Covid 19 Booster ಡೋಸ್‌ ಪಡೆಯದೆ ಕಚೇರಿಗೆ ಮರಳಬೇಡಿ: ಉದ್ಯೋಗಿಗಳಿಗೆ Facebook ತಾಕೀತು!

By Suvarna News  |  First Published Jan 11, 2022, 4:29 PM IST

ಫೇಸ್‌ಬುಕ್ ಈ ಹಿಂದೆ ಜನವರಿ 31 ರೊಳಗೆ ಕಚೇರಿಯನ್ನು ಪುನಃ ತೆರೆಯಲು ಯೋಜಿಸಿತ್ತು. ಅದರೆ  ಒಮಿಕ್ರೋನ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ದಿನಾಂಕವನ್ನು ಈಗ ಮಾರ್ಚ್ 28 ಕ್ಕೆ  ಮುಂದೂಡಿದೆ. ಜತೆಗೆ ಉದ್ಯೋಗಿಗಳು ಕಚೇರಿಗೆ ಬರುವ ಮುನ್ನ ಕೋವಿಡ್ ಬೂಸ್ಟರ್ ಡೋಸ್‌ನ ಪುರಾವೆಗಳನ್ನು ತೋರಿಸಬೇಕಾಗುತ್ತದೆ ಎಂದು ಕಂಪನಿ ತಾಕೀತು ಮಾಡಿದೆ


Tech Desk: ಫೇಸ್‌ಬುಕ್‌ನ ಮಾತೃ ಕಂಪನಿಯಾದ ಮೆಟಾ (Meta) ತನ್ನ ಉದ್ಯೋಗಿಗಳು ಕಚೇರಿಗೆ ಹಿಂದಿರುಗುವ ಯೋಜನೆಗಳಲ್ಲಿ ಕೊಂಚ ಬದಲಾವಣೆ ಮಾಡಿದೆ. ಫೇಸ್‌ಬುಕ್ ಉದ್ಯೋಗಿಗಳನ್ನು (Facebook Employees) ಕಚೇರಿಗೆ ಕರೆಸಿಕೊಳ್ಳುವ ತನ್ನ ಯೋಜನೆಗಳನ್ನು ಮೂಂದುವುಡುದರ ಜತಗೆ ಮೆಟಾ ಒಡೆತನದ ಕಂಪನಿ ಕೋವಿಡ್ ಬೂಸ್ಟರ್ ಡೋಸ್‌ಅನ್ನು (Covid 19 Booster)‌ ಕಡ್ಡಾಯಗೊಳಿಸಿದೆ.  ಫೇಸ್‌ಬುಕ್ ಈ ಹಿಂದೆ ಜನವರಿ 31 ರೊಳಗೆ ಕಚೇರಿಯನ್ನು ಪುನಃ ತೆರೆಯಲು ಯೋಜಿಸಿತ್ತು. ಅದರೆ  ಒಮಿಕ್ರೋನ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ದಿನಾಂಕವನ್ನು ಈಗ ಮಾರ್ಚ್ 28 ಕ್ಕೆ  ಮುಂದೂಡಿದೆ.

ಉದ್ಯೋಗಿಗಳಿಗೆ ಕಚೇರಿಗೆ ಮರಳಲು office deferral ಕಾರ್ಯಕ್ರಮವನ್ನು ಫೇಸ್‌ಬುಕ್ ಈ ಹಿಂದೆ ಘೋಷಿಸಿತ್ತು. ಆದ್ದರಿಂದ ಕಚೇರಿಯಿಂದ ಕೆಲಸ ಮಾಡಲು ಆಯ್ಕೆ ಮಾಡುವ ಜನರಿಗೆ ಕಚೇರಿಯು ಮಾರ್ಚ್ 28 ತೆರೆಯಲಿದೆ. "ಕೆಲವು ಉದ್ಯೋಗಿಗಳು ಹಿಂತಿರುಗಲು ಸಿದ್ಧವಾಗಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಅವರಿಗೆ ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಆಯ್ಕೆ ಮಾಡಲು ನಾವು ವಿವಿಧ ಆಯ್ಕೆಗಳನ್ನು ನೀಡುವುದನ್ನು ಮುಂದುವರಿಸುತ್ತೇವೆ, ಆದ್ದರಿಂದ ನಮ್ಮ ಉದ್ಯೋಗಿಗಳು ಅವರು ಎಲ್ಲಿ ಕೆಲಸ ಮಾಡುತ್ತಾರೆ ಎಂಬುದರ ಕುರಿತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು" ಎಂದು ಕಂಪನಿಯ ಮಾನವ ಸಂಪನ್ಮೂಲಗಳ (HR) ಉಪಾಧ್ಯಕ್ಷ ಜಾನೆಲ್ಲೆ ಗೇಲ್ ಹೇಳಿದ್ದಾರೆ.

