Global Technology Summit: ನ.29ರಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗಿ

By Suvarna News  |  First Published Nov 3, 2022, 6:56 PM IST

Carnegie India Global Technology Summit: ನವದೆಹಲಿಯಲ್ಲಿ ನಡೆಯಲಿರುವ ಕಾರ್ನೆಗೀ ಇಂಡಿಯಾ ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆ 2022ರಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾಗವಹಿಸಿಲಿದ್ದಾರೆ


ನವದೆಹಲಿ (ನ. 03): ನವೆಂಬರ್ 29 ರಂದು ನವದೆಹಲಿಯಲ್ಲಿ ನಡೆಯಲಿರುವ  ಕಾರ್ನೆಗೀ ಇಂಡಿಯಾ (Carnegie India) ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆ 2022ರಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾದ ಎಸ್.ಜೈಶಂಕರ್ ( S Jaishankar) ಪ್ರಮುಖ ಭಾಷಣ ಮಾಡಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಜಿ20 ಒಕ್ಕೂಟದ ಅಧ್ಯಕ್ಷ ಸ್ಥಾನ ಭಾರತಕ್ಕೆ ಲಭಿಸಲಿದೆ. ಭಾರತ ಅಧ್ಯಕ್ಷ ಸ್ಥಾನ ಪಡೆಯಲು ತಯಾರಿ ನಡೆಸುತ್ತಿರುವಾಗ ಎಸ್‌ ಜೈಶಂಕರ್ ಜಾಗತಿಕ ತಂತ್ರಜ್ಞಾನ ಶೃಂಗಸಭೆ 2022ರ ಮೊದಲ ದಿನ ಭಾರತದ G20 ಶೆರ್ಪಾ ಅಮಿತಾಭ್ ಕಾಂತ್ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.  

ಶೃಂಗಸಭೆಯ ಮೊದಲ ದಿನ 'ಇಂಡಿಯಾಸ್‌ ಡಿಜಿಟಲ್ ವೇ: ದಿ ರೋಡ್ ಟು G20' ಎಂಬ ವಿಷಯದ ಮೇಲೆ ಚರ್ಚೆಗಳು ನಡೆಯಲಿವೆ. ಜತೆಗೆ ಡಿಜಿಟಲ್ ಗುರುತುಗಳು (Digital Identities), ಆರೋಗ್ಯ ಕ್ಷೇತ್ರವನ್ನು ಸುಧಾರಿಸಲು ಡಿಜಿಟಲ್ ಮೂಲಸೌಕರ್ಯಗಳ ಬಳಕೆ, ಗಡಿಯಾಚೆಗಿನ ಪಾವತಿ ವ್ಯವಸ್ಥೆಗಳು, ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸುವ ಡಿಜಿಟಲ್ ಪಬ್ಲಿಕ್‌ ಗೂಡ್ಸ್‌ (DPGs) ರಚಿಸಲು ಪಾಲುದಾರಿಕೆಗಳು ಮತ್ತು ಭಾರತದ G20 ಕಾರ್ಯಸೂಚಿಯನ್ನು ರೂಪಿಸುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆಯಾಗಲಿದೆ. 

Tap to resize

Latest Videos

ಪ್ಯಾನೆಲ್‌ನಲ್ಲಿ ಫೌಂಡೇಶನಲ್ ಆರ್ಕಿಟೆಕ್ಚರ್ಸ್ ಫಾರ್‌ ಡಿಜಿಟಲ್ ಸೊಸೈಟಿ , ಡಿಜಿಟಲ್ ಹೆಲ್ತ್ ಸೊಲ್ಯೂಷನ್ಸ್: ರೋಡ್ ಟು ಸಸ್ಟೈನಬಲ್ ಹೆಲ್ತ್‌ಕೇರ್ ಡೆಲಿವರಿ, ಸೈಬರ್-ರೆಸಿಲೆನ್ಸ್: ಸೆಕ್ಯುರಿಟಿ ಆಫ್ ದಿ ಇಂಟರ್ನೆಟ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ದಿ ವರ್ಲ್ಡ್ ನಾವು ಇನ್‌ಫ್ರಾಸ್ಟ್ರಕ್ಚರ್ ಒಳಗೊಂಡಿರಲಿದೆ.

