Paperless Government: Dubai ವಿಶ್ವದ ಮೊದಲ ಕಾಗದರಹಿತ ಸರ್ಕಾರ : ಯುವರಾಜ ಶೇಖ್‌ ಹಮದ್‌!

By Kannadaprabha News  |  First Published Dec 13, 2021, 9:43 AM IST

*ದುಬೈ ಪ್ರಪಂಚದ ಮೊದಲ ಪೇಪರ್‌ಲೆಸ್ ಸರ್ಕಾರ!
*12 ಪ್ರಮುಖ ವಿಭಾಗಗಳಲ್ಲಿ 130 ಕ್ಕೂ ಹೆಚ್ಚು ಸೇವೆ
*ದುಬೈಗೆ ವಿಶ್ವದ ಪ್ರಮುಖ ಡಿಜಿಟಲ್ ಹಬ್ ಸ್ಥಾನಮಾನ


ದುಬೈ (ಡಿ. 03) : ಶೇ.100ರಷ್ಟುಕಾಗದರಹಿತ ಆಡಳಿತ (Paperless Government) ಜಾರಿ ಮಾಡಿದ ವಿಶ್ವದ ಮೊದಲ ದೇಶ ಎಂಬ ಖ್ಯಾತಿಗೆ ದುಬೈ (Dubai) ಪಾತ್ರವಾಗಿದೆ ಎಂದು ಯುವರಾಜ ಶೇಖ್‌ ಹಮದ್‌ ಬಿನ್‌ ಮಹಮ್ಮದ್‌ ಬಿನ್‌ ರಶೀದ್‌ ಅಲ್‌ಮಕ್ತುಮ್‌ (Sheikh Hamdan) ಶನಿವಾರ ಘೋಷಿಸಿದ್ದಾರೆ. ಈ ಮೂಲಕ ದುಬೈ 350 ಮಿಲಿಯನ್‌ ಡಾಲರ್‌ (2.65 ಲಕ್ಷ ಕೋಟಿ) ಹಣ ಮತ್ತು 1.4 ಕೋಟಿ ಮಾನವ ಗಂಟೆಗಳನ್ನು ಉಳಿತಾಯ ಮಾಡಿದೆ ಎಂದು ತಿಳಿಸಿದ್ದಾರೆ. ಇನ್ಮುಂದೆ ದುಬೈ ಸರ್ಕಾರದ ಎಲ್ಲಾ ಆಂತರಿಕ ಮತ್ತು ಬಾಹ್ಯ ವಹಿವಾಟು ಮತ್ತು ಕಾರ‍್ಯವಿಧಾನಗಳು ಶೇ.100ರಷ್ಟು ಡಿಜಿಟಲ್‌ ಆಗಿರಲಿದೆ.

‘ದುಬೈನಲ್ಲಿ ಕಾಗದರಹಿತ ಆಡಳಿತವನ್ನು 5 ಹಂತಗಳ ಮೂಲಕ ಅಳವಡಿಸಿಕೊಳ್ಳಲಾಯಿತು. 5ನೇ ಹಂತದ ವೇಳೆಗೆ ದುಬೈನ ಎಲ್ಲಾ 45 ಸರ್ಕಾರಿ ಘಟಕಗಳ ಕಾರ‍್ಯತಂತ್ರವನ್ನು ಸಂಪೂರ್ಣವಾಗಿ ಕಾಗದರಹಿತ ಮಾಡಲಾಗಿದೆ. ಈ ಘಟಕಗಳು 1,800ಕ್ಕೂ ಹೆಚ್ಚು ಡಿಜಿಟಲ್‌ (Digital Services) ಸೇವೆಗಳನ್ನು ಮತ್ತು 10,500ಕ್ಕೂ ಹೆಚ್ಚು ಪ್ರಮುಖ ವಹಿವಾಟುಗಳನ್ನು ಒದಗಿಸುತ್ತವೆ’ ಎಂದು ಯುವರಾಜ ಶೇಖ ಹಮದ್‌ ತಿಳಿಸಿದರು. ಇದೇ ವೇಳೆ ಮುಂದಿನ 5 ದಶಕಗಳಲ್ಲಿ ಡಿಜಿಟಲ್‌ ಲೈಫ್‌ ರಚಿಸಲು ಮತ್ತು ವಿಸ್ತರಿಸಲು ಸುಧಾರಿತ ಕಾರ‍್ಯತಂತ್ರಗಳನ್ನು ಜಾರಿಗೆ ತರಲು ಸರ್ಕಾರ ಯೋಚಿಸಿದೆ. ಇದರಿಂದ ದುಬೈ ನಿವಾಸಿಗಳ ನಿರೀಕ್ಷೆಗಳನ್ನು ಪೂರೈಸಲು ಸರ್ಕಾರಕ್ಕೆ ನೆರವಾಗುತ್ತದೆ ಎಂದು ಹೇಳಿದರು. ಅಮೆರಿಕ, ಬ್ರಿಟನ್‌, ಯುರೋಪ್‌ ಮತ್ತು ಕೆನಡಾ ಸಹ ಡಿಜಿಟಲ್‌ ಆಡಳಿತ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ.