Latest Videos

undefined

ಕೋವಿಡ್ ಬೂಸ್ಟರ್ ಡೋಸ್‌ ಕಡ್ಡಾಯ!

ಆದಾಗ್ಯೂ, ಈಗ ಉದ್ಯೋಗಿಗಳಿಗೆ ನಿಯಮಗಳು ಸ್ವಲ್ಪ ಬದಲಾಗಿವೆ. ಉದ್ಯೋಗಿಗಳು ಕಚೇರಿಗೆ ಬರುವ ಮುನ್ನ ಕೋವಿಡ್ ಬೂಸ್ಟರ್ ಡೋಸ್‌ನ ಪುರಾವೆಗಳನ್ನು ತೋರಿಸಬೇಕಾಗುತ್ತದೆ. ಮೆಟಾ ಯುಎಸ್‌ನಲ್ಲಿರುವ ತನ್ನ ಎಲ್ಲಾ ಉದ್ಯೋಗಿಗಳಿಗೆ ಕೋವಿಡ್ ವಿರುದ್ಧ ಲಸಿಕೆ ಹಾಕಬೇಕೆಂದು ತಿಳಿಸಿದೆ. ಫೇಸ್‌ಬುಕ್ ಉದ್ಯೋಗಿಗಳಿಗೆ ಅವರು ಕಚೇರಿಯಿಂದ ಕೆಲಸ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಮಾರ್ಚ್ 14 ರವರೆಗೆ ಸಮಯವಿದೆ ಎಂದು ರಾಯಿಟರ್ಸ್ ವರದಿ ಹೇಳಿದೆ. ಅವರು ಹೆಚ್ಚು ಉತ್ಸುಕರಾಗಿಲ್ಲದಿದ್ದರೆ, ಅವರು ದೂರದಿಂದಲೇ ಪೂರ್ಣ ಸಮಯ ಕೆಲಸ ಮಾಡಬಹುದು ಅಥವಾ ತಾತ್ಕಾಲಿಕವಾಗಿ ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಮಾಡಬಹುದು ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Social Media Hacking: ನಿಮ್ಮ ಸೋಷಿಯಲ್‌ ಮೀಡಿಯಾ ಖಾತೆ ಸೇಫಾಗಿಡಲು ಇಲ್ಲಿವೆ ಸರಳ ಸೂತ್ರಗಳು!

ಆರೋಗ್ಯ ಅಥವಾ ಇತರ ಕಾರಣಗಳಿಂದ ಲಸಿಕೆಯನ್ನು ಪಡೆಯದ ಉದ್ಯೋಗಿಗಳು ತಾತ್ಕಾಲಿಕವಾಗಿ ಅಥವಾ  ಶಾಶ್ವತವಾಗಿ ಮನೆಯಿಂದ ಕೆಲಸ ಮಾಡಲು ವಿನಂತಿಸಬಹುದು." ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದ ನೌಕರರು ವಜಾಗೊಳಿಸುವುದು ಸೇರಿದಂತೆ ಶಿಸ್ತಿನ ಕ್ರಮಗಳನ್ನು ಎದುರಿಸಬಹುದು. ನಿಸ್ಸಂಶಯವಾಗಿ, ಇದು ಕೊನೆಯ ಉಪಾಯವಾಗಿರುತ್ತದೆ," ಎಂದು ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ ಇಮೇಲ್‌ನಲ್ಲಿ ತಿಳಿಸಿದ್ದಾರೆ.

