Acer Aspire Vero: ಲ್ಯಾಪ್‌ಟ್ಯಾಪ್ ಲಾಂಚ್, ಬೆಲೆ ಎಷ್ಟು ಗೊತ್ತಾ?

By Suvarna News  |  First Published Dec 12, 2021, 3:15 PM IST
  • ಈ ಲ್ಯಾಪ್‌ಟ್ಯಾಪ್‌ಗೆ ಶೇ.30ರಷ್ಟು ಪೋಸ್ಟ್ ಕಂನ್ಸೂಮರ್ ರಿಸೈಕಲ್ಡ್ (PCR) ಪ್ಲ್ಯಾಸ್ಟಿಕ್ ಬಳಸಲಾಗಿದೆ
  • 11ನೇ ಜನರೇಷನ್ ಇಂಟೆಲ್ ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿದೆ.
  • ವಿಂಡೋಸ್ 11 ಹೋಮ್ ಎಡಿಷನ್ ಒಎಸ್ ಆಧರಿತವಾಗಿದೆ ಈ  ಹೊಸ ಲ್ಯಾಪ್‌ಟ್ಯಾಪ್

ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನದಲ್ಲಿ ವಿಶೇಷ ಪರಿಣತಿಯನ್ನು ಹೊಂದಿರುವ ತೈವಾನ್ (Taiwan) ಮೂಲದ ಏಸರ್ (Acer Inc.) ಕಂಪನಿ ತನ್ನ ಲ್ಯಾಪ್‌ಟ್ಯಾಪ್, ಡೆಸ್ಕ್‌ಟಾಪ್, ಕ್ರೋಮ್‌ಬುಕ್ಸ್, ಮಾನಿಟರ್ಸ್ ಸಾಧನಗಳ ಮೂಲಕ ವಿಶ್ವದೆಲ್ಲೆಡೆ ಗ್ರಾಹಕ ವಲಯವನ್ನು ಸೃಷ್ಟಿಸಿಕೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಏಸರ್ ಕಂಪನಿ ತನ್ನದೇ ಪಾಲು ಹೊಂದಿದ್ದು, ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇರುತ್ತದೆ. ಇದೀಗ,  ಏಸರ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ಹೊಸ ಏಸರ್ ಅಸ್ಪೈರ್ ವೆರೋ (Acer Aspire Vero) ಲ್ಯಾಪ್‌ಟ್ಯಾಪ್ ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟ್ಯಾಪ್ ವಿಶೇಷತೆ ಏನಂದರೆ- ಇದರ ತಯಾರಿಕೆಗೆ ಕಂಪನಿಯು ಶೇ.30ರಷ್ಟು ಪೋಸ್ಟ್ ಕಂಜೂಮರ್ ರಿಸೈಕಲ್ಡ್(PCR) ಪ್ಲ್ಯಾಸ್ಟಿಕ್ ಚಾಸೀಸ್ ಬಳಸಿಕೊಂಡಿದೆ. ನೀವು ಇದನ್ನು ಕೀಬೋರ್ಡ್ ಹಾಗೂ ಲ್ಯಾಪ್‌ಟ್ಯಾಪ್ ಅಂಚಿನಲ್ಲಿ ಕಾಣಬಹುದಾಗಿದೆ. ಭಾರತದಲ್ಲಿ ಬಿಡುಗಡೆಯಾಗಿರುವ ಈ ಹೊಸ ಲ್ಯಾಪ್‌ಟ್ಯಾಪ್ 11ನೇ ಜನರೇಷನ್ ಇಂಟೆಲ್ ಕೋರ್ ಪ್ರೊಸೆಸರ್‌ನೊಂದಿಗೆ ಬರುತ್ತದೆ. ಈ ಲ್ಯಾಪ್‌ಟ್ಯಾಪ್ 15.6 ಇಂಚ್ ಎಲ್‌ಸಿಡಿ ಪ್ರದರ್ಶಕವನ್ನು ಒಳಗೊಂಡಿದ್ದು, 1.8 ಕೆಜಿ ತೂಕವನ್ನುಹೊಂದಿದೆ. ವಿಂಡೋಸ್ 11 ಹೋಮ್ ಎಡಿಷನ್ ಒಎಸ್ ಆಧರಿತವಾಗಿದೆ.

ಇಷ್ಟು ಮಾತ್ರಲ್ಲದೇ ಈ ಏಸರ್ ಅಸ್ಪೈರ್ ವೆರೋ (Acer Aspire Vero) ಲ್ಯಾಪ್‌ಟ್ಯಾಪ್ 4.50GHz quad-core Intel Core i5-1155G7 ಪ್ರೊಸೆಸರ್ ಮೂಲಕ ರನ್ ಆಗುತ್ತದೆ. ಈ ಪ್ರೊಸೆಸರ್  DDR4 RAM ಮತ್ತು a 512GB NVMe SSDನ 8 ಜಿಬಿ ರ್ಯಾಮ್‌ನೊಂದಿಗೆ ಸಂಯೋಜಿತಗೊಂಡಿದೆ. ಕಂಪನಿಯ ಹೇಳಿಕೊಂಡಿರುವ ಪ್ರಕಾರ, ಈ ಲ್ಯಾಪ್‌ಟ್ಯಾಪ್ 12 ಜಿಬಿ ರ್ಯಾಮ್‌ ವಿಸ್ತರಣೆಗೆ ಸಪೋರ್ಟ್ ಮಾಡುತ್ತದೆ. ಜತೆಗೆ, ಈ ಲ್ಯಾಪ್‌ಟ್ಯಾಪ್ ಐರಿಸ್ ಎಕ್ಸ್ ಇ ಗ್ರಾಫಿಕ್ಸ್‌ಗೂ ಸಪೋರ್ಟ್ ಮಾಡುತ್ತದೆ. ಮೇಲ್ನೋಟಕ್ಕೆ ಅತ್ಯಾಧುನಿಕ ಫೀಚರ್‌ಗಳನ್ನು ಮತ್ತು ತಾಂತ್ರಿಕ ಸಂಗತಿಗಳನ್ನು ಒಳಗೊಂಡಿರುವುದು ಗೊತ್ತಾಗುತ್ತದೆ. 