Tap to resize

Latest Videos

undefined

 

We are proud to announce that as of today, the government of Dubai has become the world's first paperless government. pic.twitter.com/d1aDHEDgOC

— Hamdan bin Mohammed (@HamdanMohammed)

 

ದುಬೈ ವಿಶ್ವದ ಪ್ರಮುಖ ಡಿಜಿಟಲ್ ಹಬ್!

"ಈ ಸಾಧನೆಯಿಂದ ದುಬೈ ವಿಶ್ವ ಪ್ರಮುಖ ಡಿಜಿಟಲ್ ಹಬ್ (Hub) ಸ್ಥಾನಮಾನವನ್ನು ಪಡೆದುಕೊಳ್ಳಲಿದೆ  ಮತ್ತು ಗ್ರಾಹಕರಿಗೆ ಸುಲಭವಾಗುವಂತೆ  ಸರ್ಕಾರಿ ಕಾರ್ಯಾಚರಣೆಗಳು ಮತ್ತು ಸೇವೆಗಳನ್ನು ವಿನ್ಯಾಸಗೊಳಿಸುವದರಿಂದ ದುಬೈ ರೋಲ್ ಮಾಡೆಲ್ (Role Model) ಆಗಿ ಹೊರ ಹೊಮ್ಮಲಿದೆ" ಎಂದು ಶೇಖ್‌ ಹಮದ್‌ ಹೇಳಿದರು.

ಇದನ್ನೂ ಓದಿ: Complaint Filed Against Deepika Padukone: ದೀಪಿಕಾರಿಂದ ದುಬೈ ಉದ್ಯಮಿಗೆ ಕೋಟಿಗಟ್ಟಲೆ ವಂಚನೆ ?

ದುಬೈ ಪೇಪರ್‌ಲೆಸ್ ಸ್ಟ್ರಾಟಜಿಯನ್ನು ಐದು ಹಂತಗಳಲ್ಲಿ ಅಳವಡಿಸಲಾಯಿತು. ಇದು ಹಂತ ಹಂತವಾಗಿ ದುಬೈ ಸರ್ಕಾರದ  ವಿಭಿನ್ನ  ಇಲಾಖೆಗಳ  ಡಿಜಿಟಲಿಕರಣಕ್ಕೆ ಸಾಧ್ಯವಾಯಿತು. ಐದನೇ ಹಂತದ ಅಂತ್ಯದ ವೇಳೆಗೆ, ಎಮಿರೇಟ್‌ನಲ್ಲಿರುವ ಎಲ್ಲಾ 45 ಸರ್ಕಾರಿ ಘಟಕಗಳಲ್ಲಿ ಡಿಜಿಟಲ್ ಕಾರ್ಯತಂತ್ರವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಯಿತು. ಈ ಘಟಕಗಳು 1,800 ಕ್ಕೂ ಹೆಚ್ಚು ಡಿಜಿಟಲ್ ಸೇವೆಗಳನ್ನು ಮತ್ತು 10,500 ಕ್ಕೂ ಹೆಚ್ಚು ಪ್ರಮುಖ ವಹಿವಾಟುಗಳನ್ನು ಒದಗಿಸುತ್ತವೆ.

