ಜಿಯೋಗೆ ಸಡ್ಡು ಹೊಡೆಯಲು ವೊಡಾಫೋನ್ ಆಫರ್

Published : Jan 06, 2017, 05:05 PM ISTUpdated : Apr 11, 2018, 01:11 PM IST
ಜಿಯೋಗೆ ಸಡ್ಡು ಹೊಡೆಯಲು ವೊಡಾಫೋನ್ ಆಫರ್

ಸಾರಾಂಶ

₹499 ವೊಡಾಫೋನ್ ರೆಡ್ ಪೋಸ್ಟ್‌'ಪೇಯ್ಡ್ ಪ್ಲಾನ್ ಬಳಸುವ ಗ್ರಾಹಕರು ಯಾವುದೇ ನೆಟ್‌'ವರ್ಕ್‌ಗೆ ಅನಿಯಮಿತ ರಾಷ್ಟ್ರೀಯ ಮತ್ತು ಸ್ಥಳೀಯ ಕರೆಗಳು ಮಾಡಬಹುದು, ಜತೆಗೆ 3ಜಿಬಿ 3ಜಿ/4ಜಿ ಡಾಟಾ ಬಳಸಬಹುದು.

ನವದೆಹಲಿ(ಜ.06): ರಿಲಯನ್ಸ್ ಜಿಯೋಗೆ ಸಡ್ಡು ಹೊಡೆಯುವ ಸಲುವಾಗಿ ವೊಡಾಫೋನ್ ಟೆಲಿಕಾಂ ಕಂಪನಿ ಒಂದೇ ದಿನ ಎರಡೆರಡು ಆಫರ್ ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದೆ.

ವೊಡಾಫೋನ್ ಪೋಸ್ಟ್‌ಪೇಯ್ಡ್ ಬಳಸುವ ಗ್ರಾಹಕರಿಗೆ ಅನಿಯಮಿತ ಕರೆ ಮತ್ತು ಅತಿ ಹೆಚ್ಚಿನ ಡಾಟಾ ಆಫರ್ ನೀಡಿದೆ. ಏರ್‌'ಟೆಲ್‌ನಿಂದ ತಿಂಗಳಿಗೆ 3ಜಿಬಿ 4ಜಿ ಡೇಟಾ ಆಫರ್ ಬಿಡುಗಡೆಗೊಂಡ ನಂತರ ವೊಡಾಫೋನ್ ರೆಡ್ ಪೋಸ್ಟ್‌'ಪೇಯ್ಡ್‌'ನ ಪರಿಷ್ಕರಿಸಿದ ಪ್ಲಾನ್ ಅನ್ನು ಚಾಲ್ತಿಗೊಳಿಸಲಿದೆ.

₹499 ವೊಡಾಫೋನ್ ರೆಡ್ ಪೋಸ್ಟ್‌'ಪೇಯ್ಡ್ ಪ್ಲಾನ್ ಬಳಸುವ ಗ್ರಾಹಕರು ಯಾವುದೇ ನೆಟ್‌'ವರ್ಕ್‌ಗೆ ಅನಿಯಮಿತ ರಾಷ್ಟ್ರೀಯ ಮತ್ತು ಸ್ಥಳೀಯ ಕರೆಗಳು ಮಾಡಬಹುದು, ಜತೆಗೆ 3ಜಿಬಿ 3ಜಿ/4ಜಿ ಡಾಟಾ ಬಳಸಬಹುದು. ಇಷ್ಟಲ್ಲದೆ, ರೋಮಿಂಗ್ ಸ್ಥಳದಲ್ಲಿ ಇನ್‌'ಕಮಿಂಗ್ ಕರೆಗೆ ದರ ವಿಧಿಸುವುದಿಲ್ಲ, ತಿಂಗಳಿಗೆ 100 ಉಚಿತ ಸಂದೇಶಗಳ ಕೊಡುಗೆಯೂ ಇದೆ.

ಇದೇ ವೇಳೆ ವೊಡಾಫೋನ್ ಸೂಪರ್‌'ಅವರ್ ಎಂಬ ಮತ್ತೊಂದು ಆಫರ್ ಬಿಡುಗಡೆ ಮಾಡಿದೆ. ಇದರಂತೆ ಪ್ರೀಪೇಯ್ಡ್ ಗ್ರಾಹಕರು ಕೇವಲ ₹16 ರುಪಾಯಿಗೆ ಒಂದು ಗಂಟೆ 3ಜಿ/4ಜಿ ಡಾಟಾವನ್ನು ಬಳಸಬಹುದು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಒಂದಲ್ಲ, ಎರಡಲ್ಲ 3 ಹೊಸ ಫೋಲ್ಡಬಲ್ ಫೋನ್ ಲಾಂಚ್! ಸ್ಯಾಮ್‌ಸಂಗ್‌ನಿಂದ Galaxy Z Fold 8 ಸರಣಿ ಜೊತೆ ಹೊಸ Galaxy Watch
iPhone 18 Pro: ಆ್ಯಪಲ್‌ನ ಈವರೆಗಿನ ಎಲ್ಲ ಅಪ್‌ಗ್ರೇಡ್‌ಗಳನ್ನೂ ಮೀರಿಸಲಿದೆ ಐಫೋನ್ 18 ಪ್ರೊ ವರ್ಷನ್!