HMD Globalನ Nokia Lite Earbuds , ವೈಯರ್ಡ್ ಬಡ್ಸ್ ಭಾರತದಲ್ಲಿ ಬಿಡುಗಡೆ: 36 ಗಂಟೆಗಳ ಬ್ಯಾಟರಿ ಲೈಫ್!

By Suvarna News  |  First Published Jan 11, 2022, 3:57 PM IST

Nokia Lite Earbuds BH-205 ಜತೆಗೆ Nokia Wired Buds WB 101 ಕೂಡ ಭಾರತದಲ್ಲಿ ಮಂಗಳವಾರ, ಜನವರಿ 11 ರಂದು ಬಿಡುಗಡೆ ಮಾಡಲಾಗಿದೆ


Tech Desk: Nokia Lite Earbuds BH-205 ಮತ್ತು Nokia Wired Buds WB 101 ಅನ್ನು ಭಾರತದಲ್ಲಿ ಮಂಗಳವಾರ, ಜನವರಿ 11 ರಂದು ಬಿಡುಗಡೆ ಮಾಡಲಾಗಿದೆ. ಕಂಪನಿಯ ಹೊಸ ಟ್ರ್ಯೂ ವೈರ್‌ಲೆಸ್ ಸ್ಟಿರಿಯೊ (TWS) ಇಯರ್‌ಬಡ್‌ಗಳು 36 ಗಂಟೆಗಳವರೆಗೆ ಒಟ್ಟು ಬ್ಯಾಟರಿ ಅವಧಿಯನ್ನು‌ (total battery life) ನೀಡುತ್ತವೆ, ಇದು ಚಾರ್ಜಿಂಗ್‌ನ ಬ್ಯಾಕಪ್ ಅನ್ನು ಒಳಗೊಂಡಿರುತ್ತದೆ.  ಕಂಪನಿಯ ಹೊಸ Nokia ವೈರ್ಡ್ ಬಡ್ಸ್ ಫ್ಲಾಟ್, ಟ್ಯಾಂಗಲ್-ಫ್ರೀ ಕೇಬಲ್, ಆಡಿಯೋ ಜ್ಯಾಕ್ ಮತ್ತು ಕೇಬಲ್ ಕ್ಲಿಪ್ ಅನ್ನು ಒಳಗೊಂಡಿದೆ. ಹೊಸ ಇಯರ್‌ಫೋನ್‌ಗಳು ದೇಶದಲ್ಲಿ HMD ಗ್ಲೋಬಲ್‌ನ ನೋಕಿಯಾ ಪವರ್ ಇಯರ್‌ಬಡ್ಸ್ ಲೈಟ್ ಮತ್ತು ನೋಕಿಯಾ ಟ್ರೂ ವೈರ್‌ಲೆಸ್ ಇಯರ್‌ಬಡ್ಸ್  ಆಡಿಯೊ ಪರಿಕರಗಳನ್ನು ಸೇರಿಕೊಂಡಿವೆ.

ಭಾರತದಲ್ಲಿ Nokia Lite Earbuds BH-205, Nokia Wired Buds WB 101 ಬೆಲೆ, ಲಭ್ಯತೆ

Tap to resize

Latest Videos

undefined

ಭಾರತದಲ್ಲಿ ನೋಕಿಯಾ ಲೈಟ್ ಇಯರ್‌ಬಡ್ಸ್ BH-205 ಬೆಲೆಯನ್ನು ರೂ. 2,799ಗೆ ನಿಗದಿಪಡಿಸಲಾಗಿದ್ದು ಟ್ರು ವೈಯರ್‌ ಲೆಸ್ ಇಯರ್‌ಫೋನ್‌ಗಳು ಒಂದೇ ಚಾರ್ಕೋಲ್ ಬಣ್ಣದ ಆಯ್ಕೆಯಲ್ಲಿ ಲಭ್ಯವಿರುತ್ತವೆ. TWS ಇಯರ್‌ಬಡ್‌ಗಳು ಅಧಿಕೃತ Nokia ವೆಬ್‌ಸೈಟ್, ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ರಿಟೇಲ್ ಅಂಗಡಿಗಳ ಮೂಲಕ ಖರೀದಿಗೆ ಲಭ್ಯವಿರುತ್ತವೆ.

ಇದನ್ನೂ ಓದಿ: HMD Global at CES 2022: Nokia C100, C200 ಮತ್ತು Nokia G100, G400 ಬಜೆಟ್ ಫೋನ್‌ಗಳು ಬಿಡುಗಡೆ!

ಭಾರತದಲ್ಲಿ Nokia Wired Buds WB 101 ಬೆಲೆ ರೂ. 299ಗೆ ನಿಗದಿಪಡಿಸಾಲಾಗಿದ್ದು  ಕಪ್ಪು, ಬಿಳಿ, ನೀಲಿ ಮತ್ತು ಕೆಂಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. TWS ಇಯರ್‌ಬಡ್‌ಗಳಂತೆ, ಹೊಸ Nokia ವೈರ್ಡ್ ಬಡ್ಸ್ ಕಂಪನಿಯ ಅಧಿಕೃತ ವೆಬ್‌ಸೈಟ್, ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ರಿಟೇಲ್ ಅಂಗಡಿಗಳ ಮೂಲಕ ಖರೀದಿಸಲು ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ.‌

