ನಕಲಿ ಕ್ಯೂಆರ್​ ಕೋಡ್​ಗೆ ಬಲಿಯಾಗದಿರಿ ಎಚ್ಚರ! ಯಾಮಾರಿದ್ರೆ ಅಕೌಂಟ್​ ಖಾಲಿ: ನಕಲಿ ಗುರುತಿಸುವುದು ಹೇಗೆ?

Published : Dec 15, 2025, 07:11 PM IST
QR Code Scam

ಸಾರಾಂಶ

ಡಿಜಿಟಲ್ ಯುಗದಲ್ಲಿ ಕ್ಯೂಆರ್ ಕೋಡ್ ಪಾವತಿ ಸಾಮಾನ್ಯವಾಗಿದ್ದು, ಇದರೊಂದಿಗೆ ಮೋಸದ ಜಾಲವೂ ಬೆಳೆಯುತ್ತಿದೆ. ಪಾರ್ಕಿಂಗ್‌ನಂತಹ ಸಾರ್ವಜನಿಕ ಸ್ಥಳಗಳಲ್ಲಿ ನಕಲಿ ಕ್ಯೂಆರ್ ಕೋಡ್‌ ಅಂಟಿಸಿ ವಂಚನೆ ಹೆಚ್ಚಾಗಿದ್ದು, ಇದನ್ನು ಗುರುತಿಸುವುದು ಮತ್ತು ಮೋಸ ಹೋದರೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ

ಇದೀಗ ಡಿಜಿಟಲ್​ ಯುಗ. ಕೈಯಲ್ಲಿ ಕ್ಯಾಷ್​ ಹಿಡಿದುಕೊಂಡು ಹೋಗುವುದೇ ಅಪರೂಪ. ಎಲ್ಲೆಡೆ ಕ್ಯೂಆರ್​ ಕೋಡ್​ ಬಳಸಿ ಹಣ ಪಾವತಿ ಮಾಡಿದರೆ ಆಯಿತು. ಹತ್ತು ವರ್ಷಗಳ ಹಿಂದೆ ಇಂಥದ್ದೊಂದು ಕ್ರಾಂತಿ ದೇಶದಲ್ಲಿ ಆಗುತ್ತದೆ ಎನ್ನುವ ಊಹೆಯೂ ಇರಲಿಲ್ಲ. ಆದರೆ ಇದೀಗ ಭಾರತವು ಡಿಜಿಟಲ್​ ಯುಗದತ್ತ ಸಾಗಿದೆ. ಆದರೆ ಇದೇ ವೇಳೆ, ತಂತ್ರಜ್ಞಾನ ಮುಂದುವರೆದಂತೆಲ್ಲಾ, ಇದನ್ನು ದುರುಪಯೋಗ ಪಡಿಸಿಕೊಂಡು ಮೋಸ ಮಾಡುವ ಜಾಲವೂ ಬೆಳೆಯುತ್ತಲೇ ಇದೆ. ಅದರಲ್ಲಿ ಒಂದು ಕ್ಯೂಆರ್​ ಕೋಡ್​ (QR code- Quick Response code).

ಕ್ಯಾ-ಆರ್​ ಕೋಡ್​ ಎಚ್ಚರಿಕೆ

ಪಾರ್ಕಿಂಗ್​ ಸೇರಿದಂತೆ ಹಲವು ಕಡೆಗಳಲ್ಲಿ ಕ್ಯೂ-ಆರ್​ ಕೋಡ್​ ಬಳಸುವಾಗ ಅತ್ಯಂತ ಜಾಗರೂಕರಾಗಿ ಇರಬೇಕು. ಹೋಟೆಲ್​, ಅಂಗಡಿ ಇತ್ಯಾದಿಗಳಲ್ಲಾದರೆ ಅವರೇ ಅಲ್ಲಿರುತ್ತಾರೆ, ಜವಾಬ್ದಾರಿ ಅವರ ಮೇಲೆ ಇರುವ ಕಾರಣ, ಅಲ್ಲಿ ಯಾವ ರೀತಿಯ ನಕಲಿ ಹಾವಳಿ ಇರದೇ ಇರಬಹುದು. ಆದರೆ ಯಾರೂ ಇಲ್ಲದ ಕಡೆಗಳಲ್ಲಿ ಅದರಲ್ಲಿಯೂ ಹೆಚ್ಚಾಗಿ ಪಾರ್ಕಿಂಗ್​ನಂಥ ಪ್ರದೇಶಗಳಲ್ಲಿ ನಕಲಿ ಕ್ಯೂ ಆರ್​ ಕೋಡ್​ ಹಾವಳಿ ಹೆಚ್ಚುತ್ತಿದೆ.

ಬ್ಯಾಂಕ್​ನಲ್ಲಿರೋ ಹಣ ಗಾಯಬ್​ ಆಗ್ಬೋದು

ಪಾರ್ಕ್​ ಮಾಡಿದ ಬಳಿಕ ಇಲ್ಲವೇ ಕೆಲವೊಂದು ಕಡೆಗಳಲ್ಲಿ ಅಲ್ಲಿರುವ ಕ್ಯೂ ಆರ್​ ಕೋಡ್​ ಬಳಸಲು ಸ್ಕ್ಯಾನ್​ ಮಾಡಿದ್ರೆ ನಿಮ್ಮ ಅಕೌಂಟೇ ಖಾಲಿ ಆಗಬಹುದು. ಒಂದು ವೇಳೆ ಅಲ್ಲಿರುವ ವ್ಯಕ್ತಿ ನಕಲಿಯಾಗಿದ್ದು, ಕ್ಯೂಆರ್​ ಕೋಡ್​ ಬಳಸುವಂತೆ ತಾಕೀತು ಮಾಡಿದ್ರೆ ನೀವು ಬಹಳ ಎಚ್ಚರದಿಂದ ಇರಬೇಕು.