Global Tech Summit: ನ. 29ರಿಂದ ಕಾರ್ನೆಗಿ ಇಂಡಿಯಾ ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆ

ಸಿ. ರಾಜ ಮೋಹನ್ (ಹಿರಿಯ ಫೆಲೋ, ಏಷ್ಯಾ ಸೊಸೈಟಿ ಪಾಲಿಸಿ ನೆಟ್‌ವರ್ಕ್), ನಿವೃತಿ ರೈ (ಕಂಟ್ರಿ ಹೆಡ್, ಇಂಟೆಲ್ ಇಂಡಿಯಾ & ಉಪಾಧ್ಯಕ್ಷ, ಇಂಟೆಲ್ ಫೌಂಡ್ರಿ ಸರ್ವಿಸಸ್, ಇಂಟೆಲ್ ಕಾರ್ಪೊರೇಷನ್), ಹರ್ಷ್ ವರ್ಧನ್ ಶ್ರಿಂಗ್ಲಾ (ಜಿ 20 ಮುಖ್ಯ ಸಂಯೋಜಕರು, ಭಾರತ ಸರ್ಕಾರ), ಕೀಜೋಮ್ ಎನ್‌ಗೊಡುಪ್ ಮಸ್ಸಲ್ಲಿ (ಡಿಜಿಟಲ್ ಪ್ರೋಗ್ರಾಮಿಂಗ್ ಮುಖ್ಯಸ್ಥರು , UNDP ಮುಖ್ಯ ಡಿಜಿಟಲ್ ಕಛೇರಿ), ಆರ್‌ ಎಸ್‌ ಶರ್ಮಾ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ), ಅಮನ್‌ದೀಪ್ ಸಿಂಗ್ ಗಿಲ್ (ತಂತ್ರಜ್ಞಾನದ ಯುನೈಟೆಡ್ ನೇಷನ್ಸ್ ಮುಖ್ಯ ರಾಯಭಾರಿ), ಲಿವ್ ಮಾರ್ಟೆ ನಾರ್ಡಾಗ್ (ಕೋ-ಲೀಡ್‌, ಡಿಜಿಟಲ್ ಸಾರ್ವಜನಿಕ ಸರಕುಗಳ ಒಕ್ಕೂಟ) ಕ್ಯಾಥ್ಲೀನ್ ಮೆಕ್‌ಗೋವಾನ್ (ಹಿರಿಯ ನಿರ್ದೇಶಕರು, ನೀತಿ ಮತ್ತು ವಕಾಲತ್ತು,  ಡಿಜಿಟಲ್ ಅಲೈನ್ಸ್‌ ಇಂಪ್ಯಾಕ್ಟ್ , ಯುನೈಟೆಡ್ ನೇಷನ್ಸ್ ಫೌಂಡೇಶನ್), ಮತ್ತು ಮಾರ್ಕಸ್ ಬಾರ್ಟ್ಲಿ ಜಾನ್ಸ್ (ಏಷ್ಯಾ ಪ್ರಾದೇಶಿಕ ನಿರ್ದೇಶಕ, ಸರ್ಕಾರಿ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿ, ಮೈಕ್ರೋಸಾಫ್ಟ್) ಮೊದಲ ದಿನದ ಸಂವಾದದಲ್ಲಿ ಭಾಗವಹಿಸುವ ಪ್ರಮುಖ ಭಾಷಣಕಾರರಾಗಿದ್ದಾರೆ. 

ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆ (ಜಿಟಿಎಸ್) ಕಾರ್ನೆಗೀ ಇಂಡಿಯಾದ ವಾರ್ಷಿಕ ಪ್ರಮುಖ ಶೃಂಗಸಭೆಯಾಗಿದ್ದು, ಇದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ. ಶೃಂಗಸಭೆಯಲ್ಲಿ ಉದ್ಯಮ ತಜ್ಞರು, ನೀತಿ ನಿರೂಪಕರು, ವಿಜ್ಞಾನಿಗಳು ಮತ್ತು ಪ್ರಪಂಚದಾದ್ಯಂತದ ಇತರ ವಿಷಯ ತಜ್ಜರು  '‘Geopolitics of Technology’ ವಿಷಯದ ಕುರಿತು ಚರ್ಚಿಸಲಿದ್ದಾರೆ. 

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾರತ ಮತ್ತು ವಿದೇಶಗಳಿಂದ ಪ್ರಭಾವಿ ಸಚಿವರ ಭಾಷಣಗಳು, ಪ್ಯಾನೆಲ್‌ಗಳು, ಮುಖ್ಯ ಭಾಷಣಗಳು ನಡೆಯಲಿವೆ. ಜತೆಗೆ ಸರ್ಕಾರ, ಉದ್ಯಮ, ಶೈಕ್ಷಣಿಕ ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳ ಸಂಭಾಷಣೆಗಳನ್ನೂ ಒಳಗೊಂಡಿವೆ. ಆನ್‌ಲೈನ್‌ನಲ್ಲಿ ನೋಂದಾಯಿಸುವ ಮೂಲಕ ಸಾರ್ವಜನಿಕರು ವರ್ಚುವಲ್‌ ಮೂಲಕ ಜಾಗತಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ ಭಾಗವಹಿಸಬಹುದು.

click me!