Nokia Lite Earbuds BH-205 specifications

ನೋಕಿಯಾ ಲೈಟ್ ಇಯರ್‌ಬಡ್ಸ್ ಬಿಎಚ್-205 6mm ಡ್ರೈವರ್‌ಗಳನ್ನು ಹೊಂದಿದೆ ಮತ್ತು ಕಂಪನಿಯ ಪ್ರಕಾರ ಸ್ಟುಡಿಯೋ-ಟ್ಯೂನ್ ಮಾಡಿದ ಆಡಿಯೊ ಗುಣಮಟ್ಟವನ್ನು ನೀಡುತ್ತದೆ. ಒಂದೇ ಇಯರ್‌ಬಡ್‌ನ್ನು  ಸ್ವತಂತ್ರವಾಗಿ ಕೂಡ ಬಳಸಬಹುದು, ಕೇವಲ ಒಂದು ಇಯರ್‌ಬಡ್ ಬಳಕೆಯಲ್ಲಿದ್ದಾಗ ಸ್ವಯಂಚಾಲಿತವಾಗಿ ಮೊನೊ ಆಡಿಯೊಗೆ ಬದಲಾಯಿಸಬಹುದು. ನೋಕಿಯಾ ಲೈಟ್ ಇಯರ್‌ಬಡ್ಸ್ BH-205 ಬ್ಲೂಟೂತ್ v5.0 ಸಂಪರ್ಕದೊಂದಿಗೆ ಬರುತ್ತದೆ.

ಇದನ್ನೂ ಓದಿ: 20ನೇ ವಾರ್ಷಿಕೋತ್ಸವಕ್ಕೆ ನೋಕಿಯಾ 6310 ಫೋನು ಮರು ಬಿಡುಗಡೆ!

HMD ಗ್ಲೋಬಲ್ ಪ್ರಕಾರ, ಹೊಸ Nokia Lite ಇಯರ್‌ಬಡ್ಸ್ ಧ್ವನಿ ಆಜ್ಞೆಗಳಿಗಾಗಿ Google Assistant ಮತ್ತು Siri ಎರಡನ್ನೂ ಬೆಂಬಲಿಸುತ್ತದೆ. TWS ಇಯರ್‌ಬಡ್‌ಗಳು ಪ್ರತಿ ಇಯರ್‌ಬಡ್‌ಗೆ 40mAh ಬ್ಯಾಟರಿಯೊಂದಿಗೆ ಬರುತ್ತವೆ, ಅದು ಒಂದೇ ಚಾರ್ಜ್‌ನಲ್ಲಿ ಆರು ಗಂಟೆಗಳವರೆಗೆ ಪ್ಲೇಟೈಮ್ ಅನ್ನು ನೀಡುತ್ತದೆ. ಇದರ 400mAh ಚಾರ್ಜಿಂಗ್ ಕೇಸ್ ಬ್ಯಾಟರಿಯಿಂದ ಹೆಚ್ಚುವರಿ 30 ಗಂಟೆಗಳ ಕಾಲ ಬ್ಯಾಟರಿ ಲೈ ನೀಡುತ್ತದೆ. ಇಯರ್‌ಬಡ್‌ಗಳು ಆಕ್ಟಿವ ನಾಯ್ಸ್‌ ಕ್ಯಾನ್ಸಲೇಷನ್‌ (ANC) ವೈಶಿಷ್ಟ್ಯ ನೀಡುವುದಿಲ್ಲ.

Nokia Wired Buds WB 101 specifications

ನೋಕಿಯಾ ವೈರ್ಡ್ ಬಡ್ಸ್ WB 101 10mm ಡ್ರೈವರ್‌ಗಳನ್ನು ಹೊಂದಿದೆ ಮತ್ತು HMD ಗ್ಲೋಬಲ್ ಪ್ರಕಾರ ಕೋನೀಯ ವಿನ್ಯಾಸವನ್ನು (angled) ನೀಡುತ್ತದೆ. ವೈರ್ಡ್ ಇಯರ್‌ಫೋನ್‌ಗಳು ಫ್ಲಾಟ್ ಟ್ಯಾಂಗಲ್-ಫ್ರೀ ಕೇಬಲ್ ಅನ್ನು ಹೊಂದಿದ್ದು 135 ಡಿಗ್ರಿ ಕೋನದಲ್ಲಿ ಆಡಿಯೊ ಜಾಕ್ ಅನ್ನು ಒಳಗೊಂಡಿರುತ್ತವೆ. ನೋಕಿಯಾ ವೈರ್ಡ್ ಬಡ್ಸ್ ಕರೆಗಳಿಗಾಗಿ ಇನ್-ಲೈನ್ ಮೈಕ್ರೊಫೋನ್ ಜೊತೆಗೆ ಮೀಡಿಯಾ ಪ್ಲೇಬ್ಯಾಕ್ ನಿಯಂತ್ರಣಗಳೊಂದಿಗೆ ಸಹ ಬರುತ್ತದೆ.

HMD ಗ್ಲೋಬಲ್ ಪ್ರಕಾರ, ಹೊಸ Nokia ವೈರ್ಡ್ ಬಡ್ಸ್ ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ ಸೇರಿದಂತೆ ಧ್ವನಿ ಸಹಾಯಕರನ್ನು ಬೆಂಬಲಿಸುತ್ತದೆ. ವೈರ್ಡ್ ಇಯರ್‌ಫೋನ್‌ಗಳು passive noise isolation ಒಳಗೊಂಡಿರುತ್ತವೆ ಮತ್ತು ಇಯರ್‌ಫೋನ್‌ಗಳನ್ನು ಸುರಕ್ಷಿತಗೊಳಿಸಲು ಮತ್ತು ಚಲನೆಯಲ್ಲಿರುವಾಗ ಹೆಚ್ಚುವರಿ ಶಬ್ದವನ್ನು ತಡೆಯಲು ಬಳಸಬಹುದಾದ ಅಂತರ್ನಿರ್ಮಿತ ಕ್ಲಿಪ್‌ನೊಂದಿಗೆ ಬರುತ್ತವೆ.

click me!