ಆ್ಯಕ್ಸಿಡೆಂಟ್ ಮಾಡಿ ಚಾಲಕ ಗಾಡಿಯೊಂದಿಗೆ ಪರಾರಿಯಾದರೆ ಚಿಂತಿಸಬೇಡಿ: ಈ ಆ್ಯಪ್'ನಲ್ಲಿ ಸಿಗುತ್ತೆ ಮಾಹಿತಿ

By Suvarna Web DeskFirst Published Jan 6, 2017, 9:03 AM IST
Highlights

'ಹಿಟ್ ಆ್ಯಂಡ್ ರನ್' ಅಂದರೆ ಆ್ಯಕ್ಸಿಡೆಂಟ್ ಮಾಡಿದ ಬಳಿಕ ಚಾಲಕ ಘಟನಾ ಸ್ಥಳದಿಂದ ತನ್ನ ಗಾಡಿಯೊಂದಿಗೆ ಪರಾರಿಯಾಗುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ ಹಾಗೂ ಇದು ಸಾಮಾನ್ಯವಾಗಿ ಬಿಟ್ಟಿದೆ. ಹೀಗಿರುವಾಗ ನೀವು ಕೇವಲ ಗಾಡಿ ನಂಬರ್ ನೋಟ್ ಮಾಡಿಕೊಂಡು ವಾಹನಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು RTO ಗೆ ತೆರಳದೆ ನಿಮ್ಮ ಮೊಬೈಲ್ ಮೂಲಕವೇ ಕಂಡು ಹಿಡಿಯಬಹುದಾಗಿದೆ, ಹೇಗಂತೀರಾ? ಹಾಗಾದರೆ ಈ ಸ್ಟೋರಿ ಓದಿ.

ಹೀಗೆ ಅಪಘಾತದ ಬಳಿಕ ಪರಾರಿಯಾಗುವ ಚಾಲಾಕಿ ಚಾಲಕರ ವಿವರಗಳನ್ನು ಪಡೆಯಲೆಂದೇ ಆ್ಯಪ್ ಒಂದನ್ನು ಹೊರ ತರಲಾಗಿದೆ. ಈ ಆ್ಯಪ್'ನಿಂದ ನೀವು RTO ಕಚೇರಿಗೆ ಸುತ್ತಾಡುವ ಸಮಸ್ಯೆಯೂ ತಪ್ಪುತ್ತದೆ. ಇನ್ನು ಈ ಆ್ಯಪ್ ಅದೆಷ್ಟು ಉಪಯೋಗಕ್ಕೆ ಬರುತ್ತಿದೆ ಎಂದರೆ ಬಳಕದಾದರು ಇದಕ್ಕೆ 4.3 ಸ್ಟಾರ್ ನೀಡಿದ್ದಾರೆ. ಈವರೆಗೂ ಈ ಆ್ಯಪ್'ನ್ನು 10 ಲಕ್ಷಕ್ಕೂ ಅಧಿಕ ಮಂದಿ ಡೌನ್'ಲೋಡ್ ಮಾಡಿಕೊಂಡಿದ್ದಾರೆ. ಆದರೆ ಈ ಆ್ಯಪ್ ಕೇವಲ ಆ್ಯಂಡ್ರಾಯ್ಡ್ 4.5 ಇಲ್ಲವೇ ನಂತರದ ವರ್ಷನ್'ನ ಸ್ಮಾರ್ಟ್'ಫೋನ್'ನಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತದೆ.

ಇದನ್ನು ಬಳಸುವುದು ಹೇಗೆ?

ನಿಮ್ಮ ಬಳಿ ಗಾಡಿಯ ನಂಬರ್ ಇದ್ದರೆ ಈ ಕೆಳಗಿನ 5 ಸುಲಭ ಹೆಜ್ಜೆಗಳನ್ನು ಬಳಸಿ ಆ್ಯಕ್ಟಿವೇಟ್ ಮಾಡಬಹುದು ಹಾಗೂ ವಾಹನ ಚಾಲಕನಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಪಡೆಯಬಹುದು.

-ಎಲ್ಲಕ್ಕಿಂತಲೂ ಮೊದಲು ಗೂಗಲ್ ಪ್ಲೇ ಸ್ಟೋರ್'ನಿಂದ RTO Vehicle Information ಆ್ಯಪ್ ಡೌನ್'ಲೋಡ್ ಮಾಡಿ ಓಪನ್ ಮಾಡಿಕೊಳ್ಳಬೇಕು.

-ಇಲ್ಲಿ ನೀಡಿದ Search Vehicle Information ಮೇಲೆ ಕ್ಲಿಕ್ ಮಾಡಿ.

-ಇಲ್ಲಿ ನೀಡಿದ ಬಾಕ್ಸ್'ನಲ್ಲಿ ನೀವು ನೋಟ್ ಮಾಡಿಕೊಂಡ ಗಾಡಿಯ ನಂಬರ್ ಟೈಪ್ ಮಾಡಿ ಓಕೆ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಮೊಬೈಲ್ ನಂಬರ್ ನೀವು ನೀಡಬೇಕಾಗುತ್ತದೆ. ಈ ಮೊಬೈಲ್ ನಂಬರ್'ಗೆ OTP ಬರುತ್ತದೆ.

-ಈ OTP ಯನ್ನು ಅಲ್ಲಿ ನೀಡಿದ ಬಾಕ್ಸ್'ನಲ್ಲಿ ಎಂಟರ್ ಮಾಡಿ, ಮರುಕ್ಷಣವೇ ವಾಹನಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯೂ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲಿರುತ್ತದೆ. ಇದರಲ್ಲಿ ವಾಹನದ ಮಾಲಿಕನ ಹೆಸರು ಹಾಗೂ ಮಾಡೆಲ್ ನಂಬರ್ ಕೂಡಾ ಶಾಮೀಲಾಗಿರುತ್ತದೆ.

-ಒಂದು ವೇಳೆ ನಿಮಗೆ ವಾಹನದ ಮಾಹಿತಿ ಸಿಗದಿದ್ದರೆ ಕಾಂಟೆಕ್ಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಇದಾದ ಕೆಲ ಸಮಯದಲ್ಲಿ ಮಾಹಿತಿ ನಿಮಗೆ ಸಿಗುತ್ತದೆ. 

click me!