ಲಸಿಕೆ ಹಾಕದ ಉದ್ಯೋಗಿಗಳ ವಿರುದ್ಧ ಗೂಗಲ್ ಕಠಿಣ ಕ್ರಮ!

ಈ ಹಿಂದೆ, ಕೋವಿಡ್ -19 ವಿರುದ್ಧ ಲಸಿಕೆ ಹಾಕದ ಉದ್ಯೋಗಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಗೂಗಲ್ ಘೋಷಿಸಿತ್ತು. ಜನವರಿ 18 ರೊಳಗೆ ಲಸಿಕೆ ನಿಯಮಗಳನ್ನು ಅನುಸರಿಸಲು ವಿಫಲರಾದ ಉದ್ಯೋಗಿಗಳನ್ನು 30 ದಿನಗಳವರೆಗೆ "paid administrative leave" ಯಲ್ಲಿ ಇರಿಸಲಾಗುವುದು ಎಂದು ಸರ್ಚ್ ದೈತ್ಯ ಉದ್ಯೋಗಿಗಳಿಗೆ ಮೆಮೊವನ್ನು ಬಿಡುಗಡೆ ಮಾಡಿದೆ ಎಂದು  ವರದಿಗಳು ತಿಳಿಸಿದ್ದವು. ಇದಾದ  ನಂತರವು ಲಸಿಕೆ ಪಡೆಯಲು ವಿಫಲರಾಗುವವರನ್ನು  ಆರು ತಿಂಗಳವರೆಗೆ "unpaid personal leave" ಯಲ್ಲಿ ಇರಿಸಲಾಗುತ್ತದೆ. ಈ ಅವಧಿ ಮುಗಿದ ಬಳಿಕ ಅವರು ಲಸಿಕೆಯನ್ನು ಪಡೆಯದಿದ್ದರೆ, ಅವರನ್ನು ಕಂಪನಿಯನ್ನು ತೊರೆಯಲು ಕೇಳಲಾಗುತ್ತದೆ ಎಂದು ಮೂಲಗಳು ತಿಳಿಸಿದ್ದವು.

ಇದನ್ನೂ ಓದಿ: Meta Exposes Spy Firms: ಖಾಸಗಿ ಪತ್ತೆದಾರಿ ಸಂಸ್ಥೆಗಳ 1,500 ನಕಲಿ ಖಾತೆ ಬ್ಯಾನ್‌ ಮಾಡಿದ ಫೇಸ್‌ಬುಕ್!

"ನಾವು ಮೊದಲೇ ಹೇಳಿದಂತೆ, ನಮ್ಮ ವ್ಯಾಕ್ಸಿನೇಷನ್ ಅವಶ್ಯಕತೆಗಳು ನಮ್ಮ ಉದ್ಯೋಗಿಗಳನ್ನು ಸುರಕ್ಷಿತವಾಗಿರಿಸಲು ಮತ್ತು ನಮ್ಮ ಸೇವೆಗಳನ್ನು ಚಾಲನೆಯಲ್ಲಿಡಲು ಇದು ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ. ಲಸಿಕೆ ಹಾಕಿಸಿಕೊಳ್ಳುವ ನಮ್ಮ ಉದ್ಯೋಗಿಗಳಿಗೆ ಸಹಾಯ ಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡಲು ನಾವು ಬದ್ಧರಾಗಿದ್ದೇವೆ ಮತ್ತು ನಮ್ಮ ಲಸಿಕೆ ನೀತಿಯ ಹಿಂದೆ ದೃಢವಾಗಿ ನಿಲ್ಲುತ್ತೇವೆ, ”ಎಂದು ಕಂಪನಿಯ ವಕ್ತಾರ ಲೋರಾ ಲೀ ಎರಿಕ್ಸನ್ The Vergeಗೆ ತಿಳಿಸಿದ್ದರು.

click me!