
ಬೆಂಗಳೂರು(ಜೂ.19): ಅಡ್ವೆಂಚರ್ ಬೈಕ್ ಲಾಂಚ್ ಮಾಡಿದ ಬೆನ್ನಲ್ಲೇ ಡ್ಯುಕಾಟಿ ಮೋಟಾರು ಸಂಸ್ಥೆ ಇದೀಗ ಭಾರತದಲ್ಲಿ ಡ್ಯುಕಾಟಿ ಮಲ್ಟಿಸ್ಟ್ರಾಡ 1260 ಬೈಕ್ ಬಿಡುಗಡೆ ಮಾಡಿದೆ. ಇದರ ಬೆಲೆ 15.99 ಲಕ್ಷದಿಂದ 18.06 ಲಕ್ಷ ರೂಪಾಯಿ(ಎಕ್ಸ್ ಶೋರೂಮ್). ಸದ್ಯ ಎರಡು ವಿದಧದಲ್ಲಿ ಈ ಬೈಕ್ ಲಭ್ಯವಿದೆ. ಆದ್ರೆ ಶೀಘ್ರದಲ್ಲೇ ಮತ್ತಷ್ಟು ವೇರಿಯೆಂಟ್‌ಗಳು ಲಭ್ಯವಾಗಲಿದೆ.
ನೂತನ ಡ್ಯೂಕಾಟಿ ಮಲ್ಟಿಸ್ಟ್ರಾಡ 1260 ಬೈಕ್ ಅಧುನಿಕ ತಂತ್ರಜ್ಞಾನ, ಹೊಸ ವಿನ್ಯಾಸ ಹಾಗೂ ಹೊಸ ತಾಂತ್ರಿಕತೆ ಹೊಂದಿದೆ. ಮಲ್ಟಿಸ್ಟ್ರಾಡ 1260 ಬೈಕ್ ಇನೋವೇಶನ್‌ಗಾಗಿ ಡ್ಯುಕಾಟಿ ಸಂಸ್ಥೆ ಬರೋಬ್ಬರಿ 8 ವರ್ಷಗಳನ್ನ ತೆಗೆದುಕೊಂಡಿದೆ.
ಭಾರತದ ರೋಡ್‌ಗಳಿಗೆ ತಕ್ಕಂತೆ ಮಲ್ಟಿಸ್ಟ್ರಾಡ 1260 ಬೈಕ್ ತಯಾರಿಸಲಾಗಿದೆ. 1262 ಸಿಸಿ ಇಂಜಿನ್ ಹೊಂದಿರುವ ಈ ಬೈಕ್ ಎಬಿಎಸ್ ಕಂಟ್ರೋಲ್ ಹೊಂದಿದೆ. ಇನ್ನು ಪ್ರತಿ 15 ಸಾವಿರ ಕೀಲೋಮೀಟರ್ ಪ್ರಯಾಣದ ಬಳಿಕ ಆಯಿಲ್ ಬದಲಾವಣೆ ಮಾಡಬೇಕು. ಈ ಮೂಲಕ ಇದರ ಮೈಂಟೇನ್ಸ್ ಕಾಸ್ಟ್ ಕೂಡ ದುಬಾರಿ ಬೈಕ್‌ಗಳಿಗೆ ಹೋಲಿಸಿದರೆ ಅಲ್ಪ ಮಟ್ಟಿಗೆ ಕಡಿಮೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.