ಹದಿಹರೆಯದವರಿಗೆ ಫೇಸ್ಬುಕ್ ತಂದಿರುವ ಹೊಸ ಆ್ಯಪ್ ಇದೀಗ ಆ್ಯಂಡ್ರಾಯ್ಡ್'ನಲ್ಲೂ ಲಭ್ಯ

By Suvarna Web DeskFirst Published Oct 30, 2016, 3:43 PM IST
Highlights

"ಸ್ನ್ಯಾಪ್'ಚಾಟ್" ಆ್ಯಪ್'ಗೆ ಪ್ರತಿಯಾಗಿ ಫೇಸ್ಬುಕ್ ಈ ಹೊಸ ಆ್ಯಪನ್ನು ಅಣಿಗೊಳಿಸಿದೆ.

ನವದೆಹಲಿ(ಅ. 30): ಫೇಸ್ಬುಕ್ ಸಂಸ್ಥೆಯು ಹದಿಹರೆಯದವರಿಗೆಂದೇ ತಯಾರಿಸಿದ "ಲೈಫ್'ಸ್ಟೇಜ್" ಎಂಬ ಆ್ಯಪ್ ಇನ್ಮುಂದೆ ಆ್ಯಂಡ್ರಾಯ್ಡ್ ಫೋನ್'ಗೂ ಲಭ್ಯವಿರಲಿದೆ. ಎರಡು ತಿಂಗಳ ಹಿಂದೆ ಐಫೋನ್'ಗೆ ಈ ಆ್ಯಪನ್ನು ಬಿಡುಗಡೆ ಮಾಡಲಾಗಿತ್ತು. ಅಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದರಿಂದ ಆ್ಯಂಡ್ರಾಯ್ಡ್ ವರ್ಷನ್'ನ "ಲೈಫ್ ಸ್ಟೇಜ್" ಆ್ಯಪ್ ಸಿದ್ಧಗೊಳಿಸಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಖ್ಯಾತವಾಗುತ್ತಿರುವ "ಸ್ನ್ಯಾಪ್'ಚಾಟ್" ಆ್ಯಪ್'ಗೆ ಪ್ರತಿಯಾಗಿ ಫೇಸ್ಬುಕ್ ಈ ಹೊಸ ಆ್ಯಪನ್ನು ಅಣಿಗೊಳಿಸಿದೆ.

ಏನಿದು ಲೈಫ್'ಸ್ಟೇಜ್ ಆ್ಯಪ್?
21 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರಿಗೆ ಮಾತ್ರ ಈ ಆ್ಯಪ್ ಲಭ್ಯವಿರುತ್ತದೆ. ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆಂದೇ ತಯಾರಿಸಲಾದ ಆ್ಯಪ್ ಇದು. ಇದೊಂದು ರೀತಿ ವಿದ್ಯಾರ್ಥಿಯ ವಿಡಿಯೋ ಡೈರಿ ಇದ್ದಂತೆ. ನೆಚ್ಚಿನ ಹಾಡು, ಬೆಸ್ಟ್ ಫ್ರೆಂಡ್ ಇತ್ಯಾದಿ ಕೆಲ ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರ ನೀಡಿ ವಿಡಿಯೋ ಪ್ರೊಫೈಲ್ ಕ್ರಿಯೇಟ್ ಮಾಡಬಹುದು.

click me!