ಮೋಸವನ್ನು ತಿಳಿಯುವುದು ಹೇಗೆ?

ಇದು ಆಗುವುದು ಹೇಗೆ ಎಂದರೆ, ಅಲ್ಲಿರುವ ಕ್ಯೂ ಆರ್​ ಕೋಡ್​ ಮೇಲೆ ಯಾರಿಗೂ ತಿಳಿಯದಂತೆ ಮೋಸದ ಕೋಡ್ ಅಂಟಿಸಲಾಗುತ್ತದೆ. ಇದನ್ನು ನೀವು ಸರಿಯಾಗಿ ಗಮನಿಸದೇ ಸ್ಕ್ಯಾನ್​​ ಮಾಡಿದರೆ, ನಿಮ್ಮ ಬ್ಯಾಂಕ್​ನಲ್ಲಿರೋ ದುಡ್ಡು ಕೂಡ ಮಂಗಮಾಯ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

- ಆದ್ದರಿಂದ ಮೋಸದ ಜಾಲಕ್ಕೆ ಸಿಲುಕದೇ ಇರಲು ಮೊದಲು ನೀವು ಇಂಥ ಪ್ರದೇಶಗಳಿಗೆ ಹೋದಾಗ ಅಲ್ಲಿರುವ ಕ್ಯೂ-ಆರ್​ ಕೋಡ್​ ಮೇಲೆ ಬೇರೆ ಅಂಟಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.

- ಅದರ URL ಪರಿಶೀಲಿಸಬೇಕು (ಕಾಗುಣಿತ ತಪ್ಪುಗಳಿವೆಯೇ, ಡೊಮೇನ್ ಸರಿಯಾಗಿದೆಯೇ ಎಂದು ನೋಡಿಕೊಳ್ಳಬೇಕು),

-ಅಂಗಡಿಗಳಲ್ಲಿ ಈ ರೀತಿ ಮೋ ಹೋಗದಂತೆ ಸ್ಕ್ಯಾನ್​ ಮಾಡಿದ ಬಳಿಕ ಬರುವ ಹೆಸರು ಅಂಗಡಿಯದ್ದೇ ಹೌದೋ ಅಲ್ಲವೋ ನೋಡಿಕೊಳ್ಳಿ.

_ ಒಂದು ವೇಳೆ ಸ್ಕ್ಯಾನ್ ಮಾಡುವ ಸಂದರ್ಭದಲ್ಲಿ ಯಾವುದಾದರೂ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಹೇಳಿದರೆ, ಹಾಗೆ ಮಾತಬೇಡಿ.

ಸ್ಕ್ಯಾನ್​ ಮಾಡಿದ್ದರೆ ಏನು ಮಾಡಬೇಕು?

- ಒಂದು ವೇಳೆ ಸ್ಕ್ಯಾನ್ ಮಾಡಿಬಿಟ್ಟಿದ್ದರೆ UPI ಪಿನ್ ನಮೂದಿಸದೇ ಬ್ಯಾಕ್​ಗೆ ಹೋಗಿ, ಇದಕ್ಕೂ ಮೀರಿ ಮೋಸ ಹೋದರೆ ಕೂಡಲೇ ಬ್ಯಾಂಕ್‌ಗೆ ತಿಳಿಸಿ ನಿಮ್ಮ ಅಕೌಂಟ್​ ಕ್ಲೋಸ್​ ಮಾಡಿಸಿ.

- ಸ್ಕ್ಯಾನರ್​ ಮೇಲೆ ಇರುವ "ಉಚಿತ ಹಣ" ಅಥವಾ "ಉತ್ಪನ್ನಗಳು" ಇಂಥ ಆಸೆಗೆ ಬಲಿಯಾಗಬೇಡಿ. ಹೀಗಿದ್ದರೆ ಅದು ನಕಲಿಯೇ ಹೆಚ್ಚಾಗಿರುತ್ತದೆ!

- ಆನ್‌ಲೈನ್ ವಂಚನೆಗಳಿಗೆ ಸಹಾಯವಾಣಿಯಾದ 1930 ಅಥವಾ cybercrime.gov.in ನಲ್ಲಿ ದೂರು ನೀಡಿ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಹೊಸ ವರ್ಷದ ಆಫರ್‌ ನಲ್ಲಿ ಟಿವಿ, ಮೊಬೈಲ್ ಖರೀದಿಸಲು ಫ್ಲಾನ್ ಮಾಡಿದ್ರೆ ನಿಮಗಿದು ಶಾಕಿಂಗ್ ಸುದ್ದಿ!
YouTubeನಿಂದ ಗೋಲ್ಡನ್ ಪ್ಲೇ ಬಟನ್ ಪಡೆದ ನಂತ್ರ ಯೂಟ್ಯೂಬರ್‌ನ ಆದಾಯ ಎಷ್ಟಾಗುತ್ತೆ ಗೊತ್ತಾ?