ಈ ಆ್ಯಪ್ ಡೌನ್'ಲೋಡ್ ಮಾಡಿ iphone7 ಹಾಗೂ ಇತರ ಕೊಡುಗೆಗಳನ್ನು ಉಚಿತವಾಗಿ ಪಡೆಯಿರಿ

Published : Jan 07, 2017, 03:22 AM ISTUpdated : Apr 11, 2018, 12:57 PM IST
ಈ ಆ್ಯಪ್ ಡೌನ್'ಲೋಡ್ ಮಾಡಿ iphone7 ಹಾಗೂ ಇತರ ಕೊಡುಗೆಗಳನ್ನು ಉಚಿತವಾಗಿ ಪಡೆಯಿರಿ

ಸಾರಾಂಶ

ಅಚಾನಕ್ಕಾಗಿ ನಿಮ್ಮ ಮನೆ ಬಾಗಿಲಿಗೆ ಸ್ಯಾಮ್'ಸಂಗ್ ಗ್ಯಾಲಕ್ಸಿ ಎಸ್ 7 ಇಲ್ಲವೇ ಐಫೋನ್ ಇಲ್ಲವೇ ಅಮೂಲ್ಯವಾದ ಗಿಫ್ಟ್'ಗಳು ಯಾವುದೇ ಹಣ ಪಾವತಿಸದೆ ಫ್ರೀಯಾಗಿ ಬರುತ್ತವೆ ಎಂದಾದರೆ ನಿಮಗೆ ಹೇಗನಿಸುತ್ತದೆ?. ಶಾಕ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಒಳಗೊಳಗೆ ಖುಷಿಯೂ ಆಗುತ್ತದೆ.

ಅಚಾನಕ್ಕಾಗಿ ನಿಮ್ಮ ಮನೆ ಬಾಗಿಲಿಗೆ ಸ್ಯಾಮ್'ಸಂಗ್ ಗ್ಯಾಲಕ್ಸಿ ಎಸ್ 7 ಇಲ್ಲವೇ ಐಫೋನ್ ಇಲ್ಲವೇ ಅಮೂಲ್ಯವಾದ ಗಿಫ್ಟ್'ಗಳು ಯಾವುದೇ ಹಣ ಪಾವತಿಸದೆ ಫ್ರೀಯಾಗಿ ಬರುತ್ತವೆ ಎಂದಾದರೆ ನಿಮಗೆ ಹೇಗನಿಸುತ್ತದೆ?. ಶಾಕ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಒಳಗೊಳಗೆ ಖುಷಿಯೂ ಆಗುತ್ತದೆ.

ಇದೇ ರೀತಿ ಮುಂಬೈನ ಠಾನೆಯಲ್ಲಿ ನೆಲೆಸುತ್ತಿರುವ ಪ್ರಸಾದ್ ಎಂಬಾತನಿಗೆ ಅಚಾನಕ್ಕಾಗಿ 50 ಸಾವಿರ ರೂಪಾಯಿ ಮೌಲ್ಯದ ಸ್ಯಾಮ್'ಸಂಗ್ ಗ್ಯಾಲಕ್ಸಿ ಎಸ್ 7 ಫ್ರೀಯಾಗಿ ದೊರಕಿದೆ. ಇನ್ನು ಜಮ್ಮುವಿನಲ್ಲಿ ನೆಲೆಸುತ್ತಿರುವ ಸಂದೀಪ್ ಸಿಂಹ ರಾಜ್'ಪೂತ್'ಗೆ ಎಂಬವರಿಗೆ 27,990 ರೂಪಾಯಿ ಮೌಲ್ಯದ ಸೋನಿ ಪ್ಲೇ ಸ್ಟೇಷನ್ 4 ಸಿಕ್ಕಿದೆ. ಇದೆಲ್ಲಾ ಒಂದು ಆ್ಯಪ್'ನ ಜಾದೂ, ಹಾಗಾದ್ರೆ ಈ ಆ್ಯಪ್ ಯಾವುದು? ಇಲ್ಲಿದೆ ವಿವರ.

ಲಕ್ಕಿ ಸ್ಟಾರ್ಸ್ ಆ್ಯಪ್

ಆಗಸ್ಟ್ 2016ರಲ್ಲಿ ಹೆತಿನ್ ಸಖುಜಾ ತಾನೇ ಖುದ್ದಾಗಿ ವಿಭಿನ್ನ ಮೊಬೈಲ್ ಆ್ಯಪ್ 'ಲಕ್ಕಿ ಸ್ಟಾರ್ಸ್' ಲಾಂಚ್ ಮಾಡಿದ್ದಾರೆ. ಇದು ಫ್ರೀ ಗಿಫ್ಟ್'ಗಳನ್ನು ಗೆಲ್ಲಲು ನಿರ್ಮಿಸಿದ ಆ್ಯಪ್ ಆಗಿದೆ. ಈ ಆ್ಯಪ್'ನ ನೋಂದಾಯಿತ ಗ್ರಾಹಕರಿಗೆ ಫ್ರೀಯಾಗಿ ಅಮೂಲ್ಯ ಹಾಗೂ ಬ್ರಾಂಡೆಡ್ ಗಿಫ್ಟ್'ಗಳನ್ನು ಪಡೆಯುವ ಅವಕಾಶವಿದೆ.