Latest Videos

undefined

Most Downloaded App: 2021ರಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾದ ಆ್ಯಪ್ : ಟಿಕ್ ಟಾಕ್‌ಗೆ ಅಗ್ರಸ್ಥಾನ! 

ಏಸರ್ ಅಸ್ಪೈರ್ ವೆರೋ (Acer Aspire Vero) ಲ್ಯಾಪ್‌ ಟ್ಯಾಪ್‌ನಲ್ಲಿ ನೀವು ವಿಂಡೋಸ್ ಹೆಲ್ಲೋ (Windows Hello) ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಬ್ಯಾಕ್‌ಲಿಟ್ ಕೀ ಬೋರ್ಡ್ ನೋಡಬಹುದು. ಜತೆಗೆ, ಕಂಪನಿಯು ಈ ಲ್ಯಾಪ್‌ಟ್ಯಾಪ್‌ಗೆ ಎಚ್‌ಡಿ (720p) ವೆಬ್‌ಕ್ಯಾಮ್ ನೀಡಿದೆ. ಇದು ಹಾರ್ಡ್‌ಬೇಸ್ಡ್ ಪ್ರೈವಸಿ ಸ್ವಿಚ್ ಆಧರಿತವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಕಂಪನಿಯ ಹೇಳಿಕೆಯಾಗಿದೆ. 

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗೆಯಾಗಿರುವ ಏಸರ್ ಅಸ್ಪೈರ್ ವೆರೋ (Acer Aspire Vero) 3-ಸೆಲ್ 48Whr ಬ್ಯಾಟರಿಯನ್ನು ಪ್ಯಾಕ್ ಒಳಗೊಂಡಿದೆ ಮತ್ತು 10 ಗಂಟೆಗಳ ಬ್ಯಾಟರಿ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಬ್ಯಾಟರಿ  65 ವ್ಯಾಟ್ ಸ್ಪೀಡ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ, ಈ ಲ್ಯಾಪ್‌ಟ್ಯಾಪ್ ವೈಫೈ 6, ಬ್ಲೂಟೂತ್ ವಿ5.1 ಹೊಂದಿದೆ. ಇದರ ಜೊತೆಗೆ ಗಿಗಾಬೈಟ್  ಇದರ್ನೆಟ್ ಸಪೋರ್ಟ್ ಮಾಡುತ್ತದೆ. ಎಚ್‌ಡಿಎಂಐ ಪೋರ್ಟ್, ಒಂದು ಯುಎಸ್‌ಬಿ ಪೋರ್ಟ್, ಯುಎಸ್ಬಿ 3.2 ಪೋರ್ಟ್ ಸೇರಿ ಇನ್ನಿತರ ಸೌಲಭ್ಯಗಳನ್ನು ಒಳಗೊಂಡಿದೆ.

iQoo Neo Series Launch Event: ಡಿ.20ಕ್ಕೆ NEO 5S, NEO 5 SE ಸ್ಮಾರ್ಟ್‌ಫೋನ ಲಾಂಚ್?

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಏಸರ್ ಅಸ್ಪೈರ್ ವೆರೋ (Acer Aspire Vero) ಲ್ಯಾಪ್‌ಟ್ಯಾಪ್ ಬೆಲೆ ಅಂದಾಜು 79,999 ರೂ.ನಿಂದ ಆರಂಭವಾಗುತ್ತದೆ. ಕಂಪನಿಯ ವೆಬ್‌ಸೈಟ್‌ನಲ್ಲಿ ತಿಳಿಸಿರುವ ಮಾಹಿತಿಯ ಪ್ರಕಾರ, ಒಂದು ವರ್ಷದವರೆಗೆ ಆಕ್ಸಿಡೆಂಟಲ್ ಡ್ಯಾಮೇರ್ ಪ್ರೊಟೆಕ್ಷನ್ ಮತ್ತು ಎರಡು ವರ್ಷ ವಿಸ್ತರಿತ ವಾರಂಟಿಯನ್ನು ನೀಡುತ್ತದೆ. ಇದಕ್ಕೆ ಗ್ರಾಹಕರು 899 ರೂ. ನೀಡಬೇಕಾಗುತ್ತದೆ.  ಏಸರ್ ಆನ್‌ಲೈನ್ ಸ್ಟೋರ್, ಏಸರ್ ಎಕ್ಸ್‌ಕ್ಲೂಸಿವ್ ಸ್ಟೋರ್ಸ್ ಮತ್ತು ಇತರ ಅಧಿಕೃತ ರಿಟೇಲ್ ಸ್ಟೋರ್‌ಗಳಲ್ಲೂ ಈ ಏಸರ್ ಅಸ್ಪೈರ್ ವೆರೋ ಲ್ಯಾಪ್‌ಟ್ಯಾಪ್ ಖರೀದಿಸಬಹುದಾಗಿದೆ.

click me!