
ಬೆಂಗಳೂರು(ಜೂ.17): ಬೈಕ್ ರೈಡಿಂಗ್ ಪ್ರತಿಯೊಬ್ಬರಿಗೂ ಇಷ್ಟ. ಅದರಲ್ಲೂ ಸ್ಪೋರ್ಟ್ಸ್ ಬೈಕ್, ದುಬಾರಿ ಬೈಕ್‌ಗಳೆಂದರೆ ಎಲ್ಲಿಲ್ಲದ ಪ್ರೀತಿ. ಭಾರತದ ಮಾರುಕಟ್ಟೆಯಲ್ಲಿರೋ ಅತ್ಯಂತ ದುಬಾರಿ ಬೈಕ್ ಡಿಟೇಲ್ಸ್ ಇಲ್ಲಿದೆ.
ಕವಾಸಕಿ ನಿಂಜಾ H2R:
ಬೆಲೆ: 69.80 ಲಕ್ಷ
ಭಾರತದಲ್ಲಿರೋ ಅತ್ಯಂತ ದುಬಾರಿ ಬೈಕ್ ಕವಾಸಕಿ ನಿಂಜಾ H2R.ಇದರ ಬೆಲೆ ಬರೋಬ್ಬರಿ 69.80 ಲಕ್ಷ ರೂಪಾಯಿ. ಸದ್ಯ ಕವಾಸಕಿ ನಿಂಜಾ H2Rಗೆ ಸ್ಪರ್ಧೆ ನೀಡಬಲ್ಲ ಬೈಕ್ ಭಾರತದಲ್ಲಿಲ್ಲ. ಇದರ ಪರ್ಫಾಮೆನ್ಸ್ ಸಣ್ಣ ಕಾರಿಗೆ ಸಮವಾಗಿದೆ.
ಬಿಗ್ ಡಾಗ್ ಕೆ9 ರೆಡ್:
ಬೆಲೆ: 59 ಲಕ್ಷ
ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಬೈಕ್‌ಗಳ ಪೈಕಿ ಬಿಗ್ ಡಾಗ್ ಕೆ9 ರೆಡ್ 2ನೇ ಸ್ಥಾನದಲ್ಲಿದೆ. ಬೆಲೆ 59 ಲಕ್ಷ ರೂಪಾಯಿ. 1807 ಸಿಸಿ ಇಂಜಿನ್ ಹೊಂದಿರುವ ಕೆ9 ರೆಡ್, ಬೈಕ್ ಪ್ರೀಯರನ್ನ ಆಕರ್ಷಿಸದೇ ಇರದು.
ಡ್ಯುಕಾಟಿ 1299 ಪ್ಯಾನಿಗಾಲೆ:
ಬೆಲೆ : 51.82 ಲಕ್ಷ
ದುಬಾರಿ ಬೈಕ್‌ಗಳಲ್ಲಿ 3ನೇ ಸ್ಥಾನದಲ್ಲಿರುವ ಡ್ಯುಕಾಟಿ 1299 ಪ್ಯಾನಿಗಾಲೆ ಫೈನಲ್ ಎಡಿಶನ್ ಬೆಲೆ 51.82 ಲಕ್ಷ ರೂಪಾಯಿ. 1299 ಪ್ಯಾನಿಗಾಲೆ ಬೈಕ್1285 ಸಿಸಿ ಇಂಜಿನ ಹೊಂದಿದೆ.
MV ಆಗಸ್ಟಾ F4 Rc
ಬೆಲೆ: 50.10 ಲಕ್ಷ
ಎಮ್ ವಿ ಅಗಸ್ಟಾ ಎಫ್4 ಆರ್ ಸಿ ಬೈಕ್ 998 ಸಿಸಿ ಇಂಜಿನ್ ಹೊಂದಿದೆ. 50.10 ಲಕ್ಷ ರೂಪಾಯಿ ಬೆಲೆಬಾಳುವ ಈ ಬೈಕ್, ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಹರ್ಲೇ ಡೇವಿಡ್ಸನ್ CVO
ಬೆಲೆ: 49.99 ಲಕ್ಷ
ಭಾರತದಲ್ಲಿ ಹೆಚ್ಚು ಜನಪ್ರೀಯವಾಗಿರೋ ಹರ್ಲೆ ಡೇವಿಡ್ಸನ್ CVO ಲಿಮಿಟೆಡ್ ಎಡಿಶನ್ ಬೈಕ್ 49.99 ಲಕ್ಷ ರೂಪಾಯಿ ಬೆಲೆ ಹೊಂದಿದೆ. ಈ ಬೈಕ್ ದುಬಾರಿ ಬೈಕ್‌ಗಳಲ್ಲಿ 5ನೇ ಸ್ಥಾನ ಪಡೆದಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.