
ಮುಂಬೈ(ನ.18): ವಾಟ್ಸಪ್ ತನ್ನ ವಿಡಿಯೋ ಕಾಲಿಂಗ್ ಆವೃತ್ತಿಯನ್ನು ಪರಿಶೀಲನೆಯ ಹಂತದಲ್ಲಿ ಇಟ್ಟಿದ್ದು, ಅದನ್ನು ತನ್ನ ಬಳಕೆದಾರರಿಗೆ ಮುಕ್ತಗೊಳಿಸಿಲ್ಲ, ಆದರೆ ಬಿಟಾ ವರ್ಷನ್ ಬಳಸಲು ಸಿದ್ಧರಿರುವವರಿಗೆ ಮಾತ್ರ ಅಪ್ ಡೇಟ್ ನೀಡುತ್ತಿದೆ.
ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಹ್ಯಾಕರ್ ಗಳು ವಾಟ್ಸಪ್ ನಲ್ಲಿ ಮೇಸೆಜ್ ಮೂಲಕ ವಾಟ್ಸಪ್ ವಿಡಿಯೋ ಕಾಲಿಂಗ್ ಅನ್ನು ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಎಂಬ ಸಂದೇಶವನ್ನು ಹರಡುತ್ತಿದ್ದಾರೆ.
ನೀವೇನಾದರು ವಿಡಿಯೋ ಕಾಲಿಂಗ್ ಆಸೆಗೆ ಬಿದ್ದು ಆ ಮೇಸೆಜ್ ಓಪನ್ ಮಾಡಿ, ಅಲ್ಲಿ ಕೇಳಿರುವ ನಿಮ್ಮ ವಿವರಗಳನ್ನು ನೀಡದರೆ ನಿಮ್ಮ ಮೊಬೈಲ್ ಹ್ಯಾಕ್ ಆಗುವುದು ಖಂಡಿತ. ನಂತರ ನಿಮ್ಮ ಫೋನಿನಲ್ಲಿರುವ ಎಲ್ಲಾ ಮಾಹಿತಿಗಳು ಹ್ಯಾಕರ್ಸ ಪಾಲಗಲಿದೆ.
ವಾಟ್ಸಪ್ ಯಾವುದಾರು ಅಪ್ಡೇಟ್ ಬಿಟ್ಟರೆ ಅದನ್ನು ಯಾವುದೇ ರೀತಿಯಲ್ಲೂ ಮೇಸೆಜ್ ಮೂಲಕ ಕಳಿಸುವುದಿಲ್ಲ, ಬದಲಿಗೆ ಗೂಗಲ್ ಪ್ಲೇಸ್ಟೋರಿನಲ್ಲಿ ಮಾತ್ರ ಇರುತ್ತದೆ ಹಾಗಾಗಿ ಬಳಕೆದಾರು ಈ ರೀತಿಯ ಮೋಸದ ಜಾಲಕ್ಕೆ ಸಿಲುಕದೆ ಎಚ್ಚರ ವಹಿಸಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.