12 ಪ್ರಮುಖ ವಿಭಾಗಗಳಲ್ಲಿ 130 ಕ್ಕೂ ಹೆಚ್ಚು ಸ್ಮಾರ್ಟ್ ಸಿಟಿ ಸೇವೆ

ವಿವಿಧ ಇಲಾಕೆಗಳ  ನಡುವಿನ ಸಹಯೋಗ ಮತ್ತು ಏಕೀಕರಣದಿಂದ ಗ್ರಾಹಕರಿಗೆ ಒದಗಿಸುವ  ಸೇವೆಗಳನ್ನು ಡಿಜಿಟಲ್‌ ರೂಪದಲ್ಲಿ ನೀಡಲು ಸಾಧ್ಯವಾಯಿತು. ಇದರಿಂದ ಕಾಗದದ ಬಳಕೆಯನ್ನು 336 ಮಿಲಿಯನ್ ಪೇಪರ್‌ಗಳಷ್ಟು ಕಡಿತಗೊಳಿಸಿದೆ ಎಂದು ಸರ್ಕಾರ ತಿಳಿಸಿದೆ. ಈ ಮೂಲಕ ದುಬೈ 350 ಮಿಲಿಯನ್‌ ಡಾಲರ್‌ (2.65 ಲಕ್ಷ ಕೋಟಿ) ಹಣ ಮತ್ತು 1.4 ಕೋಟಿ ಮಾನವ ಗಂಟೆಗಳನ್ನು ಉಳಿತಾಯ ಮಾಡಿದೆ.

ಇದನ್ನೂ ಓದಿ: Gaganyaan 2023: ಗಗನಯಾನಕ್ಕೂ ಮುನ್ನ ಮೊದಲ ಮಾನವ ರಹಿತ ಮಿಷನ್ ಉಡಾವಣೆ!

ದುಬೈ ಸರ್ಕಾರದಲ್ಲಿ ಸಂಪೂರ್ಣ ಡಿಜಿಟಲೀಕರಣವು  ನಿವಾಸಿಗಳಿಗೆ ಸ್ಮಾರ್ಟ್ ಸಿಟಿ ಅನುಭವವನ್ನು ಉತ್ಕೃಷ್ಟಗೊಳಿಸಲಿದೆ. ಕಾಗದದ ವಹಿವಾಟುಗಳು ಮತ್ತು ದಾಖಲೆಗಳ ಅಗತ್ಯವನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ. ಇದರಿಂದ ಗ್ರಾಹಕರಿಗೆ ಹಸ್ತಾಂತರಿಸಬೇಕಾದ ಅಥವಾ ಸರ್ಕಾರಿ ಘಟಕಗಳಾದ್ಯಂತ ಉದ್ಯೋಗಿಗಳ ನಡುವೆ ವಿನಿಮಯ ಮಾಡಿಕೊಳ್ಳಬೇಕಾದ ಕಾಗದ ಪತ್ರಗಳಿಗೆ ಕಡಿವಾಣ ಬೀಳಲಿದೆ. ಡಿಜಿಟಲೀಕರಣವು ದುಬೈನೌ (DubaiNow) ಅಪ್ಲಿಕೇಶನ್ ಮೂಲಕ ನಿವಾಸಿಗಳಿಗೆ  ಅತ್ಯತ್ತಮ ಸೇವೆ ಒದಗಿಸಲು ಸಹಾಯ ಮಾಡಲಿದೆ. ಇದು 12 ಪ್ರಮುಖ ವಿಭಾಗಗಳಲ್ಲಿ 130 ಕ್ಕೂ ಹೆಚ್ಚು ಸ್ಮಾರ್ಟ್ ಸಿಟಿ ಸೇವೆಗಳನ್ನು ನೀಡಲಿದೆ ಎಂದು ಸರ್ಕಾರ ತಿಳಿಸಿದೆ.

click me!