ಈವರೆಗೆ ಯಾರಿಗೆಲ್ಲಾ ಸಿಕ್ಕಿದೆ ಗಿಫ್ಟ್?

ಆ್ಯಪ್ ಬಿಡುಗಡೆಯಾದಂದಿನಿಂದ ಈವರೆಗೆ 1400 ಕ್ಕೂ ಅಧಿಕ ಮಂದಿಗೆ ಸ್ಕೂಟರ್, ಸ್ಮಾರ್ಟ್ ಟಿ.ವಿ, ಚಿನ್ನದ ನಾಣ್ಯ ಸೇರಿ ಇ್ನನಿತರ ಅಮೂಲ್ಯ ಕೊಡುಗೆಗಳು ಉಚಿತವಾಗಿ ಸಿಕ್ಕಿದೆ.  ಈ ಆ್ಯಪ್ ಇನ್ಸ್ಟಾಲ್ ಮಾಡುವ ಮುನ್ನ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದು, ಇದನ್ನು ಒಪ್ಪಿಕೊಂಡು ನೀವು ಬಳಸಬಹುದು.  

ಆ್ಯಪ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಲಕ್ಕಿ ಸ್ಟಾರ್ಸ್ IOS ಹಾಗೂ ಆ್ಯಂಡ್ರಾಯ್ಡ್ ಗಾಗಿ ರೂಪಿಸಿದ ಮೊಬೈಲ್ ಆ್ಯಪ್ ಆಗಿದೆ. ಇದನ್ನು ಬಳಸಿ ಫ್ರೀ ಗಿಫ್ಟ್'ಗಳನ್ನು ಗೆಲ್ಲಬಹುದಾಗಿದೆ. ಇದನ್ನು ಉಚಿತವಾಗಿ ಡೌನ್'ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಲಕ್ಕಿ ಡ್ರಾನಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.

ಡ್ರಾನಲ್ಲಿ ಎಂಟ್ರಿ ಪಡೆಯಲು ಅರ್ಹತೆ ಹೊಂದಿರುವುದು ಅತಿ ಅಗತ್ಯ. ಇದಕ್ಕಾಗಿ ನೀವು ಕೇಳುವ ಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಬೇಕು. ಡ್ರಾನಲ್ಲಿ ಗೆದ್ದ ಗ್ರಾಹಕರಿಗೆ ಆ್ಯಪ್ ಹಾಗೂ ರಿಜಿಸ್ಟರ್ಡ್ ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ ಹಾಗೂ ಈ ಗಿಫ್ಟ್ ಪಡೆಯಲು ನಾಹಿತಿ ಬಂದ 48 ಗಂಟೆಯಲ್ಲಿ ನಿಮ್ಮ ಗಿಫ್ಟ್'ನ್ನು ಕ್ಲೈಮ್ ಮಾಡುವುದು ಅಗತ್ಯ.

ಲಕ್ಕಿ ಸ್ಟಾರ್ಟ್ ಆ್ಯಪ್ ತನ್ನದೇ ಆದ ವೆಬ್'ಸೈಟ್ ಕೂಡಾ ಹೊಂದಿದ್ದು, ಇದರಲ್ಲಿ ಈ ಆ್ಯಪ್'ಗೆ ಸಂಬಂಧಿಸಿದ ಮಾಹಿತಿ- ವಿಜೇತರ ಹೆಸರು, ಪಾಲ್ಗೊಳ್ಳುವ ವಿಧಾನ, ಯಾವೆಲ್ಲಾ ಕೊಡುಗೆಗಳನ್ನು ವಿಜೇತರಿಗೆ ನೀಡುತ್ತಾರೆ, ಪ್ರಶಂಸಾಪತ್ರಗಳ ವಿವರ ಹೀಗೆ ಎಲ್ಲಾ ವಿಚಾರವನ್ನು ನೀಡಲಾಗಿದೆ. ವೆಬ್ ಸೈಟ್ ಲಿಂಕ್ http://www.luckystarsapp.com/index.php#page-top

ಸೂಚನೆ: ಈ ಮಾಹಿತಿಯನ್ನು ಕೇವಲ ಸಾಮಾಜಿಕ ಜಾಲಾತಾಣಗಳಲ್ಲಿ ಲಭ್ಯವಾದ ಮಾಹಿತಿಯ ಮೇರೆಗೆ ನೀಡಲಾಗಿದೆ. ಈ ಆ್ಯಪ್'ನಲ್ಲಿ ಕಂಡು  ಬರುವ ಯಾವುದೇ ಲೋಪದೋಷಗಳಿಗೆ ನಾವು ಜವಾಬ್ದಾರರಲ್ಲ.  

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ChatGPT ಅಥವಾ Grok ಜೊತೆಗೆ ಈ 10 ರಹಸ್ಯವಾದ ಸಂಗತಿಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ!
ಸೊಗಸಾದ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನು ಬೇಕಾ? ಇಲ್ಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ17 5ಜಿ!