ಪ್ರಸ್ತುತ  ರೂ. 29,990 ಬೆಲೆಯಿರುವ Iqoo Z5 ಬೆಲೆ ರೂ. 21,990 ಬೆಲೆಯಲ್ಲಿ ಲಭ್ಯವಿದೆ. 5,000 ರಿಯಾಯಿತಿಯೊಂದಿಗೆ Iqoo 7 ಬೆಲೆ 27,990 ಬೆಲೆಗೆ ಲಭ್ಯವಿದೆ. ಎರಡೂ ಸ್ಮಾರ್ಟ್‌ಫೋನ್ ಕೊಡುಗೆಗಳು ಬ್ಯಾಂಕ್ ರಿಯಾಯಿತಿಗಳು ಮತ್ತು ರೂ. 2,000 ಮೌಲ್ಯದ Amazon ಕೂಪನ್‌ಗಳನ್ನು ಒಳಗೊಂಡಿವೆ.

ಇದನ್ನೂ ಓದಿ: Amazon ಹೆಸರಲ್ಲಿ ಧೋಖಾ: ಮಾಜಿ ಉದ್ಯೋಗಿ ಬಂಧನ!

ರೂ.1,500 ರಿಯಾಯಿತಿಯೊಂದಿಗೆ Oppo A15s ಪ್ರಸ್ತುತ ಬೆಲೆ ರೂ. 10,641.  ರೂ.12,999 ಬೆಲೆಯ  Realme Narzo 50A ಬೆಲೆ ಪ್ರಸ್ತುತ ರೂ. 10,349ಕ್ಕೆ ಕಡಿಮೆಯಾಗಿದೆ. ಮೂಲ ಬೆಲೆ ರೂ. 7,499 ಹೊಂದಿರುವ Tecno Pop 5 LTE 6,699 ಖರೀದಿಗೆ ಲಭ್ಯವಿದೆ. Oppo, Realme ಮತ್ತು Tecno ನಿಂದ ಈ ಸ್ಮಾರ್ಟ್‌ಫೋನ್‌ಗಳ ಮೇಲಿನ ರಿಯಾಯಿತಿಗಳು ಫೆಡರಲ್ ಬ್ಯಾಂಕ್ ಕಾರ್ಡ್‌ಗಳೊಂದಿಗೆ 10 ಪ್ರತಿಶತ ರಿಯಾಯಿತಿಯನ್ನು ಒಳಗೊಂಡಿವೆ.

ಟಿವಿಗಳಲ್ಲಿ ಉತ್ತಮ ಡೀಲ್‌ಗಳು: ಅಮೆಜಾನ್ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಮಾರಾಟವು ಬೆರಳೆಣಿಕೆಯ ಟಿವಿಗಳ ರಿಯಾಯಿತಿಗಳನ್ನು ಹೊಂದಿದೆ, ಇದರಲ್ಲಿ 32-ಇಂಚಿನ ರೆಡ್‌ಮಿ ಟಿವಿ ರೂ. 10,001 ರಿಯಾಯಿತಿಯೊಂದಿಗೆ ಪ್ರಸ್ತುತ ರೂ. 14,998 ಬೆಲೆಯಲ್ಲಿ ಲಭ್ಯವಿದೆ. ರೂ. 44,999 ಬೆಲೆಯ  50-ಇಂಚಿನ Redmi TV ಮಾದರಿಯು  ರೂ.34,998ಗೆ ಖರೀದಿಗೆ ಲಭ್ಯವಿದೆ. 

ಕಂಪನಿಯ 32 ಇಂಚಿನ Mi Horizon ಪೂರ್ಣ-HD ಟಿವಿ ರೂ. 3,500 ರಿಯಾಯಿತಿಯೊಂದಿಗೆ ಬೆಲೆ ರೂ. 16,499 ಲಭ್ಯವಿದೆ . ಬಳಕೆದಾರರು ಫೆಡರಲ್ ಬ್ಯಾಂಕ್ ಕಾರ್ಡ್‌ಗಳೊಂದಿಗೆ ರೂ.2,000 ವರೆಗೆ ಹೆಚ್ಚುವರಿ ರಿಯಾಯಿತಿಗಳನ್ನು ಸಹ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. 

 ರೂ. 52,900 ಬೆಲೆಯ Samsung ನ 43-ಇಂಚಿನ Crystal 4K Pro UHD TV  ಪ್ರಸ್ತುತ ರೂ. 36,990 ಬೆಲೆಗೆ ಲಭ್ಯವಿದೆ. OnePlus ನಿಂದ ಸ್ಮಾರ್ಟ್ ಟಿವಿಗಳು  ರೂ. 3,500 ರಿಯಾಯಿತಿಯೊಂದಿಗೆ ಪ್ರಸ್ತುತ ರೂ. 16,499 ಬೆಲೆಗೆ ಲಭ್ಯವಿದೆ. ಗ್ರಾಹಕರು 50-ಇಂಚಿನ AmazonBasics 4K ಟಿವಿಯನ್ನು  ರೂ. 23,001 ರಿಯಾಯಿತಿಯೊಂದಿಗೆ ರೂ. 32,999 ಬೆಲೆಯಲ್ಲಿ  40 ಪ್ರತಿಶತದಷ್ಟು ರಿಯಾಯಿತಿಯೊಂದಿಗೆ ಪಡೆಯಬಹುದು. Sony ನ ಪ್ರೀಮಿಯಂ 55-ಇಂಚಿನ 4K UHD Google TV 30 ಪ್ರತಿಶತದಷ್ಟು ರಿಯಾಯಿತಿಯನ್ನು ಹೊಂದಿದೆ, ಇದನ್ನು ರೂ. 33,910 ರಿಯಾಯಿತಿಯೊಂದಿಗೆ  ರೂ. 75,990 ಬೆಲೆಯಲ್ಲಿ ಪಡೆಯಬಹುದು. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