
ಮಕ್ಕಳು ಮಲಗುವ ವೇಳೆ ಮೊಬೈಲ್ ಅಥವಾ ಟ್ಯಾಬ್‌ಲೆಟ್‌ಗಳ ಬಳಕೆ ಮಾಡುವುದರಿಂದ ಅಸಮರ್ಪಕ ನಿದ್ರೆಯ ಸಮಸ್ಯೆ ಉಂಟಾಗಬಹುದು ಅಲ್ಲದೇ, ಬೊಜ್ಜು ಹಾಗೂ ಇತರ ಆರೋಗ್ಯ ಸಮಸ್ಯೆಗಳೂ ಕಾಡಬಹುದು ಎಂದು ಬ್ರಿಟನ್‌ನ ಕಾರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಪತ್ತೆಮಾಡಿದ್ದಾರೆ.
1,25,198 ಮಕ್ಕಳನ್ನು ಅಧ್ಯಯನಕ್ಕೊಳಪಡಿಸಿ ಅವರ ನಿದ್ರೆಯ ಪ್ರಮಾಣ ಮತ್ತು ಗುಣಮಟ್ಟದ ಬಗ್ಗೆ 20 ರೀತಿಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ ಎಂದು ವಿವಿಯ ಬೆನ್ ಕಾರ್ಟರ್ ತಿಳಿಸಿದ್ದಾರೆ. ಶೇ.72ರಷ್ಟು ಮಕ್ಕಳು ಹಾಗೂ ಶೇ. 89ರಷ್ಟು ಯುವಕರು ಮಲಗುವ ಸುತ್ತಮುತ್ತ ಕನಿಷ್ಠ ಒಂದು ಗ್ಯಾಜೆಟನ್ನು ಹೊಂದಿರುತ್ತಾರೆ ಎಂದು ಕಾರ್ಟರ್ ತಿಳಿಸಿದ್ದಾರೆ.
ಮಕ್ಕಳು ಮಲಗುವ ವೇಳೆ ಗ್ಯಾಜೆಟ್‌ಗಳಿಂದ ದೂರವಿರುವಂತೆ ಪೋಷಕರು, ಶಿಕ್ಷಕರು ಮತ್ತು ಮಕ್ಕಳ ತಜ್ಞರು ಅವರ ಅಭ್ಯಾಸವನ್ನು ದೂರಾಗಿಸುವಂಥ ಹವ್ಯಾಸಗಳನ್ನು ರೂಢಿಸಬೇಕು ಎಂದಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.